ಮಂತ್ರಾಲಯದ ಕೇಸರಿ ಬಣ್ಣದ ಪರಿಮಳ ಪ್ರಸಾದ ನಿಮ್ಮ ಆತ್ಮ ಶುದ್ಧಿಗೆ ದಿವ್ಯಔಷಧಿ, ಅದನ್ನು ಸೇವಿಸಿದರೆ ಖಂಡಿತ ರಾಯರ ಅನುಗ್ರಹ ನಿಮಗೆ ಲಭಿಸುವುದು.!

0
2235

Kannada News | Karnataka Temple History

ತುಂಗಭದ್ರಾ ತಟದ ಮಂತ್ರಾಲಯದಲ್ಲೀ ನೆಲೆಸಿರುವ ಕಲಿಯುಗದ ಕಲ್ಪವೃಕ್ಷ , ಕಾಮಧೇನುವಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಲು ಲಕ್ಷಾಂತರ ಭಕ್ತರು ಹೋಗುತ್ತಾರೆ. ದೇವರೆಂದರೆ ತಿರುಪತಿ ತಿಮ್ಮಪ್ಪನೇ, ಗುರುಗಳೆಂದರೆ ಮಂಚಾಲೆಯ ರಾಘಪ್ಪನೆ ಎಂಬ ನಾಣ್ನುಡಿ ನಮ್ಮೆಲ್ಲರಿಗೂ ಗೊತ್ತಿರುವುದೇ. ಅಂತಹ ದಿವ್ಯ ಪುರುಷರ ಮಹಿಮೆಯನ್ನು ಕೊಂಡಾಡುವುದು ನಮ್ಮೆಲ್ಲರ ಭಕ್ತಿ ಹಾಗು ಶ್ರದ್ದೆಗಳಿಗೆ ಹಿಡಿದ ಕನ್ನಡಿ. ರಾಘವೇಂದ್ರರು ದೈವಜ್ಞರರು, ಪವಾಡ ಪುರುಷರು. ಅವರ ಮಹಿಮೆಗಳು ಅಪಾರ.

ಮಂತ್ರಾಲಯ ವಾಸಿಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಸಾಕಷ್ಟು ಜನ ತಮ್ಮ ತನು ಮನದಿಂದ ಆ ರಾಯರನ್ನ ಆರಾಧಿಸಿ ಸಕಲ ಇಷ್ಟಾರ್ಥಗಳನ್ನು ಪಡೆದುಕೊಳ್ಳುತ್ತಾರೆ ಅವರು ನೀಡಿದ ಮಂತ್ರಾಕ್ಷತೆ ಮತ್ತು ಪರಿಮಳ ಪ್ರಸಾದ ದಿಂದ ಅವರ ಕೃಪಾ ಕಟಾಕ್ಷವನ್ನು ಹೊಂದಿದವರು ಸಕಲ ಇಷ್ಟಾರ್ಥಗಳನ್ನು ಹೊಂದುತ್ತಾರೆ.

ಹಾಗಾದರೆ ಬನ್ನಿ ಪರಿಮಳ ಪ್ರಸಾದದ ಮಹಿಮೆ ಏನು ಅಂತ ತಿಳಿಯೋಣ

ಮಂತ್ರಾಲಯಕ್ಕೆ ಆಗಮಿಸುವ ಎಲ್ಲರೂ ಪರಿಮಳ ಪ್ರಸಾದ ಪಡೆಯದೇ ಮರಳಲಾರರು. ಅಂಥ ಮಹತ್ವ ಪರಿಮಳ ಪ್ರಸಾದಕ್ಕಿದೆ. ತಿರುಪತಿಯಲ್ಲಿ ಹೇಗೆ ಲಾಡುಗೆ ಮಹತ್ವವಿದೆಯೋ ಹಾಗೆ ಮಂತ್ರಾಲಯದ ಪರಿಮಳ ಪ್ರಸಾದ ಕೂಡ ಭಕ್ತರ ಪಾಲಿಗೆ ಪವಿತ್ರವಾಗಿದೆ. ಜಯತೀರ್ಥರ ‘ವೇದಾಂತ ಸುಧಾ’ ಗ್ರಂಥಕ್ಕೆ ರಾಯರು ಟಿಪ್ಪಣಿ ಬರೆದ ‘ಪರಿಮಳ’ ಗ್ರಂಥದ ಹೆಸರನ್ನೇ ಪ್ರಸಾದಕ್ಕೆ ಇರಿಸಲಾಗಿದೆ.

