ರಾಮನ ಬಗ್ಗೆ ಕೆಟ್ಟದಾಗಿ ಬರೆದ ಪ್ರೊಫೆಸರ್ ಭಗವಾನ್ ವಿರುದ್ದ ಕಿಡಿಕಾರಿದ ಪೇಜಾವರ ಶ್ರೀ; ಬಹಿರಂಗ ಚರ್ಚೆಗೆ ಆಹ್ವಾನ..

0
837

ಮೈಸೂರಿನ ವಿಚಾರವಾದಿ ಪ್ರೊಫೆಸರ್ ಭಗವಾನ್ ರಾಮಮಂದಿರ ಏಕೆ ಬೇಡ? ಎಂಬ ಪುಸ್ತಕವನ್ನು ಬರೆದು ಅದರಲ್ಲಿ ಶ್ರೀರಾಮ ದೇವರೆ ಅಲ್ಲ, ಸತ್ಯವಂತನೂ ಅಲ್ಲ, ವೀರನೂ ಅಲ್ಲ. ಕೊಲೆಗಡುಕ” ಸೀತೆಯ ಜೊತೆ ಮಧು ಮೈರೇಯಕಂ ಎಂಬ ಮದ್ಯಪಾನ ಮಾಡುತ್ತಿದ್ದನು, ಮಾಂಸ ತಿನ್ನುತ್ತಿದ್ದನು. ರಾಮ ಮದಿರೆ ಮಾನಿನಿಯರಲ್ಲಿ ಮೈ ಮರೆಯುತ್ತಿದ್ದನು‌. ಅವನು ರಾಜ್ಯಭಾರ ಮಾಡುತ್ತಿರಲಿಲ್ಲ ಬದಲಿಗೆ ಅವನು ತಮ್ಮ ಭರತ ರಾಜ್ಯವಾಳುತ್ತಿದ್ದ ಎಂದು. ಮತ್ತೊಂದು ವಿವಾದಾಕ್ಕೆ ಗುರಿಯಾಗಿದ್ದು ದೇಶದ ತುಂಬೆಲ್ಲ ಹಿಂದೂ ವಾದಿಗಳು ಇವರ ವಿರುದ್ದ ಕಿಡಿ ಕಾರುತ್ತಿರುವುದು ಸುದ್ದಿಯಲಿದೆ.

@publictv.com

Also read: ಶ್ರೀ ರಾಮನು ಹೆಂಡ ಮಾಂಸ ತಿನ್ನುತ್ತಿದ್ದ; ಸೀತೆಗೆ ಮದ್ಯ ಕುಡಿಸುತ್ತಿದ್ದ, ಅವನೊಬ್ಬ ಕೊಲೆಗಡುಕ ಎಂದು ವಿವಾದ ಸೃಷ್ಟಿಸಿದ ಪ್ರೊ ಭಗವಾನ್..

ಭಗವಾನ್ ಅವರ ಈ ಕೃತಿಗೆ ಅನೇಕರು ತಿರುಗ್ ಉತ್ತರ ನೀಡಿದ್ದು ಶ್ರೀರಾಮನ ಬಗ್ಗೆ ಕೆಟ್ಟದಾಗಿ ಬರೆದಿರುವ ಭಗವಾನ್​ ವಿರುದ್ಧ ಪೇಜಾವರ ಶ್ರೀಗಳು ಗರಂ ಆಗಿದ್ದಾರೆ, ಹಾಗೆಯೆ ಭಗವಾನ್ ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಈ ವಿಷಯವಾಗಿ ಉಡುಪಿಯಲ್ಲಿ ಮಾತನಾಡಿದ ಶ್ರೀಗಳು, ಶ್ರೀರಾಮ ಶಂಭೂಕನನ್ನು ಕೊಂದಿದ್ದಾನೆ ಎಂದು ಪ್ರೊ ಭಗವಾನ್ ಆರೋಪಿಸುತ್ತಿದ್ದಾರೆ. ಆದ್ರೆ ಶಂಭೂಕ ಒಬ್ಬ ದುಷ್ಟ ಬುದ್ಧಿಯ ವ್ಯಕ್ತಿ. ಶಂಭೂಕ ದುರುದ್ದೇಶದಿಂದ ಮಾಟದ ರೂಪದಲ್ಲಿ ತಪಸ್ಸು ಮಾಡಿದ್ದಕ್ಕೆ ಸಂಹಾರಗೊಂಡಿದ್ದ. ಶಬರಿ ಬೇಡ ಸಮುದಾಯದ ಮಹಿಳೆ. ವಾಲ್ಮೀಕಿ ಬೇಡ ಸಮುದಾಯದವರು. ಶಬರಿ, ವಾಲ್ಮೀಕಿಯವರನ್ನ, ರಾಮ ಅನುಗ್ರಹ ಮಾಡಿದ್ದಾರೆ.

ಶೂದ್ರ ವಿರೋಧಿಯಾಗಿದ್ದರೆ ಶಂಭೂಕನಂತೆ ಇವರನ್ನೂ ಕೊಲ್ಲಬೇಕಿತ್ತು. ಶ್ರೀ ರಾಮ ಕ್ಷತ್ರಿಯ ಕುಲಕ್ಕೆ ಸೇರಿದ ವ್ಯಕ್ತಿ, ಮಾಂಸಾಹಾರ ಸೇವನೆ ಮಾಡಿದ್ದರೆ ಅದರಲ್ಲಿ ಆಶ್ಚರ್ಯ ಇಲ್ಲ. ಇನ್ನು ಮಧು ಮೈರೇಯಕಂ ಅಂದರೆ ಅದು ಮದ್ಯ ಅಲ್ಲ, ಅದೊಂದು ಪಾನೀಯ. ಏಸು ಕ್ರಿಸ್ತ, ಪೈಗಂಬರ್ ಮಾಂಸ ತಿಂದು ದೇವರಾಗಿಲ್ಲವೇ? ರಾಮನ ಬಗ್ಗೆ ಮಾತ್ರ ಮಾತನಾಡುತ್ತೀರಿ, ಯಾಕೆ? ಎಂದು ಪೇಜಾವರ ಶ್ರೀ ಪ್ರಶ್ನಿಸಿ ಭಗವಾನ್ ಅವರು ನನ್ನ ಹತ್ತಿರ ಬರಲಿ ಅವರಿಗಿರುವ ಎಲ್ಲ ಅನುಮಾನಗಳಿಗೆ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ. ಭಗವಾನ್‌ಗೆ ಈಗಾಗಲೇ ಎರಡು ಬಾರಿ ನಾನು ಉತ್ತರ ನೀಡಿದ್ದೇನೆ. ಈಗಲೂ ನನ್ನೊಂದಿಗೆ ಚರ್ಚೆಗೆ ಬರಲಿ. ರಾಮ ಶೂದ್ರ ವಿರೋಧಿಯಲ್ಲ. ರಾಮ ನಿರಪರಾಧಿ. ವಾದಗಳೆಲ್ಲ ಶುದ್ಧ ಸುಳ್ಳು ಎಂದು ವಿವರಿಸುತ್ತೇನೆ.

ಭಗವಾನ್‌ಗೆ ಭಗವದ್ಗೀತೆ ಅರಿವಿಲ್ಲ:

ಭಗವಾನ್‌ಗೆ ಭಗವದ್ಗೀತೆ ಬಗ್ಗೆ ಅರಿವಿಲ್ಲ. ಮಹಾತ್ಮ ಗಾಂಧೀಜಿಯವರ ಬಗ್ಗೆಯೂ ಕೆಟ್ಟದಾಗಿ ಬಿಂಬಿಸಿದ್ದಾರೆ. ಅವರಿಗೆ ಒಳ್ಳೆಯದು ಏನೂ ಕಾಣುವುದಿಲ್ಲ ಎಂದು ಕಿಡಿಕಾರಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿರುವ ಭಗವಾನ್‌ಗೆ ರಕ್ಷಣೆ ಈಗ ಅನಿವಾರ್ಯವಾಗಿದೆ. ಪ್ರಜೆಗಳ ರಕ್ಷಣೆ ಮಾಡಬೇಕಲ್ಲ. ಭಗವಾನ್ ಹಿಂದೆ ನಿಂತು ಮಾತನಾಡುವ ಬದಲು ರಾಮನ ವಿಚಾರದಲ್ಲಿ ಅವರು ಮಾಡಿರುವ ಎಲ್ಲ ಆರೋಪಗಳಿಗೆ ಉತ್ತರ ನೀಡಲು ಸಿದ್ಧನಿದ್ದೇನೆ. ಅವರು ಇದೇ ರೀತಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದರೆ ಅವರಿಗೆ ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.