ರುಚಿಯಾದ, ಸ್ವಾದಿಷ್ಟಭರಿತ ಮತ್ತು ಫಟಾಫಟ್ ಅಂತ ಮಾಡಬಹುದಾದ ಕೇಸರಿ ಬಾತ್.. ಇಂದೇ ಟ್ರೈ ಮಾಡಿ..!!

0
1835

ಬೇಕಾಗುವ ಸಾಮಗ್ರಿಗಳು

 • ಸಣ್ಣರವೆ
 • ತುಪ್ಪ
 • ಡಾಲ್ಡ ತುಪ್ಪ
 • ಆಯಿಲ್
 • ಸಕ್ಕರೆ
 • ಗೋಡಂಬಿ
 • ಏಲಕ್ಕಿ
 • ಒಣದ್ರಾಕ್ಷಿ ಸ್ವಲ್ಪ
 • ಕೇಸರಿ ಬಣ್ಣ

ಮಾಡುವ ವಿಧಾನ

 • ಮೊದಲು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ, ಅದರಲ್ಲಿ ಗೋಡಂಬಿ, ಒಣದ್ರಾಕ್ಷಿಯನ್ನು ಫ್ರೈ ಮಾಡಿಕೊಂಡು ಇಟ್ಟುಕೊಳ್ಳಿ.
 • ನಂತರ ಅದೇ ಬಾಣಲೆಗೆ ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ ಬಿಸಿಯಾದ ಮೇಲೆ ರವೆಯನ್ನು ಹಾಕಿ, ನಂತರ ಡಾಲ್ಢ ತುಪ್ಪ ಮತ್ತು ಸ್ವಲ್ಪ ಸನ್‌ಫ್ಲವರ್ ಆಯಿಲ್‌ನ್ನು ಹಾಕಿ ಎಲ್ಲೂ ಗಂಟಾಗದಂತೆ ಕೈಯಾಡಿಸಿ. ರವೆಯನ್ನು ಕಡಿಮೆ ಉರಿಯಲ್ಲಿ ತಿರುವುತ್ತಾ ಇರಬೇಕು.
 • ನಂತರ ಇದಕ್ಕೆ ಎರಡು ಕಪ್‌ನಷ್ಟು ನೀರನ್ನು ಬಿಸಿ ಮಾಡಿಕೊಳ್ಳಿ. ರವೆ ಇರುವ ಬಾಣಲಿಗೆ ಕಾದ ಬಿಸಿನೀರನ್ನು ಹಾಕಿ. ರವೆ ಪ್ರಮಾಣ ಮತ್ತು ನೀರಿನ ಪ್ರಮಾಣ ಸಮ ಇರಬೇಕು.
 • ನಂತರ ಸ್ವಲ್ಪ ಕೇಸರಿಯನ್ನು ಹಾಕಿ. ನಂತರ 2 ಲೋಟ ಸಕ್ಕರೆಯನ್ನು ಹಾಕಿ ಮತ್ತೆ ಕೈಯಾಡಿಸಿ.
 • ಕೊನೆಯಲ್ಲಿ ಯಾಲಕ್ಕಿ ಪುಡಿ ಸೇರಿಸಿ ಚನ್ನಾಗಿ ಕಲಸಿ. ಈಗ ಕೇಸರಿ ಬಾತ್ ಸವಿಯಲು ಸಿದ್ದ.