ಪಾರ್ವತಮ್ಮ ರಾಜಕುಮಾರ್ ರವರ ಹುಟ್ಟುಹಬ್ಬವನ್ನು ಪುನೀತ್ ರಾಜಕುಮಾರ್ ಹೇಗೆ ಆಚರಿಸಿದರು ಗೊತ್ತಾ?

0
929

ಬಾಲ್ಯದಿಂದಲೇ ತಂದೆ ವರನಟ ಡಾ.ರಾಜಕುಮಾರ್ ಅವರೊಂದಿಗೆ ನಟಿಸುತ್ತ, ಚಲನಚಿತ್ರಗಳಿಗೆ ಹಾಡುಗಳನ್ನು ಹಾಡುತ್ತಿದ್ದರು ಪುನೀತ್ ಇವರ ನಟನೆಗೆ ತುಂಬ ಪ್ರಶಸ್ತಿಗಳು ಸಹ ಬಂದಿವೆ, ಆದರೆ ಇದಕೆಲ್ಲ ತಮಗೆ ಬೆನ್ನೆಲುಬಾಗಿ ನಿಂತಿದ್ದ ತಾಯಿಯನ್ನು ಯಾವಾಗಲು ನೆನೆಯುತ್ತಾರೆ ಪವರ್-ಸ್ಟಾರ್.

ತಮ್ಮ ಚಿತ್ರಗಳಲ್ಲಿ ವಿಭಿನ್ನವಾಗಿ ನಟಿಸುತ್ತ, ಜನರ ಮನೋರಂಜಿಸುತ್ತಿದ್ದ ಪವರ್-ಸ್ಟಾರ್ ಪುನೀತ್ ರಾಜ್‍ಕುಮಾರ್‍, ತಾಯಿಯ ಹುಟ್ಟಿದ ದಿನವನ್ನು ವಿಭಿನ್ನವಾಗಿ ಆಚರಿಸಿ ಸರಳತೆಯನ್ನು ಮೆರೆದ್ದಿದಾರೆ.

ದಿವಂಗತ ಪಾರ್ವತಮ್ಮ ರಾಜ್‍ಕುಮಾರ್‍ ಅವರ 78 ನೇ ಜನ್ಮದಿನದ ಪ್ರಯುಕ್ತವಾಗಿ ಪವರ್-ಸ್ಟಾರ್ ಪುನೀತ್ ರಾಜ್‍ಕುಮಾರ್ ನಗರದ ಶಕ್ತಿಧಾಮ ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿದ್ದಾರೆ.

ಶಕ್ತಿಧಾಮ ಅನಾಥಾಶ್ರಮಕ್ಕೆ ಭೇಟಿ ನೀಡಿದ ಪುನೀತ್, ಅಲ್ಲಿಯೇ ಪಾರ್ವತಮ್ಮ ರಾಜ್‍ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಮಕ್ಕಳಿಗೆ, ಮಹಿಳೆಯರಿಗೆ ಹೊಸ ಬಟ್ಟೆ ಹಾಗೂ ಸಿಹಿ ಹಂಚಿ ಅವರೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಅಮ್ಮನ ಜೊತೆ ಕಳೆದ ಸಂತಸದ ಕ್ಷಣಗಳ ಫೋಟೋಗಳನ್ನು, ಹಾಗು ತಮ್ಮ ಕೆಲವು ಹಳೆಯ ಫೋಟೋಗಳ ಜೊತೆ “ಹ್ಯಾಪಿ ಬರ್ತ್-ಡೇ ಅಮ್ಮ” ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆ ಫೇಸ್ಬುಕ್-ನಲ್ಲಿ ಬರೆದ್ದಿದ್ದಾರೆ.