ಕೆಲವೇ ನಿಮಿಷದಲ್ಲಿ ಸಿಗಲಿದೆ ಪಾನ್ ಸಂಖ್ಯೆ

0
1248

ಇಂದು ಅನೇಕ ಸಂದರ್ಭಗಳಲ್ಲಿ ಪಾನ್ ಕಾರ್ಡ್ ಕಡ್ಡಾಯವಾಗಿದ್ದು, ಹತ್ತು ಅಂಕೆಗಳ ಶಾಶ್ವತ ಖಾತೆ ಸಂಖ್ಯೆ(PAN) ಅಥವಾ ಪಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆ ಒದಗಿಸುತ್ತದೆ. ಅಷ್ಟೇ ಅಲ್ಲ ಇದನ್ನು ಗುರುತಿನ ದಾಖಲಾತಿಯಾಗಿ ಕೂಡ ಬಳಸಲಾಗುತ್ತದೆ.

ಪ್ಯಾನ್ ಕಾರ್ಡ್ ನಂಬರ್ ಗೆ ಇನ್ನು ವಾರಗಳ ಕಾಲ ಪರಿತಪಿಸಬೇಕಾಗಿಲ್ಲ. ಈಗ ಪಾನ್​ಕಾರ್ಡ್ ಪಡೆಯಲು ಇನ್ನು ಕಷ್ಟಪಡಬೇಕಿಲ್ಲ. ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆಧಾರ್ ಸಂಖ್ಯೆ ಹಾಗೂ ಕೆವೈಸಿ ದಾಖಲೆಗಳನ್ನು ನೀಡಿದ ಕೆಲವೇ ನಿಮಿಷಗಳಲ್ಲಿ ಪಾನ್​ಸಂಖ್ಯೆ ಲಭ್ಯವಾಗಲಿದೆ!

ಕೇಂದ್ರ ನೇರ ತೆರಿಗೆ ಮಂಡಳಿ ಆನ್​ಲೈನ್ ಮೂಲಕ ಶೀಘ್ರದಲ್ಲಿ ಪಾನ್​ಕಾರ್ಡ್ ಪಡೆಯುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಪ್ರತಿವರ್ಷ 2.5 ಕೋಟಿ ಜನರು ಪಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುತ್ತಾರೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿ 2-3 ವಾರಗಳ ನಂತರ ಪಾನ್​ಕಾರ್ಡ್ ಲಭ್ಯವಾಗುತ್ತದೆ. ಹೊಸ ನಿಯಮ ಜಾರಿಗೆ ಬಂದರೆ 5 ನಿಮಿಷದ ಒಳಗಾಗಿ ಪಾನ್​ಸಂಖ್ಯೆ ಲಭ್ಯವಾಗಲಿದೆ. ಈ ಯೋಜನೆ ಈಗ ಆರಂಭಿಕ ಹಂತದಲ್ಲಿದ್ದು, ಹಣಕಾಸು ಇಲಾಖೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹಣಕಾಸು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ಗುರುತಿನ ಪತ್ರ ಅಥವಾ ಆಧಾರ್ ಕಾರ್ಡ್ ದಾಖಲೆ ಸಲ್ಲಿಸಿದರೆ ಪ್ಯಾನ್ ಕಾರ್ಡ್ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು. ಆದಾಯ ತೆರಿಗೆ ಪಾವತಿಯನ್ನು ಮತ್ತಷ್ಟು ಸರಳ ಮಾಡಲು ಕೇಂದ್ರ ಸರ್ಕಾರ ಇಂಥ ಯೋಜನೆಗಳನ್ನು ರೂಪಿಸುತ್ತಿದೆ.ನಗದುರಹಿತ ವಹಿವಾಟು ಹಾಗೂ ಡಿಜಿಟಲ್ ಇಂಡಿಯಾಗೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ, ಆದಾಯ ತೆರಿಗೆ ಪಾವತಿಗೆ ನೂತನ ಮೊಬೈಲ್ ಆಪ್ ಅಭಿವೃದ್ಧಿಪಡಿಸುತ್ತಿದೆ. ಈ ಆಪ್ ಸಹಾಯದಿಂದ ಆಪ್​ನಲ್ಲೇ ತೆರಿಗೆ ಪಾವತಿಸುವ ಸೌಲಭ್ಯ ಗಳು ವದಗಲಿವೆ.