ದಾಳಿಂಬೆ ಆರೋಗ್ಯದ ಹರಿಹಾರ.

0
1075
೧) ದಾಳಿಂಬೆಯಲ್ಲಿರುವ ಫೈಟೊ ಕೆಮಿಕಲ್ಸ್ ಗಳು ಹೃದಯ ರೋಗ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
೨) ದಾಳಿಂಬೆಯ ನಿತ್ಯ ಸೇವನೆ ಇಂದ ರಕ್ತದಲ್ಲಿರುವ ಕಡಿಮೆ ಸಾಂದ್ರತೆಯ ಕೊಬ್ಬಿನಂಶ ಬದಲಾವಣೆಗೊಂಡು ಕೊಲೆಸ್ಟ್ರಾಲ್ನಿಂದ ಆಗುವ ದುಷ್ಪರಿಣಾಮ ತಗ್ಗುತ್ತದೆ.
೩)ಇದು ಪ್ರೊಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ. ದಾಳಿಂಬೆ ಬೀಜದ ಎಣ್ಣೆಯನ್ನು ಸ್ತನ ಕ್ಯಾನ್ಸರ್ನಲ್ಲೂ ಉಪಯೋಗಿಸುತ್ತಾರೆ.
೪) ದಾಳಿಂಬೆ ರಸದಲ್ಲಿ ವೈರಸ್ ನಿರೋಧಕ ಮತ್ತು ರೋಗ ನಿರೋಧಕ ಗುಣಗಳಿದ್ದು ಇದು ದಂತಕ್ಷಯವನ್ನು ಕಡಿಮೆಗೊಳಿಸುತ್ತದೆ.
೫) ಇದರಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಮಧುಮೇಹಿಗಳು ಬಳಸಬಹುದು.
೬) ದಾಳಿಂಬೆಯಲ್ಲಿರುವ ಆಂಟಿಯಾಕ್ಸಿಡಂಟ್ ಗುಣಗಳು ರಕ್ತದಲ್ಲಿರುವ ಫ್ರೀ ರಾಡಿಕಲ್ಸ್ ಅನ್ನು ನಾಶಗೊಳಿಸುತ್ತದೆ.
೭) ದಾಳಿಂಬೆಯ ಬೇರಿನ ತೊಗಟೆಯಿಂದ ಜಂತು ಹುಳು ನಿವಾರಕ ಔಷದವನ್ನು ತಯಾರಿಸಲಾಗುತ್ತದೆ.
೮) ಸೂರ್ಯನ ಕಿರಣಗಳಿಂದ ಕಪ್ಪಾದ ಚರ್ಮವನ್ನು ಬಿಳಿಗೊಳಿಸಲು ದಾಳಿಂಬೆಯಲ್ಲಿರುವ ರಾಸಾಯನಿಕಗಳು ಉತ್ತಮವಾಗಿವೆ.