ಇನ್ಮುಂದೆ ATM​ ಬಳಸದೇ ಸ್ಯ್ಕಾನ್ ಮಾಡಿ ಹಣ ಪಡೆಯಬಹುದು; ಇದರಿಂದ ಕಾರ್ಡ್​ ಬಳಕೆ ವೇಳೆ ನಡೆಯುತ್ತಿರುವ ವಂಚನೆಗಳಿಗೆ ಕಡಿವಾಣ ಹಾಕುತ್ತಾ?

0
668

ತಂತ್ರಜ್ಞಾನ ಬೆಳೆದಂತೆ ಜನರ ಕೆಲಸದಲ್ಲಿ ಬಹು ಮಟ್ಟಿನ ಸಮಯ, ಶ್ರಮ, ಕಡಿಮೆಯಾಗಿದೆ ಹಾಗೆಯೇ ಹಣಕಾಸು ವ್ಯವಹಾರದಲ್ಲಿ ಹೆಚ್ಚಿನ ಬೆಳೆವಣಿಗೆ ಕಂಡು ಬಂದಿದೆ. ಮೊದಲು ಹಣ ಪಡೆಯಲು ಬ್ಯಾಂಕಿನ ಸರದಿಯಲ್ಲಿ ನಿಂತು ಚೆಕ್ ಬರೆದು ಹಣ ಪಡೆಯಬೇಕಿತ್ತು ಈಗ ATM ಕಾರ್ಡ್ ಬಂದ್ದಾಗಿನಿಂದ ಎಷ್ಟೊಂದು ಅನುಕೂಲತೆ ಆಗಿದೆ. ಇನ್ನೂ ಈ ತಂತ್ರಜ್ಞಾನದಲ್ಲಿ ಹೊಸ ವಿಧಾನ ಒಂದು ಬಂದಿದು ಇನ್ಮುಂದೆ ನೀವು ಏಟಿಎಂ- ನಲ್ಲಿ ಕಾರ್ಡ್ ಇಲ್ಲದೆ ಹಣ ಪಡೆಯಬಹುದು. ಅದು ಹೇಗೆ ಅಂತಿರ? ಈ ಮಾಹಿತಿ ನೋಡಿ.


Also read: ಖದೀಮರು ಈಗ ಕೇವಲ ಒಂದೇ ಒಂದು ಎಸ್.ಎಂ.ಎಸ್. ಮೂಲಕ ಬ್ಯಾಂಕ್-ನಿಂದ ಹಣ ದೋಚುತ್ತಿದ್ದಾರೆ, ತಪ್ಪದೇ ಓದಿ!!
ಹೌದು ಹಲವಾರು ತರಹದಲ್ಲಿ ವಂಚನೆಗಳು ನಡೆಯುತ್ತಿವೆ. ಇದಕ್ಕೆ ಏನೆಲ್ಲಾ ಕಡಿವಾಣ ಹಾಕಿದರು ಕೂಡ ಅಂತರ್ಜಾಲ ಕಳ್ಳರು ಚಾಣಾಕ್ಷತನದಿಂದ debit- credit ಕಾರ್ಡ್ ಗಳಿಗೆ ಕನ್ನಹಾಕಿ ಹಣ ವಂಚನೆ ಮಾಡುತ್ತಿದು ಇದನ್ನು ತಪ್ಪಿಸಲು ಹೊಸ ತಂತ್ರಜ್ಞಾನದ ವಂಚನೆಗಳನ್ನು ತಡೆಯಲು ಬ್ಯಾಂಕುಗಳು ಮುಂದಾಗಿದ್ದು, ಕ್ಯೂಆರ್ ಕೋಡ್ ವಿತ್​ಡ್ರಾ ಸೌಲಭ್ಯವನ್ನು ಎಲ್ಲ ಬ್ಯಾಂಕುಗಳು ಒಪ್ಪಿಕೊಳ್ಳಲಿದೆ ಎನ್ನಲಾಗಿದೆ. ಇದರಿಂದ ಡೆಬಿಟ್ ಕಾರ್ಡ್​ ಬಳಕೆ ವೇಳೆ ನಡೆಯುತ್ತಿರುವ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲಿದೆ.

Also read: ನಿಮ್ಮ ಖಾಸಗಿ ಮಾಹಿತಿ ಸುರಕ್ಷಿತವಾಗಿರಬೇಕು ಅಂದ್ರೆ ತಕ್ಷಣವೇ ನಿಮ್ಮ ಆಧಾರ್ -ಅನ್ನು ಬ್ಯಾಂಕ್ ಹಾಗು ಮೊಬೈಲ್ ಕಂಪನಿಗಳಿಂದ ಡಿ-ಲಿಂಕ್ ಮಾಡಿಸಿ, ಹೇಗೆ ಅಂತ ಹೇಳ್ತೀವಿ ಓದಿ

ಏನಿದು ಸಂಶೋಧನೆ?

