ಮಾಡಿ ನೋಡಿ ರುಚಿಯಾದ ‘ವೆಜಿಟಬಲ್‌ ಬಿರಿಯಾನಿ’….!!

0
2139

ಬೇಕಾಗುವ ಸಾಮಗ್ರಿಗಳು:

 • ಅಕ್ಕಿ
 • ಕ್ಯಾರಟ್
 • ಆಲೂಗಡ್ಡೆ
 • ಬೀನ್ಸ್
 • ಕ್ಯಾಪ್ಸಿಕಂ
 • ಹಸಿರು ಬಟಾಣಿ
 • ಕೆಂಪು ಮೆಣಸಿನಕಾಯಿ
 • ಪಲಾವ್ ಎಲೆ
 • ಈರುಳ್ಳಿ
 • ಬೆಳ್ಳುಳ್ಳಿ ಶುಂಠಿ ಪೇಸ್ಟ್
 • ದಾಲ್ಚಿನ್ನಿ
 • ಲವಂಗ
 • ಏಲಕ್ಕಿ
 • ಗೋಡಂಬಿ
 • ಹಸಿ ಕೊಬ್ಬರಿ- ಅರ್ಧ ಬಟ್ಟಲು
 • ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:

 • ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ಅರ್ಧ ಮುಕ್ಕಾಲು ಗಂಟೆ ನೆನೆಯಲು ಹಾಕಿ.
 • ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಿಸಿ ಅರಿಶಿಣ ಹಾಕಿ ಈರುಳ್ಳಿ, ಒಣ ಮೆಣಸಿನಕಾಯಿ, ತರಕಾರಿ, ದಾಲ್ಚಿನ್ನಿ, ಪಲಾವ್ ಎಲೆ, ಗೋಡಂಬಿ ಹಾಕಿ ಹುರಿಯಿರಿ.
 • ಕತ್ತರಿಸಿದ ಕ್ಯಾರಟ್, ಆಲೂಗಡ್ಡೆ, ಬೀನ್ಸ್, ಕ್ಯಾಪ್ಸಿಕಂ ತರಕಾರಿಗಳನ್ನು ಹಾಕಿ ಬೇಯಿಸಿ.
 • ನಂತರ ಅಕ್ಕಿಗೆ ಅಳತೆಯಂತೆ ನೀರು ಹಾಕಿ ಐದು ನಿಮಿಷಗಳ ವರೆಗೆ ಬೇಯಿಸಿ. ನಂತರ ನೆನೆಯಿಟ್ಟ ಅಕ್ಕಿ ಹಾಕಿ. ಅದಕ್ಕೆ ಉಪ್ಪು, ಕೊಬ್ಬರಿ, ಏಲಕ್ಕಿ ಮತ್ತು ಲವಂಗ ಹಾಕಿ ಅರ್ಧ ಗಂಟೆ ಬೇಯಿಸಿ.
 • ಈಗ ವೆಜಿಟೇಬಲ್‌ ಬಿರಿಯಾನಿ ಸವಿಯಲು ಸಿದ್ಧ.