ಕಂಕಣ ಭಾಗ್ಯ ಕೂಡಿ ಬರಲು.. ಮಕ್ಕಳಾಗಲು.. ಮೇಲುಕೋಟೆಯ ನರಸಿಂಹ ಸ್ವಾಮಿಯನ್ನೊಮ್ಮೆ ದರ್ಶನ ಮಾಡಿ ಬನ್ನಿ

0
2064

Kannada News | Karnataka Temple History

ಮೇಲು ಕೋಟೆಯ ಚೆಲುವ ನಾರಾಯಣ ಸ್ವಾಮಿ ಸುಪ್ರಸಿದ್ಧ ದೇವರೆಂದು ಎಲ್ಲರಿಗೂ ತಿಳಿದೇ ಇದೆ.. ಅದೇ ರೀತಿಯಾಗಿ ಬೆಟ್ಟದ ಮೇಲಿರುವ ನರಸಿಂಹ ಸ್ವಾಮಿ ದೇವಾಲಯವೂ ಕೂಡ ಅತ್ಯಂತ ಶಕ್ತಿಶಾಲಿ ದೇವರ ಮಹಿಮೆಯ ಬಗ್ಗೆ ಅನೇಕರಿಗೆ ತಿಳಿದಿಲ್ಲ.. ಹೌದು ಮೇಲುಕೋಟೆಯ ನರಸಿಂಹ ಸ್ವಾಮಿ ದೇವಾಲಯದ ಬಗ್ಗೆ ತಿಳಿದರೆ ಅಚ್ಚರಿ ಪಡುತ್ತೀರಿ.. ಏಕೆಂದರೆ ಇಲ್ಲಿನ ದೇವರ ಮಹಿಮೆಯೆ ಅಂತಹುದು..

ಕಂಕಣ ಭಾಗ್ಯ ನೀಡುವ ದೇವರು

ವಯಸ್ಸಿಗೆ ಬಂದು ಹಲವು ವರ್ಷವಾಯಿತು.. ಕಂಕಣವೇ ಕೂಡಿ ಬರುತ್ತಿಲ್ಲ.. ಮದುವೆಯಾಗುತ್ತಿಲ್ಲ ಎನ್ನುವವರು ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ದರ್ಶನ ಪಡೆದು ಹರಕೆ ಕಟ್ಟಿಕೊಳ್ಳಿ.. ಇಲ್ಲಿ ದರ್ಶನ ಮಾಡಿದ ವರ್ಷದ ಒಳಗೆ ಶುಭವಾಗುವುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ..

ಮಕ್ಕಳಾಗದವರು

ಇಲ್ಲಿ ಇನ್ನೊಂದು ವಿಶೇಷ ಪದ್ಧತಿಯೊಂದು ಆಚರಣೆಯಲ್ಲಿದೆ.. ಹೌದು ಇಲ್ಲಿನ ಭಕ್ತರಿಗೆ ಮಕ್ಕಳಾಗದಿದ್ದರೆ ಈ ಸ್ವಾಮಿಯ ದರ್ಶನ ಮಾಡಿ ಗರ್ಭ ಗುಡಿಯ ದೇವರ ಮುಂದೆ ತೊಟ್ಟಿಲು ಕಟ್ಟಿ ಹರಕೆ ಕಟ್ಟಿಕೊಳ್ಳುತ್ತಾರೆ.. ತೊಟ್ಟಿಲು ಕಟ್ಟಲೆಂದೇ ದೇವರ ಮುಂದೆ ಕಂಬಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.. ಇದೂ ಕೂಡ ಹರಕೆ ಕಟ್ಟಿಕೊಂಡ ವರ್ಷದ ಒಳಗೆ ಶುಭ ಸುದ್ಧಿ ಸಿಗುತ್ತದೆ ಎಂಬುದು ಇಲ್ಲಿಯ ಜನರ ನಂಬಿಕೆ..  ಅಷ್ಟೇ ಅಲ್ಲದೇ ಹರಕೆ ಕಟ್ಟಿಕೊಂಡು ಇಡೇರಿದ ಬಳಿಕ ಮತ್ತೆ ಬಂದು ಇಲ್ಲಿ ದೇವರ ದರ್ಶನ ಮಾಡುವವರು ದಿನಕ್ಕೆ ನೂರಾರು ಜನ. ಇನ್ನೇಕೆ ತಡ ನಿಮ್ಮದೂ ಹರಕೆ ಇದ್ದರೇ ಮೇಲುಕೋಟೆಯ ನರಸಿಂಹ ಸ್ವಾಮಿಯ ದರ್ಶನವನ್ನೊಮ್ಮೆ ಮಾಡಿ ಬನ್ನಿ..