ವೇದ-ಪುರಾಣಗಳ ಪ್ರಕಾರ ಜೀವನದಲ್ಲಿ ಯಶಸ್ಸು ಕಾಣಲು ಯಾವ ನಕ್ಷತ್ರದವರು ಯಾವ ವೃಕ್ಷಗಳನ್ನು ಬೆಳೆಸಿದರೆ ಒಳ್ಳೇದು ಅಂತ ತಿಳುದುಕೊಳ್ಳಿ..

0
2483

ಪ್ರಕೃತಿ ಎಂದರೆ ಸೃಷ್ಟಿ. ಹಿಂದೂ ಧರ್ಮದ ಪ್ರಕಾರ, ಅದು ಬ್ರಹ್ಮಾಂಡದ ಅಸ್ತಿತ್ವ ಮತ್ತು ಕ್ರಿಯಗಳಿಗೆ ಕಾರಣವಾಗಿರುವ ಬುದ್ಧಿವಂತಿಕೆಯ ಮೂಲ ಸ್ವರೂಪ. ಮನುಷ್ಯ ತನಗೇನಾದರೂ ಒಳಿತನ್ನು ಮಾಡಿದರೂ, ಇಲ್ಲವಾದರೂ ಪ್ರಕೃತಿ ಮಾತ್ರ ಆತನಿಗೆ ಒಳ್ಳೆಯದನ್ನೇ ಮಾಡುತ್ತದೆ. ‘ಪ್ರಕೃತಿ ಪೂಜೆಗಿಂತಲೂ ಸರ್ವೋತ್ತಮವಾದ ಪೂಜೆ ಇನ್ನೊಂದಿಲ್ಲ. ಓಂಕಾರಕ್ಕಿಂತ ಮಿಗಿಲಾದ ಮತ್ತೊಂದು ಮಂತ್ರವಿಲ್ಲ’ ಎಂಬ ಮಾತಿದೆ. ಅಷ್ಟೇ ಯಾಕೆ ಭಾರತೀಯ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಗಳು ತಾವು ಜನ್ಮಿಸಿದ ನಕ್ಷ ತ್ರಕ್ಕೆ ಸಂಬಂಧಪಟ್ಟಂತೆ ಮರವನ್ನು ಬೆಳೆಸುವುದರಿಂದ ಆತನ ಆರೋಗ್ಯದ ಮೇಲೆ ಪರಿಣಾಮ ಬೀರುವುದು, ಅಂತೆಯೇ ಸಮಾಜಕ್ಕೂ ಅನುಕೂಲವಾಗುವುದು ಎಂದು ಹೇಳಲಾಗುತ್ತದೆ.

“ಪೂರ್ವಕರ್ಮಫಲಂ ಭೋಕ್ತುಮ್ ಜಂತೋರ್ಯಾದೀಹ ಜೀವನಮ್”

ಜೀವಿಯ ಪೂರ್ವದಲ್ಲಿ ಮಾಡಲ್ಪಟ್ಟ ಕರ್ಮದ ಫಲವನ್ನು ತೀರಿಸಲು ಪುನರ್ಜನ್ಮವನ್ನು ಹೊಂದುತ್ತಾನೆಂದು ಶಾಸ್ತ್ರ ಹೇಳುತ್ತದೆ. ಜನ್ಮ ತಾಳುವಾಗ ಅವರವರ ಕರ್ಮಫಲಕ್ಕನುಸಾರವಾಗಿ ಯೋನಿ, ಗಣ, ವರ್ಣ, ಲಿಂಗ, ಗುಣ, ನಾಡಿ, ಮುಖ, ಭೂತ, ದೃಷ್ಟಿ, ವೃಕ್ಷಾಧಿಗಳು ಹುಟ್ಟುವ ಕಾಲದ ನಕ್ಷತ್ರಾನುಸಾರ ಸಿದ್ಧವಾಗುತ್ತದೆ. ಹಾಗೆ ಪಂಚಭೂತಗಳ ಮೂಲಸ್ಥಿತಿ ಒಂದೇ ಇದ್ದು ಮನಃಶಾಂತಿ ಹೊಂದುವುದಲ್ಲದೇ, ರೋಗವೇ ಬರದಂತೆ ಕಾಪಾಡಲು ಸಾಧ್ಯವಾಗುತ್ತದೆ. ಕಾರಣ ಅವರವರ ಜನ್ಮನಕ್ಷತ್ರದ ವೃಕ್ಷವನ್ನು ನೆಟ್ಟು ಬದಕಿಸುವ ಹೊಣೆ ಅವನದೇ ಆಗಿರುತ್ತದೆ. ಹೀಗೆ ವ್ಯಕ್ತಿಗಳು ತಾವು ಜನ್ಮಿಸಿದ ನಕ್ಷ ತ್ರಕ್ಕೆ ಸಂಬಂಧಪಟ್ಟಂತೆ ಮರವನ್ನು ಬೆಳೆಸುತ್ತ ಬಂದರೆ ಆಯಾ ಭಾಗದಲ್ಲಿ ರೋಗಾಣು ಪ್ರವೇಶಿಸದೇ ಶುದ್ಧ ವಾತಾವರಣ ಉಂಟಾಗಿ ಶಾಂತಿ ನೆಲೆಸುವುದು ಎಂಬುವುದು ಶಾಸ್ತ್ರಜ್ಞರ ಅಭಿಪ್ರಾಯ.

