ಕಾರು ಕೊಳ್ಳುವ ಪ್ಲಾನ್ ಇದ್ದರೆ ಡಿಸೆಂಬರ್ ತಿಂಗಳು ಒಳ್ಳೆಯ ಸಮಯ.. ಯಾವ ಯಾವ ಕಂಪನಿಯ ಕಾರುಗಳಿಗೆ ಎಷ್ಟು ಆಫರ್ ಇದೆ ಎಂದು ಇಲ್ಲಿದೆ ನೋಡಿ..

0
1313

ಸಾಮಾನ್ಯವಾಗಿ ವಾಸಿಸಲು ಒಂದು ಮನೆ.. ಒಡಾಡಲು ಒಂದು ಕಾರು.. ಜೊತೆಗೊಂದು ಮದುವೆ.. ಇದು ಎಲ್ಲರ ಕನಸು.. ಮನೆಯ ಬಗ್ಗೆ ಈ ಮುಂಚಿನ ಲೇಖನದಲ್ಲಿ ಈಗಾಗಲೇ ತಿಳಿಸಿರುವೆ.. ಮದುವೆ ಬಗ್ಗೆ ಸದ್ಯಕ್ಕೆ ಬೇಡ.. ಈಗ ಕಾರಿನ ಬಗ್ಗೆಗಿನ ಮಾಹಿತಿ ಇದೆ ನೋಡಿ.

ನೀವುಗಳು ಕಾರು ಕೊಳ್ಳುವ ಪ್ಲಾನ್ ನಲ್ಲಿದ್ದರೆ ಡಿಸೆಂಬರ್ ತಿಂಗಳು ಒಳ್ಳೆಯ ಸಮಯ ಈಗಲೇ ಯೋಜಿಸಿ ಕಾರ್ ಕೊಳ್ಳಿ..

ಏಕೆ ಈ ಡಿಸೆಂಬರ್‌ ಒಳ್ಳೆಯ ಸಮಯವೆಂದರೆ.. ಇದು ವರ್ಷದ ಕೊನೆಯಾಗಿರುವುದರಿಂದ year end sale ಎಂದು ಕಾರ್ ಕಂಪನಿಗಳು ಆಫರ್ ನೀಡುತ್ತವೆ.. ಎಲ್ಲಾ ಕಾರ್ ಶೋರೂಮ್ ಗಳಿಗೆ ಒಂದೊಂದು ಮಾರ್ಜಿನ್ ಅನ್ನು ನೀಡಿರುತ್ತಾರೆ.. ಆದ್ದರಿಂದ ಮಾರ್ಜಿನ್ ನಲ್ಲಿ ನಮೂದು ಮಾಡಿರುವಷ್ಟು ಕಾರುಗಳನ್ನು ಅವರು ಮಾರಾಟ ಮಾಡಬೇಕು ಅದಕ್ಕಾಗಿಯೇ ಈ ಆಫರ್ ಗಳನ್ನು ಬಿಡುತ್ತಾರೆ. ಈ ವರ್ಷದ ಆಫರ್ ಗಳಿಗೆ ಬಂದರೆ.. ಪ್ರಮುಖವಾಗಿ ಹ್ಯುಂಡೈ ಮತ್ತು ಟಾಟಾ ಕಂಪನಿಗಳು ಅತ್ಯುನ್ನತ ಆಫರ್ ಗಳನ್ನು ನೀಡಿದ್ದಾರೆ.. ಇನ್ನುಳಿದಂತೆ ಬೇರೆ ಎಲ್ಲಾ ಕಂಪನಿಗಳ ಆಫರ್ ಹೇಳಿಕೊಳ್ಳುವಂತೇನಿಲ್ಲಾ..

Hyundai ಕಂಪನಿಯ ಕಾರುಗಳ ಆಫರ್

ಹ್ಯುಂಡೈ ಕಂಪನಿಯ ಕಾರುಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ.. ಇದೇ ಕಂಪನಿಯ ಯಾವ ಯಾವ ಕಾರುಗಳ ಮೇಲೆ ಎಷ್ಟೆಷ್ಟು ಆಫರ್ ಇದೆ ಇಲ್ಲಿದೆ ನೋಡಿ..

Hyundai eon

ಹ್ಯುಂಡೈ eon ಕಾರಿನ ಮೇಲೆ ಗರಿಷ್ಠ 70 ಸಾವಿರ ರೂಪಾಯಿಗಳ ವರೆಗೆ ಡಿಸ್ಕೌಂಟ್ ಆಫರ್ ಅನ್ನು ನೀಡಿದ್ದಾರೆ..

Grand i10

ಈ ವರ್ಷದಲ್ಲಿ ಅತಿ ಹೆಚ್ಚು ಸೇಲ್ ಆದ ಹ್ಯುಂಡೈ i10 ಕಾರುಗಳ ಮೇಲೆ ಗರಿಷ್ಠ 90 ಸಾವಿರ ರೂಪಾಯಿಗಳ ವರೆಗೆ ಡಿಸ್ಕೌಂಟ್ ಇದೆ..

Excent

ಇನ್ನು excent ಕಾರುಗಳ ಮೇಲೆ 40 ಸಾವಿರ ರೂಪಾಯಿಗಳ ವರೆಗೆ ಡಿಸ್ಕೌಂಟ್ ಇದೆ..

Hyundai I20

ಹ್ಯುಂಡೈ i20 ಯ ಕೆಲವು ಕಾರುಗಳ ಮೇಲೆ 60 ಸಾವಿರ ರೂಪಾಯಿಗಳ ವರೆಗೆ ಡಿಸ್ಕೌಂಟ್ ಅನ್ನು ನೀಡುತ್ತಿದೆ..

TATA Cars

ಇನ್ನು ಟಾಟಾ ಕಂಪನಿಯ ಕಡೆ ಬಂದರೆ.. ಟಾಟಾ ಕಂಪನಿಯವರು ಈ ವರ್ಷ ವಿಭಿನ್ನ ರೀತಿಯಾಗಿ ಆಫರ್ ನೀಡಿದ್ದಾರೆ.. ಟಾಟಾ ಕಂಪನಿಯ ಕಾರುಗಳನ್ನು ಕೇವಲ ಒಂದು ರೂಪಾಯಿ ಮಾತ್ರ ಡೌನ್ ಪೇಮೆಂಟ್ ನೀಡಿ ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು.. EMI ಮೂಲಕ ಪ್ರತಿ ತಿಂಗಳು ಹಣವನ್ನು ಪಾವತಿ ಮಾಡಬಹುದು..

ಭರ್ಜರಿ ಆಫರ್ ಗಳನ್ನು ನೀಡುವ ಮೂಲಕ ಕಾರುಗಳನ್ನು ಅತಿ ಹೆಚ್ಚು ಸೇಲ್ ಮಾಡಿ ಹೆಸರು ಪಡೆದುಕೊಳ್ಳುವ ತವಕ ಕಂಪನಿಯವರದ್ದು.. ಪ್ರತಿ ತಿಂಗಳು ಸೇವಿಂಗ್ಸ್ ಮಾಡಿ ಒಂದು ಕಾರು ಕೊಳ್ಳೋಣ ಎಂಬ ಕನಸನ್ನು ನನಸು ಮಾಡಿಕೊಳ್ಳುವ ಬಯಕೆ ಜನ ಸಾಮಾನ್ಯರದ್ದು.. ಶುಭವಾಗಲಿ ನಿಮ್ಮ ಕನಸು ನನಸಾಗಲಿ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾಗಬಹುದು..