ಹೊಟ್ಟೆಗೆ ಸಂಬಂಧಿಸಿದ ರೋಗವನ್ನು ನಿವಾರಿಸುತ್ತದೆ ಪರಂಗಿ ಹಣ್ಣು

0
6769

*ದಿನ ಪೂರ್ತಿ ವಿಶ್ರಾಂತಿಯಿಲ್ಲದೆ ದುಡಿದು, ಮನೆಗೆ ಬಂದಾಕ್ಷಣ ಒಂದು ಪ್ಲೇಟ್ ಪಪ್ಪಾಯವನ್ನು ಹೊಟ್ಟೆಗೆ ಇಳಿಸುವುದು ಉತ್ತಮ ಉಪಾಯವಾಗಿದೆ. ವಿಟಮಿನ್ ಸಿ ಅಂಶ ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

*ಪಪ್ಪಾಯ ಜೀರ್ಣಕಾರಿ ಶಕ್ತಿಯನ್ನು ಪಡೆದಿದೆ, ಜೀರ್ಣಾಂಗದ ಅನೇಕ ತೊಂದರೆಗಳಿಗೆ ನಿವಾರಣೆ ನೀಡುತ್ತದೆ.

*ಮಲಬದ್ಧತೆ ಇರುವವರು ಊಟದ ನಂತರ ಇದನ್ನು ಸೇವಿಸಬಹುದು.

*ಪಪ್ಪಾಯ ಹಣ್ಣಿನ ಸೇವನೆಯಿಂದ ಮಲಬದ್ಧತೆ ಹಾಗೂ ಉರಿಮೂತ್ರ ಗುಣವಾಗುತ್ತದೆ.

*ಹೊಟ್ಟೆಯ ಹುಳಗಳನ್ನು ನಿಯಂತ್ರಿಸಲು 15 ಹನಿಯಷ್ಟು ಪಪ್ಪಾಯ ಗಿಡದ ಹಾಲನ್ನು 15ಹನಿ ಹರಳೆಣ್ಣೆಯ ಜತೆ ನಿಯಮಿತ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

* ಪಪ್ಪಾಯ ಕಾಯಿಯ ರಸ, ಜೇನುತುಪ್ಪ ಒಂದೊಂದು ಚಮಚವನ್ನು ಬಿಸಿನೀರಿಗೆ ಹಾಕಿ ಸೇವಿಸಿದರೆ ಜಂತು ಹುಳಗಳ ನಿವಾರಣೆಯಾಗುತ್ತದೆ.

* ನಿತ್ಯ ಪಪ್ಪಾಯ ಸೇವಿಸುವುದರಿಂದ ಮೂತ್ರ ಕೋಶದಲ್ಲಿ ಕಲ್ಲುಗಳುಂಟಾಗುವುದಿಲ್ಲ. ಮೂತ್ರ ನಾಳದಲ್ಲಿ ಕಲ್ಲುಗಳಿದ್ದರೆ ಇದರ ಸೇವನೆ ಒಳ್ಳೆಯದು. ಅಲ್ಲದೆ ಮೂತ್ರಜನಕವಾಗಿಯೂ ಕೆಲಸ ಮಾಡುತ್ತದೆ.

*ಪಪ್ಪಾಯದ ಹಣ್ಣು ಯಕೃತ್ ಮತ್ತು ಕರುಳಿನ ಆರೋಗ್ಯಕ್ಕೆ ಹಿತ. ಇದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ.

* ಯಕೃತ್ತಿನ ತೊಂದರೆಗೆ ಒಂದು ಚಮಚ ಪಪ್ಪಾಯ ಕಾಯಿಯ ಹಾಲಿಗೆ ಅರ್ಧ ಲೋಟ ಬಿಸಿನೀರು ಸೇರಿಸಿ ಊಟಕ್ಕೆ ಮುಂಚೆ ಸೇವಿಸಬೇಕು.

*ನಿಮ್ಮ ಜೀರ್ಣಕ್ರಿಯೆಗೆ ತೊಡಕುಂಟುಮಾಡುವ ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಖಂಡಿತ ಸಾಧ್ಯವಿಲ್ಲದ ಮಾತು. ಹೆಚ್ಚು ಎಣ್ಣೆಯಿಂದ ತಯಾರಿಸಲಾದ ಝಂಕ್ ಫುಡ್ ಮತ್ತು ಹೋಟೇಲಿನ ಊಟಕ್ಕೆ ನಾವಿಂದು ಬಲಿಪಶುಗಳಾಗುತ್ತಿದ್ದೇವೆ. ಪಪ್ಪಾಯವನ್ನು ದಿನವೂ ತಿನ್ನುವುದು ಝಂಕ್ ಫುಡ್‌ನಿಂದ ಉಂಟಾಗುವ ಜೀರ್ಣಕ್ರಿಯೆ ಸಮಸ್ಯೆಯನ್ನು ತಡೆಗಟ್ಟಿ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ.