ಹಸಿವಾದಾಗ ಕುರುಕು ತಿಂಡಿ ತಿನ್ನೋ ಬದಲು ಆರೋಗ್ಯಕ್ಕೆ ಒಳ್ಳೆದಾದ ಈ ಮೆಂತ್ಯ ಸೊಪ್ಪಿನ ಕಡುಬು ಮಾಡ್ಕೊಂಡು ತಿನ್ನಿ..

0
8519

ಬೇಕಾಗುವ ಸಾಮಗ್ರಿಗಳು

  • ಗೋಧಿ ಹಿಟ್ಟು
  • ಜೀರಿಗೆ
  • ಬೆಳ್ಳುಳ್ಳಿ
  • ಖಾರದ ಪುಡಿ
  • ಅರಿಶಿಣ ಪುಡಿ
  • ತುರಿದ ಒಣ ಕೊಬ್ಬರಿ
  • ಮೆಂತ್ಯೆ ಸೊಪ್ಪು
  • ಕಡಲೆ ಕಾಯಿ ಬೀಜ ಪುಡಿ
  • ತುಪ್ಪ,
  • ರುಚಿಗೆ ತಕ್ಕಷ್ಟು ಉಪ್ಪು,
  • ಕರಿಬೇವು,
  • ಕೊತ್ತಂಬರಿ ಸೊಪ್ಪು

  ಮಾಡುವ ವಿಧಾನ:

  • ಮೊದಲಿಗೆ, ಗೋಧಿ ಹಿಟ್ಟು, ಖಾರದ ಪುಡಿ, ಆರಿಶಿಣ, ಜೀರಿಗೆ, ಸ್ವಲ್ಪ ಉಪ್ಪು ಮಿಶ್ರಣ ಮಾಡಿ, ನಂತರ ನೀರು ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು.
  • ಕಲಿಸಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ಮಾಡಿದ ಉಂಡೆಗಳನ್ನು ಅಂಗೈಯಲ್ಲಿ ಇಟ್ಟುಕೊಂಡು, ಬಿಲ್ಲೆ ಆಕಾರ ಬರುವ ಹಾಗೆ ಒತ್ತಬೇಕು.
  • ನಂತರ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ಕುದಿಯುವ ನೀರಿನಲ್ಲಿ ಹಿಟ್ಟಿನ ಬಿಲ್ಲೆಗಳನ್ನು ಹಾಕಿ, ಐದು ನಿಮಿಷಗಳ ಕಾಲ ಕುದಿಸಬೇಕು.
  • ನಂತರ ಉಳಿದ ನೀರನ್ನು ತೆಗೆದು, ಬಿಲ್ಲೆಗಳನ್ನು ಬೇರೆ ಪಾತ್ರೆಯಲ್ಲಿ ತೆಗೆದಿಡಿ.
  • ಈಗ ಒಗ್ಗರಣೆಗಾಗಿ, ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ, ಸಾಸಿವೆ, ಜೀರಿಗೆ, ಕರಿಬೇವು, ಸುಲಿದ ಬೆಳ್ಳುಳ್ಳಿ ತುಂಡುಗಳು, ಸಣ್ಣಗೆ ಹೆಚ್ಚಿದ ಮೆಂತ್ಯೆ ಸೊಪ್ಪನ್ನು ಹಾಕಿ, ಹಸಿ ಹೋಗುವವರೆಗೂ ಎಣ್ಣೆಯಲ್ಲಿ ಬಾಡಿಸಬೇಕು.
  • ನಂತರ ಬೇಯಿಸಿದ ಬಿಲ್ಲೆಗಳನ್ನು ಮತ್ತು ರುಚಿಗೆ ತಕ್ಕಷ್ಟು ಖಾರ ಮತ್ತು ಉಪ್ಪನ್ನು ಸೇರಿಸಿ.
  • ನಂತರ ಕಡಲೆಕಾಯಿ ಬೀಜದ ಪುಡಿ, ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಿಸ ಬೇಕು.
  • ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಸವಿಯಲು ಕೊಡಿ. ಬೇಕಿದ್ದರೆ, ಟೊಮೆಟೊ ಸಾಸ್ ನೊಂದಿಗೆ ಸೇವಿಸಬಹುದು.
  • ಬಿಸಿ ಇದ್ದಾಗಲೇ ತಿನ್ನಲು ಚೆನ್ನಾಗಿರುತ್ತದೆ. ಅದರಲ್ಲೂ ಬಾಣಂತಿಯರಿಗೆ ಇದು ಉತ್ತಮ ಪೌಷ್ಟಿಕ ಆಹಾರ.