ಬೆಂಗಳೂರಿನ ಪೊಲೀಸ್ ಅಧಿಕಾರಿಗಳಿಂದ ಜನರಿಗೆ ಹೊಸ ವರ್ಷಕ್ಕೆ ಇಂಥದ್ದೊಂದು ಉಡುಗೊರೆ ಹಿಂದೆಂದೂ ಸಿಕ್ಕೇ ಇರಲಿಲ್ಲ!!

0
549

ಚಿನ್ನಾಭರಣ ಕಳೆದಕೊಂಡಿದ್ದ ಜನರಿಗೆ ಪೊಲೀಸ್ ಅಧಿಕಾರಿಗಳಿಂದ ರಾತ್ರೋ ರಾತ್ರಿ ಬಂತು ಸರ್ಪ್ರೈಜ್ ಗಿಫ್ಟ್..

Also read: ಕೆ.ಎಸ್.ಆರ್.ಟಿ.ಸಿ. ಬಸ್ ಬ್ರೇಕ್ ಫೇಲ್ ಆದಾಗ, ತನ್ನ ಲಾರಿಗೆ ಗುದ್ದಿಸಿ ಗುದ್ದಿಸಿಕೊಂಡು 70 ಜನರ ಜೀವ ಉಳಿಸಿದ ಲಾರಿ ಚಾಲಕನ ಬಗ್ಗೆ ಓದಲೇ ಬೇಕು..

ಹೊಸ ವರ್ಷದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಭದ್ರತೆವಹಿಸುವಲ್ಲಿ ಬ್ಯುಸಿ ಆಗಿರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಈ ಸಮಯದಲ್ಲಿ ಯಾವುದೇ ಅಹಿತಕರ ಘಟಣೆಗಳು ಆಗದ ಹಾಗೆ ಹೆಚ್ಚಿನ ನಿಗಾವಹಿಸಿ ಎಲ್ಲಿವು ಜನರಿಗೆ ತೊಂದರೆಗಳು ಆಗದ ಹಾಗೆ ನೋಡಿಕೊಳ್ಳುವುದು ದೊಡ್ಡ ಕೆಲಸವಾಗಿರುತ್ತೆ, ಆದಕಾರಣ ಈ ಸಂಭ್ರಮದಲ್ಲಿ ಹೆಚ್ಚಿನ ಜಾಗೃತಿವಹಿಸುತ್ತಾರೆ. ಆದರೆ ಬೆಂಗಳೂರು ಪೊಲೀಸ್ ಅಧಿಕಾರಿಗಳು ಹೊಸ ವಷದಲ್ಲಿ ಭದ್ರತೆಯ ಅಷ್ಟೇ ಅಲ್ಲದೆ ಹೊಸ ರೀತಿಯಲ್ಲಿ ಮಧ್ಯರಾತ್ರಿ ಮನೆ ಮನೆಗೆ ತೆರಳಿ ಮಲಗಿದವರನ್ನು ಎಬ್ಬಿಸಿ ಸರ್ಪ್ರೈಜ್ ಗಿಫ್ಟ್ ನೀಡಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಏನಿದು ಪೊಲೀಸ್ ಸರ್ಪ್ರೈಜ್ ಗಿಫ್ಟ್?

