ದುಪ್ಪಟ್ಟು ಹಣ ನೀಡಿ ಕೇಕ್‌ ಖರೀದಿ ಮಾಡುವ ಬದಲು ಮನೆಯಲ್ಲಿಯೇ ತಯಾರಿಸಬಹುದಾದ ಎಗ್‌ಲೆಸ್‌ ವೆನಿಲ್ಲಾ ಕಪ್‌ ಕೇಕ್‌ ..!!

0
1318

ಹೊಸ ವರ್ಷ ಬಂತೆಂದರೆ ಕೇಕ್‌ಗಳಿಗೆ ದುಪ್ಪಟ್ಟು ಹಣ ನೀಡಿ ಖರೀದಿ ಮಾಡುವ ಬದಲು ಮನೆಯಲ್ಲಿಯೇ ಕಡಿಮೆ ದರದಲ್ಲಿ ಅದನ್ನು ತಯಾರಿಸಬ­ಹುದು. ಸಾಮಾನ್ಯವಾಗಿ ಕೇಕ್‌ ತಯಾರಿಸಲು ಎಗ್ ಬೇಕೇ ಬೇಕೇ ಇದರಿಂದ ವೆಜಿಟೆರಿಯನ್‌ಗಳು ಕೇಕ್ ತಿನ್ನುವುದಿಲ್ಲ. ಆದರೆ ಎಗ್‌ ಬಳಸದೆಯೂ ಕೂಡಾ ಕೇಕ್ ತಯಾರಿಸಬಹುದು. ಮೊಟ್ಟೆ ಇಷ್ಟಪಡದವರಿಗಾಗಿ ಇಲ್ಲಿದೆ ಎಗ್‌‌‌‌ಲೆಸ್‌ ವೆನಿಲ್ಲಾ ಕಪ್‌ ಕೇಕ್‌ ಮಾಡುವ ವಿಧಾನ….

ಬೇಕಾಗುವ ಸಾಮಗ್ರಿ:

 • ಮೈದಾ-1 ಕಪ್‌,
 • ಬೇಕಿಂಗ್‌ ಪೌಡರ್‌- 1 ಟಿಸ್ಪೂನ್‌,
 • ಬೇಕಿಂಗ್‌ ಸೋಡ- 1 ಟಿಸ್ಪೂನ್‌,
 • ಕಂಡೆನ್ಸ್‌ ಮಾಡಿದ ಹಾಲು- 1 ಕಪ್‌,
 • ಹಾಲು- 1 ಕಪ್‌,
 • ವಿನೆಗರ್‌- 1ಟಿಸ್ಪೂನ್‌,
 • ವೆನಿಲ್ಲಾ- 1 ಟಿ ಸ್ಪೂನ್‌

ಮಾಡುವ ವಿಧಾನ:

 • ಬೆಣ್ಣೆ ಹಾಗೂ ಕಂಡೆನ್ಸ್‌ಡ್‌ ಹಾಲನ್ನು ಇಲೆಕ್ಟ್ರಿಕ್‌ ಬೀಟರ್‌ನಲ್ಲಿ ಬೀಟ್‌ ಮಾಡಿ.
 • ವೆನಿಲ್ಲಾ ಹಾಗೂ ವಿನೆಗರ್‌ಗಳನ್ನು ಬೀಟ್‌ ಮಾಡುವಾಗ ಸೇರಿಸಿ ಮಿಕ್ಸ್‌ ಮಾಡಿ. ಆಗಾಗ ಸ್ವಲ್ಪ ಹಾಲನ್ನು ಸೇರಿಸಿ ಬ್ಲೆಂಡ್‌ ಮಾಡಿ. ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ಮೈದಾ ಸೇರಿಸಿ ಬೀಟ್‌ ಮಾಡಿ. ಈಗ ಹಿಟ್ಟು ದಪ್ಪನಾಗಿ ಕಂಡರೆ ಅದು ಸರಿಯಾಗಿದೆ ಎಂದರ್ಥ. ಇದಕ್ಕೆ ಇನ್ನಾವುದೇ ದ್ರವವನ್ನೂ ಸೇರಿಸಬೇಡಿ.
 • ಈಗ ಯಾವ ಆಕಾರಕ್ಕೆ ಬೇಕೋ ಆ ಆಕಾರಕ್ಕೆ ಹುಯ್ಯಿರಿ. ನಂತರ ಬೇಕಾದ ರೀತಿಯಲ್ಲಿ ಅಲಂಕಾರ ಕೂಡ ಮಾಡಬಹುದು.
 • ಪ್ರತಿ ಕಪ್‌ಗೂ ನಿಮಗೆ ಬೇಕಾದ ಟಾಪಿಂಗ್‌ ಹಾಕಿ. 180 ಡಿಗ್ರಿ ಪ್ರಿಹೀಟ್‌ ಮಾಡಿ ಓವನ್‌ನಲ್ಲಿ 20 ನಿಮಿಷ ಕಾಲ ಬೇಕ ಮಾಡಿ.