ಇಡಿ ಪ್ರಪಂಚವೇ ಕಾತುರದಿಂದ ಕಾದು ನೋಡಲು ಕುಳಿತ್ತಿದ್ದ ಚಂದ್ರಯಾನ 2 ಗೆ ಅಲ್ಪ ಹಿನ್ನೆಡೆಯಾಗಿದ್ದು ಎಲ್ಲರಲ್ಲಿವೂ ಬೇಸರವುಂಟು ಮಾಡಿದೆ. ಬಾಹ್ಯಾಕಾಶ ರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದ ಇಸ್ರೋದ ಅದ್ಬುತವನ್ನು ಪ್ರಧಾನಿ ಮೋದಿಯವರು ಆಗಮಿಸಿದರು. ಆದರೆ ಆರ್ಬಿಟರ್ನಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯುವ ವೇಳೆ ಸಂಪರ್ಕ ಕಡಿತಗೊಂಡಿದೆ.ಈ ಮೂಲಕ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಈ ವೇಳೆ ಇಡಿ ದೇಶವೇ ಬೇಸರದಲ್ಲಿರುವಾಗ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷರಿಗೆ ಪ್ರಧಾನಿ ಮೋದಿಯವರು ಬೆನ್ನು ತಟ್ಟಿ ಧೈರ್ಯ ತುಂಬಿ ಹೀಗೆ.
ಹೌದು ಇನೇನು ಭಾರತ ಯಾವ ದೇಶಕ್ಕೂ ಕಡಿಮೆ ಇಲ್ಲದಂತೆ ಸಾಧನೆಗೆ ಕೆಲವೇ ನಿಮಿಷವಿರುವಾಗ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವ ಮುನ್ಸೂಚನೆ ನೀಡಿತಾದರೂ, ಲ್ಯಾಂಡಿಂಗ್ ಗೆ ಇನ್ನೂ ಕೇವಲ 2.1 ಕಿಮೀ ಅಂತರವಿದ್ದಾಗ ಸಿಗ್ನಲ್ ಕಡಿತವಾಯಿತು. ಹೀಗಾಗಿ ನಿಯಂತ್ರಣ ಕೊಠಡಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸುವ ಸತತ ಪರಿಶ್ರಮ ಪಟ್ಟರಾದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಸ್ರೋ ಅಧ್ಯಕ್ಷ ಕೆ ಶಿವನ್ ವಿಕ್ರಮ್ ಲ್ಯಾಂಡರ್ ನ ಸಂಪರ್ಕ ಕಡಿತವಾಗಿರುವ ಕುರಿತು ಘೋಷಣೆ ಮಾಡಿದರು. ಇದಕ್ಕೂ ಮೊದಲು ವಿಕ್ರಮ್ ಲ್ಯಾಂಡರ್ ನ ಒಟ್ಟು ನಾಲ್ಕು ಎಂಜಿನ್ ಗಳನ್ನು ಉರಿಸುವ ಮೂಲಕ ಲ್ಯಾಂಡರ್ ಅನ್ನು ಸುರಕ್ಷಿತ ಲ್ಯಾಂಡಿಂಗ್ ಹಂತಕ್ಕೆ ತರಲಾಗಿತ್ತು. ಆದರೆ ಲ್ಯಾಂಡರ್ ಸುರಕ್ಷಿತ ಲ್ಯಾಂಡಿಂಗ್ ಹಂತದ ತಲುಪುತ್ತಿದ್ದಂತೆಯೇ ನೌಕೆಯ ಸಂಪರ್ಕ ಕಡಿತವಾಯಿತು.
