ಮೋದಿಯವರ ವಿದೇಶಿ ಪ್ರವಾಸದ ಖರ್ಚು ಕೇಳಿದ್ರೆ ನಿಮಗೆ ಶಾಕ್ ಅಗೋದಂತೂ ಖಂಡಿತ….!!

0
689

ಮೋದಿ ಅವರ ವಿದೇಶಿ ಪ್ರವಾಸ ವೆಚ್ಚ:

ಕಳೆದ ನಾಲ್ಕೂವರೆ ವರ್ಷದಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಬಿಡುವಿಲ್ಲದೆ ಶ್ರಮದಾಯಕವಾಗಿ ವಿದೇಶಿ ಪ್ರಯಾಣ ಮಾಡಿದ ವೆಚ್ಚದ ವಿವರವನ್ನು ವಿದೇಶಾಂಗ ಸಚಿವ ವಿ.ಕೆ. ಸಿಂಗ್ ನೀಡಿದ್ದಾರೆ. ಈ ಕುರಿತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸಚಿವ ಬಿನೋಯ್ ವಿಶ್ವವಂ 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ಮೋದಿ ಅವರು ಭೇಟಿ ನೀಡಿದ ರಾಷ್ಟ್ರಗಳ ಸಂಖ್ಯೆ ಮತ್ತು ವೆಚ್ಚವನ್ನು ಒದಗಿಸುವಂತೆ ವಿದೇಶಾಂಗ ಸಚಿವರಿಗೆ ಕೇಳಿದರು ಈ ಹಿನ್ನೆಲೆಯಲ್ಲಿ ವಿವರವನ್ನು ನೀಡಲಾಗಿದ್ದು ಒಟ್ಟಾರೆ ವೆಚ್ಚ ಸರಿಸುಮಾರು ಎರಡು ಸಾವಿರ ಕೋಟಿಯಾಗಿದೆ.

Also read: ದೇಶದ ರೈತರು ಮೋದಿಗೆ ಹಿಡಿ ಶಾಪ ಹಾಕುತ್ತಿದ್ದಾರೆ, ಲಕ್ಷಾಂತರ ರೈತರು ದೆಹಲಿಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಾರೆ, ಯಾಕೆ ಗೊತ್ತಾ?

ಸಚಿವರ ಹೇಳಿದ ರೀತಿಯಲ್ಲಿ ಜೂನ್ 15, 2014 ರಿಂದ ಡಿಸೆಂಬರ್ 3, 2018 ರ ನಡುವೆ ಮೋದಿಯವರ ಪ್ರಯಾಣದ ವಿವರಗಳನ್ನು ನೀಡಿದ್ದು. ಇದು ವಿವರವಾದ ವರದಿಯಾಗಿದ್ದು ಪ್ರತಿ ಪ್ರವಾಸಕ್ಕೂ ಖರ್ಚು ಮಾಡಿದ ಹಣವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಜೂನ್ 2014 ರಿಂದ ಜೂನ್ 2018 ರವರೆಗೆ ಖರ್ಚು ಮಾಡಿದ ಹಣದ ವಿವರವನ್ನು ನೀಡಿದೆ. ವಿಮಾನವನ್ನು ನಿರ್ವಹಿಸಲು 1,583.18 ಕೋಟಿ ರೂ. ಖರ್ಚು ಮಾಡಲಾಗಿದೆ. ನಂತರ ಬಾಡಿಗೆಗೆ 429.28 ರೂ. ಚಾರ್ಟರ್ಡ್ ವಿಮಾನಗಳು ಮತ್ತು ಹಾಟ್ಲೈನ್ ​​ಸೌಲಭ್ಯಗಳಿಗಾಗಿ 9.12 ಕೋಟಿ ರೂ. ಆಗಿದೆ.

ನಾಲ್ಕು ವರ್ಷಗಳಲ್ಲಿ 84 ಪ್ರಯಾಣ:

2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಇದುವರೆಗೆ 84 ವಿದೇಶ ಪ್ರವಾಸ ಮಾಡಿದ್ದಾರೆ. ಅದಕ್ಕಾಗಿ ಹೆಚ್ಚುಕಡಿಮೆ 2000 ಕೋಟಿ ಖರ್ಚು ಮಾಡಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಇಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. 4 ವರ್ಷದಲ್ಲಿ ನರೇಂದ್ರ ಮೋದಿಯವರ ವಿದೇಶ

ಪ್ರವಾಸದ ಖರ್ಚುವೆಚ್ಚ ಎಷ್ಟು ಗೊತ್ತೆ?

ಏರ್ ಕ್ರಾಫ್ಟ್, ಚಾರ್ಟರ್ಡ್ ಫ್ಲೈಟ್ಸ್ ನಿರ್ವಹಣಾ ವೆಚ್ಚ. ಪ್ರತಿ ಪ್ರವಾಸದ ವೆಚ್ಚದ ಜೊತೆಗೆ ಏರ್ ಇಂಡಿಯಾ ಒನ್ ಹಾಗು ಹಾಟ್ಲೈನ್ ನಿರ್ವಹಣೆ ಇದಕ್ಕೆ ಸೇರಿಸಲಾಗಿದೆ. ಏರ್ ಕ್ರಾಫ್ಟ್ ನಿರ್ವಹಣೆಗಾಗಿ ರೂ. 1583.18 ಕೋಟಿ, ಚಾರ್ಟರ್ಡ್ ಫ್ಲೈಟ್ಸ್‌ಗಳಿಗಾಗಿ ರೂ. 429.28 ಕೋಟಿ, ಸುರಕ್ಷಿತ ಹಾಟ್‌ಲೈನ್ ಸೌಲಭ್ಯಕ್ಕಾಗಿ ರೂ. 9.12 ಕೋಟಿ ರೂ. [2014-2017] ಖರ್ಚು ಮಾಡಲಾಗಿದೆ ಎಂದು ವಿ.ಕೆ.ಸಿಂಗ್ ಅವರು ಸಂಸತ್ತಿನಲ್ಲಿ ಲೆಕ್ಕ ನೀಡಿದ್ದಾರೆ.

ಜಾಹೀರಾತು ವೆಚ್ಚ:

ನರೇಂದ್ರ ಮೋದಿಯವರ ಯೋಜನೆಗಳು ಹಾಗೂ ಸಾಧನೆಗಳ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರವು 2014-15ರಿಂದ ಮಾಧ್ಯಮ ಜಾಹೀರಾತಿಗಾಗಿ ರೂ. 5200 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಠೋಡ್ ಹೇಳಿದ್ದಾರೆ.