ನನ್ನಲ್ಲಿ ಕಲೆಯುವ ಆಸಕ್ತಿ ತುಂಬಾ ಇದೆ, ಆದ್ರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ.. ಒಂದು ವೇಳೆ ನನ್ನ ವಿದ್ಯಾಭ್ಯಾಸಕ್ಕೆ ತೊಂದ್ರೆ ಆಗದೆ ನಾನು ಹಣ ಗಳಿಸಿ ಕುಟುಂಬಕ್ಕೆ ನೆರವಾಗು ಹಾಗಿದ್ರೆ ನಾನು ಆ ಕೆಲಸ ಮಾಡಲು ಸೈ.. ನನಗು ಈ ಬಡತನವನ್ನು ಮೆಟ್ಟಿ ನಿಂತು ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಆಸೆ ಇದೆ. ಹಾಗಿದ್ರೆ ಏನು ಮಾಡಲಿ ಎಂಬ ಪ್ರಶ್ನೆ ಬಡ ವಿದ್ಯಾರ್ಥಿಗಳಲ್ಲಿ ಮೂಡುವುದ ಸಹಜ. ಹಾಗಿದ್ರೆ ನಿಮ್ಮ ಸಮಸ್ಯೆಗೆ ನಾವು ಉತ್ತರ ನೀಡುತ್ತೇವೆ.
ನೀವು ಈಗ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದ ಬಗ್ಗೆ ಕೊಂಚ ಮಾಹಿತಿ ಇದ್ರೆ ಉತ್ತಮ. ಅಲ್ಲದೆ ಮುಂದೆ ಜೀವನದಲ್ಲಿ ಹೋಗುವ ಕ್ಷೇತ್ರದಲ್ಲಿ ಈಗಿನಿಂದಲೇ ಕೆಲಸ ಮಾಡಲು ಆರಂಭಿಸಿದ್ರೆ, ಮುಂದೆ ಕೆಲಸಕ್ಕೆ ಸೇರಿದಾಗ ಅಷ್ಟೊಂದು ಕಷ್ಟ ಆಗದು. ಹೀಗಾಗಿ ಪಾರ್ಟ್ ಟೈಮ್ ಕೆಲಸಗಳನ್ನು ಮಾಡುವಾಗ ಮುನ್ನೆಚ್ಚರಿಕೆ ಅವಶ್ಯಕ.
- ನಿಮಗೆ ಕಂಪ್ಯೂಟರ್ ಕೌಶಲ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಇದ್ರೆ, ಈ ಕ್ಷೇತ್ರ ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಿದ್ರೆ ಮುಂದಿನ ದಿನಗಳಲ್ಲಿ ಉತ್ತಮ ಹುದ್ದೆ ಪಡೆಯಬಹುದು. ಇನ್ನು ಹಾರ್ಡ್ವೇರ್ ಹಾಗೂ ಸಾಫ್ಟ್ವೇರ್ಗೆ ಸಂಬಂಧಿಸಿದಂತೆ ನಿಮಲ್ಲಿ ಕೌಶಲ್ಯ ಇದ್ರೆ, ನೀವು ಈ ಕೆಲಸವನ್ನು ಮಾಡಬಹುದು. ಇನ್ನು ಶೈಕ್ಷಣಿಕ ಪ್ರಾಜೆಕ್ಟ್ ಕುರಿತಾದ ಅಧ್ಯಯನ ಮತ್ತು ಪ್ರಾಜೆಕ್ಟ್ ವರದಿ ತಯಾರಿಕೆ ಸಹ ಮಾಡಬಹುದು. ಇನ್ನು ಕಂಪ್ಯೂಟರ್ ರಿಪೇರಿ ಮಳಿಗೆಗಳು ಎಲ್ಲ ನಗರದಲ್ಲಿ ಇದ್ದು, ಕೆಟ್ಟ ಕಂಪ್ಯೂಟರ್ ರಿಪೇರಿ ಮಾಡಿ ನೀಡಲು ನಿಮಗೆ ಸಮಯಾಕಾಶ ಇರುತ್ತದೆ. ಹೀಗಾಗಿ ಇಲ್ಲಿಯೂ ನೀವು ನಿಮ್ಮ ಅದೃಷ್ಠ ಪರೀಕ್ಷಿಸಬಹುದು.
- ಇನ್ನು ಈಗಿನ ಕಾಲೇಜು ವಿದ್ಯಾರ್ಥಿಗಳೆಂದ್ರೆ ಕೇಳಬೇಕೆ. ಅಂತರ್ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಇದ್ದೇ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಇಂಟರ್ನೆಟ್ ಮೂಲಕ ಬ್ರ್ಯಾಂಡ್ಗಳ ಪ್ರಚಾರಕ್ಕೆ ಕಂಪನಿಗಳು ವಿದ್ಯಾರ್ಥಿಗಳ ಮೊರೆ ಹೋಗುತ್ತವೆ. ಇದ್ರಲ್ಲೂ ನಿಮಗೆ ಹಣ ನೀಡಲಾಗುತ್ತದೆ. ಅಲ್ಲದೆ ನೀವು ಶ್ರದ್ಧೆಯಿಂದ ಕೆಲಸ ಮಾಡಿದ್ದು ಮೇಲಧಿಕಾರಿಗಳಿಗೆ ಮೆಚ್ಚುಗೆ ಆದಲ್ಲಿ ನೀಮ್ಮ ವ್ಯಾಸಂಗ ಮುಗಿಯುತ್ತಿದ್ದಂತೆ ನಿಮಗೆ ಕೆಲಸ ನೀಡಲು ಬಹುದು.