ಇದನ್ನು ಸ್ವಾದಿಷ್ಟವಾದ ರವೆ, ಶುದ್ಧ ತುಪ್ಪ, ಪಚ್ಚಕರ್ಪೂರ, ಕೇಸರಿ, ಗೋಡಂಬಿ, ದ್ರಾಕ್ಷಿ, ಸಕ್ಕರೆ ಬೆರೆಸಿ ಪರಿಮಳ ಪ್ರಸಾದವನ್ನು ಶ್ರೀ ರಾಯರ ಮಠದಲ್ಲಿ ತಯಾರಿಸಲಾಗುತ್ತದೆ. ನಾಲ್ಕು ತುಂಡುಗಳಿರುವ 100 ಗ್ರಾಮ್‌ನ ಒಂದು ಪ್ಯಾಕೆಟ್‌ಗೆ 20 ರೂ. ರಾಯರ ಆರಾಧನೆ ಕಾಲಕ್ಕೆ 2-3 ಲಕ್ಷ ಪ್ಯಾಕೆಟ್‌ಗಳು ಮಾರಾಟವಾಗುತ್ತದೆ. ಪರಿಮಳ ಪ್ರಸಾದ ತಯಾರಿಸುವ ಪ್ರಕ್ರಿಯೆ ಶ್ರೀಮಠದ ಅಡುಗೆ ಶಾಲೆಯಲ್ಲಿ ದಿನವೂ ಬೆಳಗ್ಗೆ 8ಕ್ಕೆ ಆರಂಭಗೊಳ್ಳುತ್ತದೆ. ಆರಾಧನೆ ಸಂದರ್ಭದಲ್ಲಿ ಸಾಕಷ್ಟು ಮುಂಚಿತವಾಗಿಯೇ ಪರಿಮಳ ಪ್ರಸಾದ ತಯಾರಿಸಲಾಗುತ್ತದೆ. ಪರಿಮಳ ಪ್ರಸಾದದ ಕಂಪು ಅಂದಿಗೂ ಇಂದಿಗೂ ಎಂದೆಂದಿಗೂ ಅದೇ ಸ್ವಾದ. ಒಂದೇ ರೀತಿಯ ಪರಿಮಳಕ್ಕೆ ಈ ಪ್ರಸಾದ ಹೆಸರು ವಾಸಿಯಾಗಿದೆ.

ರಾಯರ ಬೃಂದಾವನ ನೋಡಿದರೆ, ರಾಯರಿಗೆ ಅಭಿಷೇಕ ಮಾಡುವುದನ್ನ ನೋಡಿದರೆ, ರಾಯರಿಗೆ ಅಭಿಷೇಕ ಮಾಡಿದಂತಹ ಅಭಿಷೇಕವನ್ನು ಪಾನ ಮಾಡಿದರೆ ಇವೆಲ್ಲವುದರಿಂದ ದೋಷ ಪರಿಹಾರವಾಗುತ್ತದೆ. ಗುರು ರಾಯರಿಗೆ ಮಾಡುವ ಆರತಿ ದರ್ಶನ ಪಡೆದರೆ ಸಾಕು ಶುಭಪಲ ಹರಸಿ ಬರುವುದು ಖಚಿತ. ಅದೇ ರೀತಿ ಮಂತ್ರಾಲಯದ ಪರಿಮಳ ಪ್ರಸಾದವು ಇಲ್ಲಿಗೆ ಆಗಮಿಸುವ ಭಕ್ತರ ಆತ್ಮಶುದ್ಧಿಗೆ ಧಿವ್ಯ ಔಷಧಿ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

Aslo Read: ಗುರು ರಾಘವೇಂದ್ರ ಸ್ವಾಮಿಗಳ ಸಾಧನೆ ಹಾಗೂ ಅವರು ಬರೆದಿರುವ ಗ್ರಂಥಗಳ ಬಗ್ಗೆ ತಿಳಿದು ರಾಯರ ಕೃಪೆಗೆ ಪಾತ್ರರಾಗಿ..