ಕಲ್ಪಕೋಟಿ ಸಹಸ್ರಾಣಿ ಕಲ್ಪಕೋಟಿ ಶತಾನಿ ಚ ಸರ್ವಭೋಗಂ ಸಮಶ್ನಾತಿ ವಿಧಿವದ್‌ ಧ್ರುಮರೋಪಣೆ ||

ಸೂಕ್ತ ಕ್ರಮವನ್ನನುಸರಿಸಿ ವೃಕ್ಷ ಗಳನ್ನು ನೆಟ್ಟು ಬೆಳೆಸಿದಲ್ಲಿ ಆತನು ಸಹಸ್ರಾರು ಕೋಟಿ ಕಲ್ಪಗಳವರೆಗೆ ಸಕಲ ಸುಖಶಾಂತಿಯನ್ನು ಪಡೆಯುತ್ತಾನೆ ಎಂಬುದು ಈ ಶ್ಲೋಕದ ತಾತ್ಪರ್ಯ.

ಸಮಾಜ ಹಾಗೂ ಮನುಷ್ಯನ ಉತ್ತಮ ಆರೋಗ್ಯಕ್ಕೆ ವೃಕ್ಷಗಳೇ ಜೀವಾಳ. ನಗರೀಕರಣದಿಂದಾಗಿ ಹಾಗೂ ಮನುಷ್ಯರ ಸ್ವಾರ್ಥದಿಂದ ವೃಕ್ಷಗಳನ್ನು ಕಡಿಯುತ್ತಿರುವುದು ಬಹುತೇಕ ಸಮಸ್ಯೆಗಳಿಗೆ ಮಾನವ ಕಾರಣನಾಗಿದ್ದಾನೆ. ಇಷ್ಟಾದರೂ ತಾನು ಬಿಸಿಲಿನಲ್ಲಿ ನಿಂತು ಇತರರಿಗೆ ತಂಪನ್ನು ನೀಡುವ ವೃಕ್ಷಗಳನ್ನು ಬೆಳೆಸಿದರೆ ಅದು ಮಾನವನ ಬದುಕಿಗೆ ಫಲಪ್ರದ. ಹಾಗಾಗಿ ವೃಕ್ಷಗಳನ್ನು ಹಿಂದಿನಿಂದಲೂ ಪೂಜೆ ಮಾಡುತ್ತ ಬರುತ್ತಿದ್ದೇವೆ. ಇದರ ಜೊತೆ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಯಾವ ನಕ್ಷತ್ರಕ್ಕನುಗುಣವಾಗಿ ಬೆಳಸಬೇಕೆಂಬುದನ್ನು ಯಾವ ಮರಗಳನ್ನು ಬೆಳೆಸಿದರೆ ಯೋಗ್ಯ ಪ್ರದಾಯ ಎಂದು ನೀವು ತಿಳಿದುಕೊಳ್ಳಿ.

ಯಾವ ನಕ್ಷತ್ರದವರು ಯಾವ ವೃಕ್ಷಗಳನ್ನು ಬೆಳೆಸಿದರೆ ಒಳ್ಳೇದು

ಅಶ್ವಿನಿ, ಮಖ, ಮೂಲಾ :

ಅರಳಿ ಹಾಗೂ ಜಾಜಿ ಹೂವಿನ ಗಿಡವನ್ನು ಬೆಳೆಸಬೇಕು.

ಭರಣಿ, ಪುಬ್ಬ , ಪೂರ್ವಾಷಾಢ:

ಅತ್ತಿ (ಔದುಂಬರ) ಹಾಗೂ ಕಮಲದ ಹೂವಿನ ಗಿಡವನ್ನು ಬೆಳೆಸುವುದು ಒಳ್ಳೆಯದು.

ಕೃತ್ತಿಕಾ, ಉತ್ತರೆ, ಉತ್ತರಾಷಾಢ :

ಹೊಂಗೆ ಹಾಗೂ ಕನಕಾಂಬರ ಹೂವಿನ ಗಿಡವನ್ನು ಬೆಳೆಸುವುದು.

ರೋಹಿಣಿ, ಹಸ್ತ, ಶ್ರವಣ :

ಮುತ್ತುಗದ ಮರ ಹಾಗೂ ಬಿಳಿ ತಾವರೆಯನ್ನು ಬೆಳೆಸಿ ಪೋಷಿಸುವುದು.

ಮೃಗಶಿರಾ, ಚಿತ್ತ, ಧನಿಷ್ಠ :

ಕಗ್ಗಲಿ ಹಾಗೂ ದತ್ತೂರಿ ಹೂವಿನ ಗಿಡವನ್ನು ಬೆಳೆಸಬೇಕು.

ಆರಿದ್ರ, ಸ್ವಾತಿ, ಶತಭಿಷ :

ಮಾವು ಹಾಗೂ ಬೆಟ್ಟದ ತಾವರೆ ಹೂವಿನ ಗಿಡವನ್ನು ಬೆಳೆಸುವುದು.

ಪುನರ್ವಸು, ವಿಶಾಖ, ಪೂರ್ವಾಭಾದ್ರ :

ಗಂಧದ ಮರ ಹಾಗೂ ಪಾರಿಜಾತ ಹೂವಿನ ಮರವನ್ನು ಬೆಳೆಸಬೇಕು.

ಪುಷ್ಯ, ಅನುರಾಧ, ಉತ್ತರಾಭಾದ್ರ :

ಶಮೀ ವೃಕ್ಷ ಹಾಗೂ ತುಳಸಿ ಸಸಿಯನ್ನು ನೆಡಬೇಕು.

ಆಶ್ಲೇಷ, ಜ್ಯೇಷ್ಠ , ರೇವತಿ :

ಸಂಪಿಗೆ ಮತ್ತು ಮಲ್ಲಿಗೆ ಹೂವಿನ ಗಿಡವನ್ನು ಬೆಳೆಸುವುದು ಉತ್ತಮ.