- ನೀವು ಓದಿನಲ್ಲಿ ಚುರುಕಾಗಿದ್ದು, ಬೇರೆ ವಿದ್ಯಾರ್ಥಿಗಳಿಗೆ ನೀವು ಪಾಠ ಕಲಿಸುವ ಸಣ್ಣ ಟೆಕ್ನಿಕ್ಗಳನ್ನು ರೂಡಿಸಿಕೊಂಡಿದ್ದರೆ, ಮನೆ ಪಾಠ ಮಾಡಿಯೂ ಹಣ ಸಂಪಾದಿಸಬಹುದು. ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ನಿವು ವಿದ್ಯಾರ್ಥಿಗಳಿಗೆ ಮನದಟ್ಟು ಆಗುವಾಗಿ ಪಾಠ ಮಾಡುವುದನ್ನು ರೋಡಿಸಿಕೊಂಡ್ರೆ ಕೈ ತುಂಬ ಹಣ.
- ನಿಮಗೆ ತಿಂಡಿ ತಿನಿಸು, ಊಟದಲ್ಲಿ ಆಸಕ್ತಿ ಇದ್ದು, ಅಡುಗೆ ಮಾಡಲು ಬರುತ್ತಿದ್ದರೆ, ವಿಫುಲ ಅವಕಾಶ ಇರುತ್ತದೆ. ಸ್ಟಾರ್ ಹೊಟೇಲ್ಗಳಲ್ಲಿ ಇದಕ್ಕಾಗಿ ವಿಶೇಷ ಬಾಣಸಿಗರನ್ನು ನೊಡ್ತಾರೆ. ಇದಕ್ಕಾಗಿ ಅದರದ್ದೇ ವ್ಯಾಸಂಗ ಮುಖ್ಯ. ಇನ್ನು ಚಿಕ್ಕ ಹೊಟೇಲ್ಗಳಲ್ಲಿ ಆದ್ರೆ, ನೀವು ಕೆಲಸವನ್ನು ಗಿಟ್ಟಿಸಿಕೊಳ್ಳಬಹುದು.
- ನಿಮ್ಮಲ್ಲಿ ಕಾರು ಚಾಲನಾ ಪರವಾನಿಗೆ ಇದ್ದರೆ, ಊಬರ್, ಓಲಾದಂತಹ ಕಂಪನಿಗಳಲ್ಲಿ ಶುಲ್ಕ ನೀಡಿ ಹೆಸರು ನೊಂದಾಯಿಸಬೇಕು. ಆಗ ನಿಮಗೆ ಕಂಪನಿ ಸಂಬಳವನ್ನು ನಿಗದಿ ಮಾಡಿ ಕಾರ್ ನೀಡುತ್ತದೆ. ಹೀಗೆ ಕಾರು ಓಡಿಸಲು ನಿಮಗೆ ಊರಿನ ಎಲ್ಲ ಮಾಹಿತಿ ಇರಲೇಬೇಕು ಎಂದೇನು ಇಲ್ಲ. ಈಗ ಜಿಪಿಎಸ್ ಬಂದಿದ್ದು ಎಲ್ಲ ಮಾಹಿತಿ ನಿಮ್ಮ ಅಂಗೈನಲ್ಲೇ ಸಿಗುತ್ತದೆ.
- ಇನ್ನು ರೆಸ್ಯೂಮ್ ತಯಾರಿಕೆಯೂ ಈಗ ಒಂದು ಉದ್ಯೋಗವಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಸೂಕ್ತ ಪದಗಳಿಕೆ ಭಾಷೆಯ ಮೆಲೆ ಹಿಡಿತ ಹಿದ್ದರೆ ಈ ಕ್ಷೇತ್ರದಲ್ಲಿ ಹಣ ಗಳಿಸಬಹುದು.
ಸ್ವ-ಪರಿಚಯ (ರೆಸ್ಯೂಮ್) ಮಾಡುವುದು ಹೇಗೆ ( ಅದ್ರಲ್ಲಿ ಏನು ಇರಬೇಕು)
ನಿಮ್ಮ ಹೆಸರು, ತಂದೆ ತಾಯಿ ಹೆಸರು
ಖಾಯಂ ವಿಳಾಸ
ಮೊಬೈಲ್, ಇ-ಮೇಲ್
ವ್ಯಾಸಂಗದ ಬಗ್ಗೆ ಮಾಹಿತಿ
ನಿಮ್ಮಲ್ಲಿರುವ ವಿಶಿಷ್ಠ ಆಸಕ್ತಿಯ ಮಾಹಿತಿ
ಕಂಪ್ಯೂಟರ್, ಹಾಗೂ ಇತರೆ ಕೋರ್ಸ್
ನಿಮಗೆ ಮಾತನಡಲು, ಓದಲು ಬರುವ ಭಾಷೆಗಳ ಮಾಹಿತಿ
ನೀವು ಈ ಮೊದಲು ಎಲ್ಲಿಯಾದ್ರೂ ಕೆಲಸ ಮಾಡಿದ್ರೆ ಆ ಬಗ್ಗೆ ವಿವರ