ಲೋಕಸಭಾ ಚುನಾವಣೆ ನಡುವೆಯೇ ತೆರೆಗೆ ಬರಲಿದೆ ಪಿಎಂ ನರೇಂದ್ರಮೋದಿ’ ಬಯೋಪಿಕ್​ ಚಿತ್ರ; ಏಪ್ರಿಲ್ 12ರಿಂದ ಬಿಡುಗಡೆ ಸಜ್ಜಾಗಿದೆ ಚಿತ್ರತಂಡ..

0
429

ದೇಶಾದ್ಯಂತ ಸುದ್ದಿ ಮಾಡಿರುವ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ “ಪಿಎಂ ನರೇಂದ್ರ ಮೋದಿ” ಬಿಡುಗಡೆಗೆ ಸಿದ್ಧವಾಗಿದೆ! ಅಚ್ಚರಿ ಎಂದರೆ ಮೋದಿ ಬಯೋಪಿಕ್​ ಲೋಕಸಭಾ ಚುನಾವಣೆ ಸಮಯದಲ್ಲೇ ಬಿಡುಗಡೆ ಆಗುತ್ತಿದೆ. ವಿವೇಕ್ ಒಬೇರಾಯ್ ಅಭಿನಯದ ಪ್ರಧಾನಿ ಜೀವನಾಧಾರಿತ ಚಲನಚಿತ್ರ ಏಪ್ರಿಲ್ 12 ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೊದಲ ಪೋಸ್ಟರ್ ಜನವರಿ 7 ರಂದು ಬಿಡುಗಡೆಯಾಗಿ ಸಾಕಷ್ಟು ಹವಾ ಸೃಷ್ಟಿ ಮಾಡಿತ್ತು.

Also read: ಹವಾ ಎಬ್ಬಿಸಿದ ಮೋದಿ ಸೀರೆಗಳು; ದೇಶದ ತುಂಬೆಲ್ಲ ಮುಗಿ ಬಿದ್ದು ಖರೀಧಿಸುತ್ತಿರುವ ಮಹಿಳೆಯರು; ಸದ್ಯದಲ್ಲೇ ರಾಜ್ಯಕ್ಕೂ ಬರಲ್ಲಿವೆ ಮೋದಿ ಸೀರೆಗಳು..

ಅದರಂತೆ ಈ ಸಿನಿಮಾ ಕಳೆದ ಜನವರಿಯಲ್ಲಿ ಗುಜರಾತ್ ನಲ್ಲಿ ಈ ಸಿನಿಮಾ ಆರಂಭವಾಗಿತ್ತು. ಇದೀಗ ಮುಂಬೈನಲ್ಲಿ ಕೊನೆ ಹಂತದ ಚಿತ್ರೀಕರಣ ಮುಗಿಯುತ್ತಿದೆ. ಉತ್ತರಾಖಂಡ್ ನಲ್ಲಿ ಕೂಡ ಸಿನಿಮಾದ ಚಿತ್ರೀಕರಣ ನಡೆದಿದೆ. ಮೋದಿ ಅವರ ಆರಂಭದ ದಿನಗಳು, ರಾಜಕೀಯ ಪಯಣವನ್ನು ಉತ್ತರ ಕಾಶಿ ಜಿಲ್ಲೆಯ ಗಂಗಾ ಘಾಟ್, ಕಲ್ಪ್ ಕೇದಾರ್ ಮಂದಿರ್ ಮತ್ತಿತರ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.

ಏಪ್ರಿಲ್ 12 ರಂದು ಪಿಎಂ ಮೋದಿ ಬಿಡುಗಡೆ?

ಎರಡು ತಿಂಗಳ ಹಿಂದೆ ‘ಪಿಎಂ ನರೇಂದ್ರಮೋದಿ’ ಬಯೋಪಿಕ್​ ಸಿದ್ಧಗೊಳ್ಳಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ವಿವೇಕ್​ ಒಬೆರಾಯ್​ ಅವರು ಮೋದಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಫಸ್ಟ್​ಲುಕ್​ ಕೂಡ ರಿಲೀಸ್​ ಆಗಿತ್ತು. ಆದರೆ, ಸಾಕಷ್ಟು ಕೆಲಸಗಳು ಬಾಕಿ ಇರುವುದರಿಂದ ಈ ಸಿನಿಮಾ ಲೋಕಸಭಾ ಚುನಾವಣೆಗೆ ಮೊದಲು ತೆರೆಕಾಣುವುದಿಲ್ಲ ಎಂದೇ ಹೇಳಲಾಗಿತ್ತು. ಆದರೆ, ಸಿನಿಮಾದ ಶೂಟಿಂಗ್​​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಏ.12ರಂದು ಚಿತ್ರ ತೆರೆಗೆ ಬರುತ್ತಿದೆ.

ಬಿಡುಗಡೆಗೆ ಕಾಂಗ್ರೆಸ್ ವಿರೋಧ?

ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್​ ಬಿಡುಗಡೆಗೆ ಸಿದ್ಧವಾಗಿದೆ! ಅಚ್ಚರಿ ಎಂದರೆ ಮೋದಿ ಬಯೋಪಿಕ್​ ಲೋಕಸಭಾ ಚುನಾವಣೆ ಸಮಯದಲ್ಲೇ ಬಿಡುಗಡೆ ಆಗುತ್ತಿದೆ. ಇದಕ್ಕೆ ಕಾಂಗ್ರೆಸ್​ ತೀವ್ರ ವಿರೋಧ ವ್ಯಕ್ತಪಡಿಸಿದೆ. ಚುನಾವಣೆ ಸಮಯದಲ್ಲೇ ಮೋದಿ ಬಯೋಪಿಕ್​ ಬಿಡುಗಡೆ ಆಗುತ್ತಿರುವುದಕ್ಕೆ ವಿವಾದ ಸೃಷ್ಟಿಯಾಗುವ ಲಕ್ಷಣ ಗೋಚರವಾಗಿದೆ.