ಈಗಾಗಲೇ ದೇಶದ ಪ್ರಮುಖ ಬ್ಯಾಂಕುಗಳಿಗೆ ಎಟಿಎಂ ಯಂತ್ರಗಳನ್ನು ಪೂರೈಸುತ್ತಿರುವ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜಿ ಹೊಸ ಎಟಿಎಂಗಳಲ್ಲಿ ಕ್ಯೂಆರ್​ ಕೋಡ್ ಅಳವಡಿಸಲು ನಿರ್ಧರಿಸಿದೆ. ಈ ತಂತ್ರಜ್ಞಾನದಿಂದ ಡೆಬಿಟ್ ಕಾರ್ಡ್​ ಬಳಕೆದಾರರು ಇನ್ನು ಮುಂದೆ ಹಣ ವಿತ್​ಡ್ರಾ ಮಾಡಲು ಎಟಿಎಂನಲ್ಲಿ ಕಾರ್ಡ್​ ಸ್ವೈಪ್ ಮಾಡಬೇಕೆಂದಿಲ್ಲ. ಮೊಬೈಲ್ ಮೂಲಕವೇ ಸ್ಕ್ಯಾನ್ ಮಾಡಿ ಹಣ ಪಡೆಯಬಹುದಾಗಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಪ್ರಮುಖ ಎಟಿಎಂ ಯಂತ್ರಗಳಲ್ಲಿ ಈ ಸೌಲಭ್ಯ ಪ್ರಾರಂಭವಾಗಲಿದ್ದು ದೇಶದ ಪ್ರಮುಖ ಬ್ಯಾಂಕುಗಳಿಗೆ ನ್ಯಾಷನಲ್ ಕಾರ್ಪೋರೇಷನ್ ಆಫ್ ಇಂಡಿಯಾದ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಬಳಿಕ ಎಟಿಎಂ ನಲ್ಲಿ ಕಾರ್ಡ್​ ಸ್ವೈಪ್ ಮಾಡದೇ ಹಣವನ್ನು ಪಡೆದುಕೊಳ್ಳುವ ಸೌಲಭ್ಯ ಒದಗಿಬರಲಿದೆ.


Also read: ಏಟಿಎಂ ಪಾಸ್ವರ್ಡ್ ನೆನಪಿಗೆ ಬರ್ತಿಲ್ವಾ? ಚಿಂತೆಬೇಡ ಕೆಲವೇ ನಿಮಿಷಗಳಲ್ಲಿ ಹೊಸ ಪಾಸ್ವರ್ಡ್ ಸೆಟ್ ಮಾಡ್ಕೋಬಹುದು..

ಬರಿ ಸ್ಯ್ಕಾನ್ ಮಾಡಿ ಹೇಗೆ ಹಣ ಪಡೆಯಬಹುದು?

ಈ ಹೊಸ ತಂತ್ರಜ್ಞಾನದಿಂದ ಡಿಜಿಟಲ್​ ಪೇನಲ್ಲಿ ಬಳಸಲಾಗುವ ಕ್ಯೂಆರ್ ಕೋಡ್​ನ್ನು ಎಟಿಎಂಗಳಲ್ಲಿ ಅಳವಡಿಸಲಾಗುತ್ತದೆ. ಅಲ್ಲದೆ ಎಟಿಎಂ ಬಳಕೆದಾರರಿಗೆ ಹೊಸದೊಂದು ಆ್ಯಪ್ ಕೂಡ ಲಭ್ಯವಾಗಲಿದ್ದು, ಈ ಅಪ್ಲಿಕೇಶನ್​ ಮೂಲಕ ಎಟಿಎಂ ಯಂತ್ರದಲ್ಲಿರುವ ಕ್ಯೂಆರ್​ ಕೋಡ್​ನ್ನು ಸ್ಕ್ಯಾನ್ ಮಾಡಿ ಹಣ ವಿತ್​ಡ್ರಾ ಮಾಡಿಕೊಳ್ಳಬಹುದು. ಶೀಘ್ರದಲ್ಲೇ UPI ಆ್ಯಪ್ ಮೂಲಕ ವಹಿವಾಟು ನಡೆಸುತ್ತಿರುವವರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿದಿದೆ.