ತಮ್ಮ ಖಾತೆಗೆ ಕೇಂದ್ರ ಸರ್ಕಾರದಿಂದ 15 ಲಕ್ಷ ಬರುತ್ತೆ ಅನ್ನೋ ಸುದ್ದಿ ಕೇಳಿ ಈ ಜನ ಏನ್ ಮಾಡಿದ್ರು ಗೊತ್ತ??

0
291

ಈಗೀಗ ಮೋದಿ ನೇತೃತ್ವ ಕೇಂದ್ರ ಸರ್ಕಾರದ ಬಗ್ಗೆ ಹಲವು ಸುಳ್ಳು ಸುದ್ದಿ ಹರಡುತ್ತಿದ್ದು, ಜನರಿಗೆ ಮೋದಿ ಹೇಳಿದಂತೆ 15 ಲಕ್ಷ ರೂ. ಬರುತ್ತದೆ ಎನ್ನುವ ಭ್ರಮೆಯಲ್ಲಿದ್ದಾರೆ. ಇವರಿಗೆ ಈ ಹಿಂದೆ ಜನಧನ ಖಾತೆಯಲ್ಲಿ 15 ಲಕ್ಷ ಬರುತ್ತೆ ಎನ್ನುವ ಸುದ್ದಿ ಹರಡಿತ್ತು. ಮತ್ತೆ ಪೋಸ್ಟ್ ಖಾತೆಗೆ ಹಣ ಬರುತ್ತದೆ ಎನ್ನುವ ವಿಷಯ ಹರಡಿದ್ದು ಜನರು ತಮ್ಮ ಕೆಲಸವನ್ನು ಬಿಟ್ಟು ರಜೆ ಮಾಡಿ ಸಾಲಾಗಿ ನಿಂತು ಪೋಸ್ಟ್ ಖಾತೆಯನ್ನು ತೆರೆಯಲು ನಿಂತಿದ್ದಾರೆ. ಈ ನಡುವೆ ಭಾರಿ ಜನರು ಸೇರಿದರಿಂದ ಪೊಲೀಸ್ ಬಂದು ಜನರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಆದರೆ ಇವರೆಲ್ಲ ಯಾವ ಭರವಸೆಯ ಮೇಲೆ ಸಾಲು ನಿಂತಿದ್ದರು ಎನ್ನುವುದು ಹಾಸ್ಯವೆನಿಸಿದೆ.

ಹೌದು ಮುನ್ನಾರ್‌ ನಗರದಲ್ಲಿ ಯಾರೋ ಸುಳ್ಳು ಸುದ್ದಿ ಹರಡಿಸಿದ್ದು. ಅಂಚೆ ಕಚೇರಿ ಖಾತೆಗೆ ಮೋದಿ ಸರ್ಕಾರ 3 ರಿಂದ 15 ಲಕ್ಷ ಹಣ ಜಮಾ ಮಾಡುತ್ತೆ ಎನ್ನುವ ವಿಷಯ ತಿಳಿದಂತೆ ಜನರು ಎಲ್ಲಿದರೋ ಅಲ್ಲಿದ ಪೋಸ್ಟ್ ಆಫೀಸ್ ಮುಂದೆ ಬಂದು ನಿಂತಿದ್ದಾರೆ, ಇರುವ ಕೆಲಸಕ್ಕೆ ರಜೆ ಹಾಕಿ ಅನೇಕ ಭಾಗಗಳಿಂದ ಎಸ್ಟೇಟ್ ಕಾರ್ಮಿಕರು ಆಗಮಿಸಿ ಖಾತೆ ತೆರೆಯಲು ಮುಂದಾಗಿದ್ದಾರೆ. ಇದರಿಂದ ಮೂರು ದಿನಗಳವರೆಗೆ, ಭಾನುವಾರ, ಸೋಮವಾರ ಮತ್ತು ಮಂಗಳವಾರ ಅಂಚೆ ಖಾತೆಗಳನ್ನು ತೆರೆಯಲು ಮುನ್ನಾರ್ ಪಟ್ಟಣದ ಅಂಚೆಯಲ್ಲಿ ಜನ ತುಂಬಿ ತುಳುಕುತ್ತಿದ್ದರು, ಇದರಲ್ಲಿ ಕೆಲವು ಜನರು ಗದ್ದಲಗಳನ್ನು ಶುರುಮಾಡಿದ್ದಾರೆ. ಇದನ್ನು ನಿಯಂತ್ರಿಸಲು ಪೊಲೀಸರು ಕೂಡ ಸ್ಥಳಕ್ಕೆ ತಲುಪಬೇಕಾಯಿತು. ಅಂಚೆ ಕಚೇರಿ ಅಧಿಕಾರಿಗಳು ಕಾರ್ಮಿಕರಿಗೆ ಖಾತೆ ತೆರೆಯಲು ವಿಶೇಷ ಚಾಲನೆ ನೀಡಿ ಮಾಹಿತಿ ನೀಡಿದ್ದು.

15 ಲಕ್ಷ ಹಣ ಬರುವ ಬಗ್ಗೆ ಕೇಂದ್ರ ಸರ್ಕಾರದಿಂದ ಅಂತಹ ಯಾವುದೇ ಪ್ರಕಟಣೆಯ ಬಗ್ಗೆ ತಮಗೆ ತಿಳಿದಿಲ್ಲ, ಮತ್ತು ಯಾವುದೇ ಅಂಚೆ ಕಚೇರಿಗಳಿಂದ ಸಾರ್ವಜನಿಕರಿಗೆ ಈ ಬಗ್ಗೆ ಯಾವುದೇ ಮಾಹಿತಿ ರವಾನಿಸಲಾಗಿಲ್ಲ, ಹಾಗೆಯೇ “ಅಂಚೆ ಖಾತೆಗಳನ್ನು ತೆರೆಯುವ ಮೂಲಕ ಅವರು ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ನಾವು ಯಾವುದೇ ಮಾಹಿತಿಯನ್ನು ನೀಡಿಲ್ಲ. ಕಳೆದ ವಾರ, 1 ಕೋಟಿ ರೂ. ಹೊಸ ಖಾತೆಗಳನ್ನು ತೆರೆಯಲು ಅಂಚೆ ಇಲಾಖೆಯಿಂದ ನಿರ್ದೇಶನಗಳು ಬಂದಿತ್ತು, ಅದರಂತೆ ನಾವು ಖಾತೆಯನ್ನು ತೆರೆಯಲು ಮಾಹಿತಿ ನೀಡಿದ್ದೇವೆ ಅದನ್ನು ಬಿಟ್ಟು ಯಾವುದೇ ಹಣ ಬರುವ ಬಗ್ಗೆ ಎಲ್ಲಿವೂ ತಿಳಿಸಿದಲ್ಲ, ಯೋಜನೆಯ ಪ್ರಕಾರ, ಉಳಿತಾಯ ಬ್ಯಾಂಕ್ ಖಾತೆಯನ್ನು ಪ್ರಾರಂಭಿಸಲು 100 ರೂ. ಆಧಾರ್ ಕಾರ್ಡ್ ಮತ್ತು ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋ ಬೇಕಾಗುತ್ತವೆ ” ಈ ಸುಳ್ಳು ಸುದ್ದಿ whatsapp, facebook ಮೂಲಕ ಹರಡಿರಬಹುದು ಎಂದು ಅಂಚೆ ಕಚೇರಿ ಅಧ್ಯಕ್ಷರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಮತ್ತೆ ಸೋಮವಾರ ಮತ್ತೊಂದು ವದಂತಿ ಹರಡಿ ಸರ್ಕಾರವು ಕಾರ್ಮಿಕರಿಗೆ ಭೂಮಿ ಮತ್ತು ಮನೆಗಳನ್ನು ಉಚಿತವಾಗಿ ವಿತರಿಸಲಿದೆ. ಎಂದು ಹರಡಿತ್ತು ಇದು ತಿಳಿಯುತ್ತಿದಂತೆ ದೇವಿಕುಲಂನ ಪ್ರಾದೇಶಿಕ ಜಿಲ್ಲಾ ಕಚೇರಿ ಮುಂದೆ ಮತ್ತೆ ಜನರು ಸಾಲಿನಲ್ಲಿ ನಿಂತಿದ್ದರು. ಇವರೆಲ್ಲ “ಉಚಿತ ಭೂಮಿ ಮತ್ತು ಮನೆ” ಗಾಗಿ ಕಚೇರಿಯ ಮುಂದೆ ದೀರ್ಘ ಸಾಲಿನಲ್ಲಿ ಕಾಯುತ್ತಿದ್ದರು. ಇದನ್ನು ಪರೀಕ್ಷಿಸಿ ನೋಡಿದ್ದಾಗ ಇದು ಕೂಡ ಸುಳ್ಳು ಸುದ್ದಿ ಎನ್ನುವುದು ತಿಳಿದ ಜನರು ನಿರಾಶೆರಾಗಿದ್ದಾರೆ. ಅಂತಿಮವಾಗಿ, ಇದು ಕಚೇರಿಯಿಂದ ಹೊರಡಿಸಲಾದ ನಿರ್ದೇಶನವಲ್ಲ ಎಂದು ಆರ್‌ಡಿಒ ಅಧಿಕಾರಿಗಳು ನೋಟಿಸ್ ನೀಡಿದರು. ಸುಳ್ಳು ವದಂತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೇವಿಕುಲಂ ಉಪ ಸಂಗ್ರಾಹಕ ರೇಣುರಾಜ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.