ನಿರ್ಮಾಪಕರ ಮಾತು;

Also read: ನರೇಂದ್ರ ಮೋದಿಗೆ ಮತ್ತೆ ಗೆಲುವಿನ ಸುವರ್ಣ ಕಿರೀಟ; ಭವಿಷ್ಯ ನುಡಿದ ಕೊಡಿಹಳ್ಳಿ ಮಠದ ಶ್ರೀಗಳು..

ಪಿಎಂ ಮೋದಿ ಸಿನಿಮಾ ವಿಶೇಷವಾದ ಸಿನಿಮಾ. ನೋಡುಗರನ್ನು ಈ ನಂಬಿಕೆಯ ಕಥೆ ಉತ್ತೇಜಿಸುತ್ತದೆ. ನೂರಾ ಮೂವತ್ತು ಕೋಟಿ ಜನರ ಕಥೆಯನ್ನು ಬಿಡುಗಡೆ ಮಾಡಲು ಸಂತೋಷ ಆಗುತ್ತದೆ ಎಂದು ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ. ವಿವೇಕ್ ಒಬೇರಾಯ್ ಹೊರತು ಪಡಿಸಿ ದರ್ಶನ್ ಕುಮಾರ್, ಬೊಮನ್ ಇರಾನಿ, ಮನೋಜ್ ಜೋಶಿ, ಪ್ರಶಾಂತ್ ನಾರಾಯಣನ್, ಝರೀನಾ ವಹಾಬ್ ಮತ್ತು ಬರ್ಖಾ ಬಿಷ್ತ್ ಸೇನ್ ಗುಪ್ತಾ ಮತ್ತಿತರರು ಅಭಿನಯಿಸಿದ್ದಾರೆ.

ಮೋದಿ ಹೆಸರಲ್ಲಿ ಮತ್ತೊಂದು ಸಿನಿಮಾ?

ಪಿಎಂ ನರೇಂದ್ರ ಮೋದಿ’ ಶೀರ್ಷಿಕೆಯ ಸಿನಿಮಾ ಆರಂಭದಿಂದಲೂ ಸಖತ್ ಸದ್ದು ಮಾಡುತ್ತಿದೆ. ಒಮಂಗ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಟ ವಿವೇಕ್ ಒಬೆರಾಯ್ ಪ್ರಧಾನಿಯಾಗಿ ಮಿಂಚಲಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಇದರ ನಡುವೆ ಮೋದಿ ಅವರ ಜೀವನ ಚರಿತ್ರೆಯನ್ನು ತಿಳಿಸುವ ಮತ್ತೊಂದು ಚಿತ್ರ ನಿರ್ಮಿಸಲು ಚಿತ್ರತಂಡವೊಂದು ಕೈ ಹಾಕಿದೆ. ‘ಓ ಮೈ ಗಾಡ್​’, ‘102 ನಾಟೌಟ್’​ ಚಿತ್ರಗಳನ್ನು ನಿರ್ದೇಶಿಸಿದ ಉಮೇಶ್ ಶುಕ್ಲಾ ಅವರು ಪ್ರಧಾನಿ ಮೋದಿ ಅವರ ತೆರೆ ಮರೆಯ ಕಹಾನಿಯನ್ನು ತೆರೆ ಮೇಲೆ ತರಲು ಮುಂದಾಗಿದ್ದಾರೆ. ಈಗಾಗಲೇ ‘ಪಿಎಂ ನರೇಂದ್ರ ಮೋದಿ’ ಹೆಸರಿನಲ್ಲಿ ಚಿತ್ರವೊಂದು ಮೂಡಿ ಬರುತ್ತಿರುವುದರಿಂದ ಶುಕ್ಲಾ, ತಮ್ಮ ಕಥೆಯನ್ನು ವೆಬ್​ ಸಿರೀಸ್ ರೂಪದಲ್ಲಿ ಬಿಡುಗಡೆ ಮಾಡಲಿದ್ದಾರೆ.

Also read: ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಎಫೆಕ್ಟ್; ಭಾರತದಲ್ಲೇ ಈಗ ಅನೇಕ ಶಸ್ತ್ರಾಸ್ತ್ರ ತಯಾರಿ, ಹೀಗೆ ಮುಂದುವರೆದರೆ ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ನಂಬರ್ ಒನ್ ಆಗಬಹುದು!!

ಈ ವೆಬ್​ ಸರಣಿಗೆ ‘ಮೋದಿ’ ಎಂದು ಶೀರ್ಷಿಕೆ ಫೈನಲ್ ಮಾಡಿದ್ದು, 10 ಸಿರೀಸ್​ಗಳಲ್ಲಿ ಮೂಡಿ ಬರಲಿದೆ. ಅಂದಹಾಗೆ ‘ಮೋದಿ’ ಸಿರೀಸ್​ಗೆ ಬಂಡವಾಳ ಹಾಕುತ್ತಿರುವುದು ಎರೋಸ್​ ನೌ ಸಂಸ್ಥೆ. ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಬಿಡುಗಡೆ ಮಾಡಿರುವ ತಂಡವು, ಪ್ರತಿ ಸರಣಿಯು 35 ರಿಂದ 40 ನಿಮಿಷಗಳಿರುತ್ತದೆ ಎಂದು ತಿಳಿಸಿದೆ.