ಹುಡುಗಿಯನ್ನು ಅಪಹರಿಸಲು ಹೋದ ಮೂವರ ಹುಡುಗರ ಗತಿ ಏನಾಯ್ತು ಗೊತ್ತಾ….?

0
1028

ಹೌದು ಈ ಮೂವರು ಹುಡುಗರು ರಾತ್ರಿ ಗ್ರಾಮಕ್ಕೆ ಬಂದರು ಬೆಳಗ್ಗೆ ನೋಡಿದರೆ ಪೊಲೀಸ್ ಅತಿಥಿಯಾದರು.
ಹುಡುಗಿಯ ಅಪಹರಣಕ್ಕೆ ಯತ್ನಿಸಿದ್ದ ಮೂವರು ಯುವಕರಿಗೆ ಗ್ರಾಮಸ್ಥರೇ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿರೋ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ತೊರೆಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನ ಗೊಲ್ಲರಹಟ್ಟಿಯ ಬಾಲಾಜಿ, ರಮೇಶ್, ಗುರು ಎಂಬವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಮೂವರುನ ಶುಕ್ರವಾರ ರಾತ್ರಿಯೇ ಗ್ರಾಮಕ್ಕೆ ಬಂದು ಅನುಮಾನಸ್ಪದಾಗಿ ಗ್ರಾಮದಲ್ಲಿ ಓಡಾಡುತ್ತಿದ್ದರು.

ಈ ಮೂವರ ಬಗ್ಗೆ ಅನುಮಾನಗೊಂಡು ಗ್ರಾಮಸ್ಥರು ಬೆಳಗ್ಗೆ ವಿಚಾರಿಸಿದ್ದಾರೆ. ಪ್ರಾರಂಭದಲ್ಲಿ ಸರಿಯಾಗಿ ಉತ್ತರಿಸದ ಕಾರಣ ಏಟು ತಿಂದ ನಂತ್ರ ಅಪಹರಣಕ್ಕೆ ಬಂದಿರೋದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕೂಡಲೇ ಗ್ರಾಮಸ್ಥರು ಆ ಮೂವರನ್ನು ಹಿಡಿದು ಕೊಠಡಿಯೊಂದ್ರಲ್ಲಿ ಕೂಡಿಹಾಕಿ ಧರ್ಮದೇಟು ಕೊಟ್ಟಿದ್ದಾರೆ. ಜೊತೆಗೆ ಅವರು ತಂದಿದ್ದ ಕಾರನ್ನು ಜಖಂಗೊಳಿಸಿದ್ದಾರೆ.

ಕಾರ್ಯನಿಮಿತ್ತ ಗ್ರಾಮಕ್ಕೆ ಆಗಮಿಸಿದ ಶಾಸಕ ಚಲುವರಾಯಸ್ವಾಮಿ ಘಟನೆಯ ಮಾಹಿತಿ ತಿಳಿದು ಕೂಡಲೇ ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.