ನಾಯಿ ಸಾಕಿದರೆ ನಮಗೇನು ಪ್ರಯೋಜನ ಎನ್ನುವರಿಗೆ ಸಿಹಿಸುದ್ದಿ; ಮನೆಯಲ್ಲಿ ನಾಯಿ ಸಾಕಿದರೆ ನಿಮ್ಮ ಹೃದಯಕ್ಕೆ ಕಾಯಿಲೆ ಬರೋದಿಲ್ಲವಂತೆ..!

0
1050

ಮಾನವನಿಗೆ ಅತಿ ಹತ್ತಿರವಾದ ಪ್ರಾಣಿ ಎಂದರೆ ನಾಯಿ ಆಗಿದೆ. ಇದು ಮೊದಲಿನಿಂದ ನಾಯಿ ಸಾಕುವ ರೂಡಿ ಬಂದಿದ್ದು. ಕೆಲವರಂತೂ ಮನೆಯಲ್ಲಿ ನಾಯಿಗೆ ಪ್ರೀತಿಸಿದಷ್ಟು ಹೆಂಡತಿ ಮಕ್ಕಳಿಗೂ ಇಷ್ಟಪಡುವುದಿಲ್ಲ ಅಷ್ಟೊಂದು ಹಚ್ಚಿಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ನಾಯಿಯನ್ನು ಹಿಂದೂ ಧರ್ಮದಲ್ಲಿ ದೇವರಿಗೆ ಹೋಲಿಸಲಾಗಿದೆ. ನಾಯಿಯನ್ನು ಪ್ರಾಮಾಣಿಕತೆಗೂ ಹೋಲಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಕಪ್ಪು ಬಣ್ಣದ ನಾಯಿ ಧನವೃದ್ಧಿಗೆ ಕಾರಣವಾಗುತ್ತದೆಯಂತೆ. ಇದೆಲ್ಲ ಹಲವು ಕಾರಣಗಳಿಂದ ಸಾಕುವ ನಾಯಿಯಿಂದ ಹೃದಯ ಆರೋಗ್ಯವಾಗಿ ಇರುತ್ತಂತೆ.

Also read: ಹೃದಯಾಗಾತಕ್ಕೆ ಕಾರಣವಾಗಿರುವ ರಕ್ತದಲ್ಲಿ ಕೊಬ್ಬು ಸೇರುವಿಕೆಯನ್ನು ಈ ಒಂದು ಸರಳ ಉಪಾಯದಿಂದ ನಿಲ್ಲಿಸಿ!!

ನಾಯಿ ಸಾಕಿದರೆ ಹೃದಯಕ್ಕೆ ಒಳ್ಳೆಯದೇ?

ಹೌದು ಬಹುತೇಕರಿಗೆ ನಾಯಿ ಅಂದ್ರೇನೆ ಇಷ್ಟ, ಅದಕ್ಕಾಗಿಯೇ ಕೆಲವು ಸನ್ನಿವೇಶಗಳನ್ನು ನೋಡಿರಬೇಕು, ತಮ್ಮ ಪುಟ್ಟ ಮಗು ರಸ್ತೆಯಲ್ಲಿ ನಡಿದುಕೊಂಡು ಬರುತ್ತದೆ. ಆದರೆ ತಂದೆ ತಾಯಿಗಳು ಮಗು ಬಿಟ್ಟು ನಾಯಿಯನ್ನು ಎತ್ತಿಕೊಂಡು ಬರುತ್ತಾರೆ. ಅಂದರೆ ಮಗುಗಿಂತ ನಾಯಿಯೇ ಮುಖ್ಯವಾಗಿದೆ. ಜನರಿಗೆ ಎನ್ನುವ ಮಾತುಗಳು ಕೆಲಿಬರುತ್ತೆ. ಅದಕ್ಕಾಗಿಯೇ ಒಂದು ಸಂಶೋಧನೆ ನಡೆದಿದ್ದು ಯಾಕೆ ಜನರು ನಾಯಿಯನ್ನು ಪ್ರೀತಿಸುತ್ತಾರೆ? ನಾಯಿಗಳಿಂದ ಮನುಷ್ಯನಿಗೆ ಏನು ಲಾಭ ಎನ್ನುವ ಪ್ರಶ್ನೆ ಹುಟ್ಟಿದ್ದು ಅದಕ್ಕೆ ಸಂಶೋಧನೆ ಉತ್ತರ ತಿಳಿಸಿದೆ.

Also read: ಸರಿಯಾಗಿ ನಿದ್ದೆ ಮಾಡದೆ ಇದ್ರೆ ಎಷ್ಟೊಂದು ತೊಂದರೆ ಗೊತ್ತಾ? ರಾತ್ರಿ ವೇಳೆ ಏಳು ಗಂಟೆಗಿಂತ ಕಡಿಮೆ ನಿದ್ದೆ ಮಾಡಿದರೆ ಹೃದಯದ ಕಾಯಿಲೆ ಬರಬಹುದಂತೆ..

