ಮೊಬೈಲ್ ಚಾರ್ಜ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಪ್ರಯಾಣಿಕ..!

0
439

ಈ ಮೊಬೈಲ್ ತಂದಿಡೋ ಫಜೀತಿ ಅಂತಿಂತದ್ದಲ್ಲ. ಅದೆಂಥೆಂತಾ ಎಡವಟ್ಟು ಮಾಡ್ಕೊಂತಾರೆ ಗೊತ್ತಾ..? ಇಲ್ಲೊಬ್ಬನ ಅಂತಹಾ ಒಂದು ಎಡವಟ್ಟು ಪ್ರಸಂಗವನ್ನ ನಿಮ್ಮ ಮುಂದಿಡ್ತೀವಿ ನೋಡಿ..

Also read: ಇನ್ನು ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕೇವಲ 15 ನಿಮಿಷದಲ್ಲಿ ತಲುಪಬಹುದು ಗೊತ್ತಾ?

ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎಂದು ನಡೆಯಿತ್ತಿರುವ ಜನರಿಗೆ ಇಂತಹ ನಿದರ್ಶನಗಳು ಸೋಚನೆಯಾಗಬೇಕು. ಒಂದು ಘಟಣೆಯಿಂದ ಆದ ಪಾಠವನ್ನು ಬೇರೊಂದು ಸ್ಥಳದಲ್ಲಿ ಆಗದೆ ಇರುವ ರೀತಿಯಲ್ಲಿ ನೋಡಿಕೊಳ್ಳುವುದು ಜೀವನಕ್ಕೆ ಸರಿಯಾದ ಮಾರ್ಗವಾಗಿದೆ. ಇದೆಲ್ಲ ಯಾಕೆ ಅಂದರೆ ಕೆಲವೊಂದು ಜನರು ಕುಡಿದ ಮಪ್ಪಿನಲ್ಲಿ ಮಾಡುವ ತೊಂದರೆಗಳಿಗೆ ನೂರಾರು ಅಮಾಯಕರ ಪ್ರಾಣವನ್ನೇ ಬಲಿ ತೆಗೆದುಕೊಳ್ಳುವ ಪ್ರಸಂಗಗಳು ಬರುವುದು ಹೊಸದೆನಲ್ಲ, ವಾಹನಗಳಲ್ಲಿ ಡ್ರೈವರ್ ಒಬ್ಬ ತಪ್ಪು ಮಾಡಿದರೆ ಪ್ರಯಾಣಿಕರೆ ತೊಂದರೆಗೆ ಸಿಲಿಕಿಕೊಳ್ಳುತ್ತಾರೆ ಆದರೆ ವಿಮಾನಯಾನದಂತಹ ಪ್ರಯಾಣದಲ್ಲಿ ಡ್ರೈವರ್ ಮಾತ್ರವಲ್ಲ ಪ್ರಯಾಣಿಕರು ಕೂಡ ಚಿಕ್ಕ ತಪ್ಪು ಮಾಡಿದರೆ ಸಹ ಪ್ರಯಾಣಿಕರು ಕೂಡ ಅಪಘಾತಕ್ಕೆ ತುತ್ತಾಗುತ್ತಾರೆ.

Also read: ಭಾರತೀಯ ದಂಪತಿಗಳಿಗೆ Bloody Indians ಎಂದು ಕರೆದು ಅವಮಾನ ಮಾಡಿ, ವಿಮಾನದಿಂದ ಹೊರದಬ್ಬಿ ದರ್ಪ ಮೆರೆದ ಬ್ರಿಟಿಶ್ ಏರ್ವೇಸ್!!

ಇವತ್ತು ಆ ಪ್ರಯಾಣಿಕನ ಗ್ರಹಚಾರ ಕೆಟ್ಟಿತ್ತು ಅಂತ ಕಾಣುತ್ತೆ. ಮೊಬೈಲ್ ಚಾರ್ಜ್ ಗೆ ಹಾಕಲು ಇಂಡಿಗೋ ವಿಮಾನದ ಕಾಕ್‌ಪಿಟ್‌ ಗೆ ನುಗ್ಗಲು ಪ್ರಯಾಣಿಕ ಯತ್ನಿಸಿದ್ದಾನೆ. ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ಈ ಎಡವಟ್ಟಿಗೆ ತಲೆಕೊಟ್ಟಿದ್ದಾನೆ. ಮೊಬೈಲ್ ಚಾರ್ಜ್ ಗೆ ಹಾಕಬೇಕೆಂಬ ಕಾರಣ ನೀಡಿ ವಿಮಾನದ ಕಾಕ್‌ಪಿಟ್‌ ಗೆ ಪ್ರವೇಶಿಸಲು ಪ್ರಯಾಣಿಕ ಯತ್ನಿಸಿದ್ದ. ಹೀಗೆ ಕಿರಿಕಿರಿ ಉಂಟು ಮಾಡಿದ್ದ ಪ್ರಯಾಣಿಕನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ವಿಚಾರಣೆ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Also read: ಭಾರತದ ಯುದ್ಧವಿಮಾನದ ಮೊದಲ ಮಹಿಳಾ ಪೈಲೆಟ್ ಬಗ್ಗೆ ತಿಳಿದುಕೊಳ್ಳಿ, ಪ್ರತಿಯೊಬ್ಬ ಬಾಲಕಿಗೆ ಹಾಗೂ ಯುವತಿಯರಿಗೆ ಈಕೆ ಸ್ಫೂರ್ತಿ..

ಘಟನೆ ವಿಮಾನ ಟೇಕ್ ಆಫ್ ಆಗುವುದಕ್ಕೂ ಮುನ್ನ ನಡೆದಿದೆ ಎನ್ನಲಾಗಿದೆ. ನಾಗರಿಕ ವಿಮಾನಯಾನ ನಿಯಮಗಳ ಪ್ರಕಾರ ಯಾವುದೇ ಪ್ರಯಾಣಿಕರೂ ಸಹ ಕಾಕ್ ಪಿಟ್ ಅನ್ನು ಪ್ರವೇಶಿಸುವಂತಿಲ್ಲ. ಆದರೆ ಕುಡಿದ ಮತ್ತಿನಲ್ಲಿ ಕಾಕ್ ಪಿಟ್ ಗೆ ಪ್ರವೇಶಿಸುವ ವಿಫಲ ಯತ್ನ ಮಾಡಿ ಸುದ್ದಿಯಾಗಿದ್ದಾನೆ.