ಪನ್ನೀರ್ ಬಟರ್ ಮಸಾಲಾ ಸುಲಭವಾಗಿ ಮನೆಯಲ್ಲೇ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು:
- 3ಟೇಬಲ್ ಸ್ಪೂನ್ ಎಣ್ಣೆ,
- ಒಣಮೆಣಸು 2-3,
- ಜೀರಿಗೆ 1 ಟೇಬಲ್ ಸ್ಪೂನ್,
- ಬೆಣ್ಣೆ ಸ್ವಲ್ಪ,
- ರುಬ್ಬಿದ ಟೊಮೇಟೊ 3 ಕಪ್,
- ಹಸಿ ಮೆಣಸಿನ ಕಾಯಿ 2 ಹೆಚ್ಚಿದ್ದು,
- ಖಾರದ ಪುಡಿ 3 ಟೇಬಲ್ ಸ್ಪೂನ್,
- ಕಸ್ತೂರಿ ಮೇತಿ 3 ಟೇಬಲ್ ಸ್ಪೂನ್,
- ಕ್ರೀಮ್/ ಹಾಲು 1/8 ಕಪ್,
- ಸಣ್ಣ ಕ್ಯೂಬ್ಗಳಾಗಿ ಕತ್ತರಿಸಿದ ಪನೀರ್ 400 ಗ್ರಾಂ.
ಮಾಡುವ ವಿಧಾನ:
- ಎಣ್ಣೆಯನ್ನು ಬಿಸಿ ಮಾಡಿ. ಜೀರಿಗೆ, ಸೀಳಿದ ಹಸಿ ಮೆಣಸಿನ ಕಾಯಿ, ಕರಿಬೇವಿನ ಎಲೆಗಳನ್ನು ಸೇರಿಸಿ. ಬೆಣ್ಣೆಯನ್ನು ಸೇರಿಸಿ ಕರಗಿಸಿ.
- ಅನಂತರ ರುಬ್ಬಿದ ಟೊಮೇಟೊ ಸೇರಿಸಿ. ಸ್ಟೋವ್ ಮಧ್ಯಮ ಜ್ವಾಲೆಯಲ್ಲಿರುವಂತೆ ನೋಡಿಕೊಳ್ಳಿ. ಬಾಣಲೆಯನ್ನು ಮುಚ್ಚಿ ಮತ್ತೆ 10-15 ನಿಮಿಷಗಳವರೆಗೆ ಕುದಿಸಿ.
- ನೀರು ಆರಿ ಹೋಗಿ ಅದು ದಟ್ಟ ಪೇಸ್ಟ್ ಆಗುವರೆಗೆ ಬೇಯಿಸಿ. ತಳ ಹಿಡಿಯದಂತೆ ಕೈಯಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಖಾರದ ಪುಡಿ, ಗರಮ್ ಮಸಾಲ, ಸೇರಿಸಿ. ಕಸ್ತೂರಿ ಮೇತಿಯನ್ನು ಪುಡಿ ಮಾಡಿ ಹಾಕಿ. ಎಲ್ಲವನ್ನೂ ಮಿಕ್ಸ್ ಮಾಡಿ ನೀರು, ಕ್ರಿಂ, ಹಾಲು ಸೇರಿಸಿ. 5-7 ನಿಮಿಷಗಳವರೆಗೆ ಬೇಯಿಸಿ.
- ತೆಳು ಗ್ರೇವಿ ಬೇಕಿದ್ದರೆ ನೀರನ್ನು ಸೇರಿಸಿ. ಪನೀರ್ ಕ್ಯೂಬ್ಗಳನ್ನು ಸೇರಿಸಿ 5-7 ನಿಮಿಷಗಳವರೆಗೆ ಬೇಯಿಸಿ.