ಸಂಶೋಧನೆಯಂತೆ

ನಾಯಿ ಸಾಕಿದರೆ ಹೃದಯ ಸಂಬಂಧಿ ರೋಗಗಳೂ ಕಡಿಮೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಅದರಲ್ಲೂ ನಗರಗಳಲ್ಲಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಪ್ರಯೋಜನ ಹೆಚ್ಚು ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ನಾಯಿ ಮಾಲಿಕರಿಗೆ ರಕ್ತದೊತ್ತಡ ಕಡಿಮೆ ಇರುತ್ತದೆ. ಕಾರಣ ಸಾಕಿದ ನಾಯಿಯನ್ನು ಹೊರಗಡೆಗೆ ಕರೆದುಕೊಂಡು ಹೋಗುವ ನೆವದಲ್ಲಾದರೂ ಅದರ ಯಜಮಾನ ಅಥವಾ ಮನೆಯವರು ಒಂದಷ್ಟು ವಾಕ್ ಮಾಡುತ್ತಾರೆ. ನಾಯಿ ಓಡಿದರೆ ಅವರೂ ಓಡುತ್ತಾರೆ. ಇದರಿಂದ ದೈಹಿಕ ಚಟುವಟಿಕೆ ಸಿಗುತ್ತದೆ. ಜತೆಗೆ ಮನಸ್ಸಿಗೆ ಒಂದಷ್ಟು ಆನಂದವೂ ಸಿಗುತ್ತದೆ.

Also read: ಬಿಯರ್ ಪ್ರಿಯರಿಗೊಂದು ಸಿಹಿಸುದ್ದಿ; ಮಿತವಾಗಿ ವೈನ್​ ಅಥವಾ ಬಿಯರ್​ ಕುಡಿದರೆ ಹೃದಯ ಸಂಬಂಧಿ ಕಾಯಿಲೆಗೆ ರಾಮಬಾಣವಾಗುತ್ತಂತೆ!!

ಸೈಂಟ್ ಅನ್ನೆ ವಿವಿಯ ಸಂಶೋಧಕರ ತಂಡ 2 ಸಾವಿರ ಮಂದಿಯನ್ನು ನಾಯಿ ಹೊಂದಿದವರು ಮತ್ತು ಹೊಂದದವರು ಎಂದು ಪ್ರತ್ಯೇಕಿಸಿ ಸಮೀಕ್ಷೆ ನಡೆಸಿ ದೇಹಕ್ಕೆ, ಹೃದಯಕ್ಕೆ ಬಹಳಷ್ಟು ಲಾಭವಾಗುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದೂ ಹೇಳಿದ್ದಾರೆ. ವೈಜ್ಞಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡವರೆಲ್ಲ 24 ರಿಂದ 65 ವರ್ಷ ವಯಸ್ಸಿನವರು. ಇವರಿಗೆ ಹೃದಯದ ಸಮಸ್ಯೆಯಿದ್ದು, ನಾಯಿಯನ್ನು ವಾಕಿಂಗ್ ಮಾಡಿಸುವ, ಅದರೊಂದಿಗೆ ಆಡುವ ಇತ್ಯಾದಿ ಕ್ರಿಯೆಗಳಿಂದ ಹೃದಯ ಹೆಚ್ಚು ಗೆಲುವಾಗಲು ಕಾರಣವಾಗಿದೆ ಎಂದು ಹೇಳಿದ್ದಾರಂತೆ.

Also read: ನೀವೂ ಬೆಳಗ್ಗಿನ ಉಪಾಹಾರ ಮಾಡೋದಿಲ್ಲ? ಹಾಗಿದ್ರೆ ನಿಮಗೆ ಹೃದಯಾಘಾತ ಸಮಸ್ಯೆ ಬರಬಹುದು ಎಚ್ಚರ!!

ಒಟ್ಟಾರೆಯಾಗಿ ನಾಯಿ ಸಾಕುವ ಮುನ್ನ, ಯಾವ ಜಾತಿಯ ನಾಯಿ ಮರಿ ತಂದರೆ ಒಳ್ಳೆಯದು. ನಾಯಿಯಿಂದ ನಮಗೆ ಅವಶ್ಯಕತೆ ಏನು? ಆ ನಾಯಿ ನನ್ನ ಮನೆಗೆ ಹಾಗೂ ಜೀವನ ಶೈಲಿಗೆ ಹೊಂದಿಕೊಳ್ಳುತ್ತದೆಯೇ, ಆರ್ಥಿಕ ಸ್ಥಿತಿಗೆ ಯಾವ ನಾಯಿ ಸೂಕ್ತ, ನಾಯಿಯ ಗಾತ್ರ ಎಷ್ಟಿರಬೇಕು? ಎನ್ನುವ ಲೆಕ್ಕಹಾಕುವರು ನಾಯಿಯಿಂದ ಆರೋಗ್ಯಕ್ಕೆ ಏನು ಲಾಭವೆಂದು ಎಂದು ಯೋಚನೆ ಮಾಡಿಲ್ಲ ಅನಿಸುತ್ತೆ. ಅದಕ್ಕಾಗಿಯೇ ನಾಯಿ ಪ್ರಿಯರಿಗೆ ಸಂಶೋಧನೆ ಒಳ್ಳೆಯ ಅಭಿಪ್ರಾಯ ತಿಳಿಸಿದೆ.