ಮೋದಿ ತಬ್ಬಿಕೊಂಡು ಅತ್ತ ಇಸ್ರೋ ಅಧ್ಯಕ್ಷ ಶಿವನ್;
ಚಂದ್ರನನ್ನು ಇನ್ನೇನು ಮುಟ್ಟಬೇಕು ಎನ್ನುವಷ್ಟರಲ್ಲಿ ಸಿಗ್ನಲ್ ಕಡಿತಗೊಂಡಿರುವುದು ಇಸ್ರೋ ವಿಜ್ಞಾನಿಗಳಿಗೆ ನಿರಾಸೆಯುಂಟು ಮಾಡಿದೆ. ಹೀಗಿರುವಾಗ ಪ್ರಧಾನಿ ಮೋದಿ ಇದು ಸೋಲಲ್ಲ ಒಂದು ಪ್ರಯೋಗ ನಿರಾಸೆಗೊಳ್ಳದಿರಿ,ಮತ್ತೆ ಪ್ರಯತ್ನಿಸೋಣ ದೇಶವೇ ನಿಮ್ಮೊಂದಿಗಿದೆ ಎಂಬ ಮಾತುಗಳಿಂದ ಧೈರ್ಯ ತುಂಬಿ ಪ್ರಧಾನಿ ಮೋದಿ ಇದು ಸೋಲಲ್ಲ ಒಂದು ಪ್ರಯೋಗ ನಿರಾಸೆಗೊಳ್ಳದಿರಿ,ಮತ್ತೆ ಪ್ರಯತ್ನಿಸೋಣ ದೇಶವೇ ನಿಮ್ಮೊಂದಿಗಿದೆ ಎಂಬ ಮಾತುಗಳಿಂದ ಧೈರ್ಯ ತುಂಬಿದ್ದಾರೆ.
ದೇಶಕ್ಕೆ ಮೋದಿಯ ದೈರ್ಯದ ಮಾತುಗಳು;
ಇಂದು ಬೆಳಗ್ಗೆ ಇಸ್ರೋ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನಿಗಳು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿ. ಕಳೆದ ಕೆಲವು ದಿನಗಳಿಂದ ಇಸ್ರೋ ವಿಜ್ಞಾನಿಗಳು ನಿದ್ದೆ ಮಾಡಿಲ್ಲ ಎಂದು ಎಲ್ಲರಿಗೂ ಗೊತ್ತು. ಬೆಳಗಿನ ಜಾವ ನಿಮ್ಮ ಮುಖದಲ್ಲಿ ಬೇಸರ ಭಾವ ನೋಡಿದಾಗ ಹೆಚ್ಚು ಕಾಲ ನಾನು ಅಲ್ಲಿ ಉಳಿಯಲಿಲ್ಲ. ದಿಢೀರ್ ಅಂತ ಸಂಪರ್ಕ ಕಡಿತಗೊಂಡಾಗ ನಿಮ್ಮೆಲ್ಲರ ಮುಖದಲ್ಲಿ ನಿರಾಸೆ ಮೂಡಿತು. ನಾನು ನಿಮ್ಮೆಲ್ಲರ ಮನಸ್ಸು ಅರ್ಥ ಮಾಡಿಕೊಂಡಿದ್ದೇನೆ. ಇಂದು ನಮಗೆ ಕೊನೆ ಹಂತದಲ್ಲಿ ಸಣ್ಣದೊಂದು ಅಡೆಯುಂಟಾಗಿದೆ. ಚಂದ್ರಯಾನ ಚಂದ್ರನನ್ನ ಅಪ್ಪಿಕೊಳ್ಳುವ ನಮ್ಮ ಇಚ್ಛಾಶಕ್ತಿ ಮತ್ತಷ್ಟು ಪ್ರಬಲಗೊಂಡಿದೆ. ಸಣ್ಣದೊಂದು ಅಡೆ ತಡೆಯಿಂದ ನಾವು ಹಿಂಜರಿಯದೇ ಅದರ ಪರಿಹಾರಕ್ಕಾಗಿ ಮುಂದಿನ ದಿನ ಕೆಲಸ ಮಾಡಬೇಕಿದೆ. ಕವಿಗಳು ಚಂದ್ರನ ಬಗ್ಗೆ ಹಲವು ಕವಿತೆಗಳನ್ನು ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಚಂದ್ರಯಾನದ ಬಗ್ಗೆ ಕವನಗಳನ್ನು ಬರೆಯಲಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆಯ ಬಗ್ಗೆ ನಮಗೆಲ್ಲರಿಗೂ ಇದೆ. ಚಂದ್ರನನ್ನ ಮುಟ್ಟುವ ಆಸೆ ಇನ್ನಷ್ಟು ಹೆಚ್ಚಾಗಿದೆ ಎಂದರು.