ಕರ್ನಾಟಕದ ಪೊಲೀಸ್ ಅಧಿಕಾರಿಗಳು ಅಂದರೆ ಎಲ್ಲರು ಭಯ ಪಡುತ್ತಾರೆ, ಅಷ್ಟೊಂದು ಕರ್ತ್ಯವ್ಯ ನಿಷ್ಠ ವಹಿಸುತ್ತಾರೆ ಹಾಗೆಯೇ ಮಾನವಿತೆಯ ಗುಣಗಳು ಕೂಡ ತುಂಬಾನೇ ಇದೆ ಅನೋದಕ್ಕೆ ಬೆಂಗಳೂರಿನ ಈ ಪೊಲೀಸ್ ಅಧಿಕಾರಿಗಳನ್ನು ನೋಡಿದರೆ ತಿಳಿಯುತ್ತೆ. ಚಿನ್ನಾಭರಣ, ಬೈಕ್ ಗಳನ್ನು ಕಳೆದುಕೊಂಡಿದ್ದ ಸಂತ್ರಸ್ತ ಜನರ ಮನೆ ಬಾಗಿಲಿಗೇ ತೆರಳಿರುವ ಪೊಲೀಸರು ಸರ್ ಪ್ರೈಸ್ ಗಿಫ್ಟ್ ಗಳನ್ನು ನೀಡಿದ್ದಾರೆ.

ಕಳ್ಳತನವಾಗಿದ್ದ ಚಿನ್ನವನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದ ನಗರ ಪೊಲೀಸರು, ಜನತೆಗೆ ಸರ್ ಪ್ರೈಸ್ ಆಗಿ ನೀಡಬೇಕೆಂಬ ಕಾರಣಕ್ಕೆ ತಮ್ಮ ಬಳಿಯೇ ಇಟ್ಟುಕೊಂಡು ಸುಮ್ಮನಿದ್ದರು. ಇದರಂತೆ ನಿನ್ನೆ ಮಧ್ಯರಾತ್ರಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ರವಿ ಚನ್ನಣ್ಣನವರ್, ಡಿಸಿಪಿ ಅಣ್ಣಾಮಲೈ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿನ್ನ ಕಳೆದುಕೊಂಡವರ ಮನೆಗೆ ತೆರಳಿ ಬಂಗಾರವನ್ನು ವಾಪಸ್ ನೀಡಿದ್ದಾರೆ.

ಭಯಹುಟ್ಟಿಸಿದ ಪೋಲೀಸರ ಗಿಫ್ಟ್:

ರಾತ್ರಿ ಹೊತ್ತು ಮನೆ ಬಾಗಿಲನ್ನ ಪೊಲೀಸರು ಬಂದು ಬಡಿದರೇ ಒಂದು ಕ್ಷಣ ಏನನ್ನಿಸಬಹುದು ನೀವೇ ಊಹಿಸಿ. ಏನೋ ಆಗಿದೆ ಅಂತಾನೆ ಅರ್ಥ ಅಲ್ವಾ.? ನಿನ್ನೆ ಕೂಡ ಬೆಂಗಳೂರಿನ ಕೆಲ ಮನೆ ಮಾಲೀಕರಿಗೆ ಸಿಲಿಕಾನ್​ ಸಿಟಿ ಪೊಲೀಸರು ಹೀಗೆ ಶಾಕ್​ ಕೊಟ್ರು. ಕೇವಲ ಸಿಬ್ಬಂದಿ ಅಷ್ಟೆ ಅಲ್ಲದೇ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಮನೆ ಬಾಗಿಲಿಗೆ ಬಂದು ಬಾಗಿಲು ತೆಗೆಯಿರಿ, ಒಳಗೆ ಯಾರಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ. ಬಾಗಿಲು ತೆಗೆದು ನೋಡಿದವರಿಗೆ ಶಾಕ್.​ ಆದರೆ, ಪೊಲೀಸರು ಮಾತ್ರ ಹ್ಯಾಪಿ ನ್ಯೂ ಇಯರ್​ ಅಂತಾ ಅವರ ಕೈಗೆ ಚಿನ್ನದ ಆಭರಣಗಳನ್ನು ಕೊಟ್ಟಿದ್ದಾರೆ. ನಂತರ ವಿಷಯ ತಿಳಿದು ಖುಷಿಯಾದ ಮಾಲೀಕರು ಬಳಿಕ ಪೊಲೀಸರಿಗೆ ಧನ್ಯವಾದ ಹೇಳಿ ಹೊಸ ವರ್ಷದ ಶುಭಾಶಯ ತಿಳಿಸಿದರು.