ನೀವೇ ಬೆಳೆದ ಹಣ್ಣು ತರಕಾರಿಗಳನ್ನು ನಿಮ್ಮ ಮನೆಯಲ್ಲೇ ಬೆಳೆಯಬೇಕೆಂಬ ಆಸೆ ಇದ್ಯಾ, ಈ ಮಹಿಳೆಯ ಸಾಧನೆ ನೋಡಿ ನೀವೂ ಬೆಳೆಯಬಹುದು!!

0
674

ಟೆರೇಸ್ ಗಾರ್ಡೆನಿಂಗ್ ಮಾಡಬೇಕು ಅಂತ ಯೋಚಿಸ್ತಿರೋರು ಈ ಸುದ್ದಿನಾ ತಪ್ಪದೇ ಓದಿ. ಯಾಕೆಂದ್ರೆ ಮಣ್ಣು ಬಳಸದೇ ಹಣ್ಣು-ತರಕಾರಿಗಳನ್ನು ಮನೆ ಮಹಡಿ ಮೇಲೆ ಬೆಳೆಯಬಹುದು. ಹೌದು.. ಪುಣೆಯಲ್ಲಿ ವಾಸಿಸುವ ನೀಲಾ ರೇಣವಿಕರ್ ಮನೆಗೆ ಬೇಕಾದ ಹಣ್ಣು ಮತ್ತು ತರಕಾರಿಗಳನ್ನು ಮಹಡಿ ಮೇಲೆ ಬೆಳೆಯುತ್ತಾರೆ. ದಿನಕ್ಕೆ 3-4ಗಂಟೆಗಳ ಕಾಲ ಮಹಡಿ ಮೇಲಿನ ತೋಟಕ್ಕಾಗಿ ಸಮಯ ಮೀಸಲಾಗಿಟ್ಟಿದ್ದಾರೆ. ಕಳೆದ 10 ವರ್ಷಗಳಿಂದ ಮಣ್ಣು ಇಲ್ಲದೆ ತರಕಾರಿಗಳು ಮತ್ತು ಹಣ್ಣು ಇತ್ಯಾದಿಗಳನ್ನು ಬೆಳೆಯುತ್ತಿದ್ದಾರೆ.

ಸುಮಾರು 450 ಚದರ ಅಡಿ ಟೆರೇಸ್ ಗಾರ್ಡನ್ ನಿಮಗೆ ಒಂದು ಜಮೀನಿನ ಭಾವನೆಯನ್ನು ನೀಡುತ್ತದೆ, ಅಲ್ಲಿ ಸೌತೆಕಾಯಿ, ಆಲೂಗಡ್ಡೆ, ಕಬ್ಬಿನಂತಹ ಇನ್ನೂ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಒಣಗಿದ ಎಲೆಗಳು, ಅಡಿಗೆಯ ತ್ಯಾಜ್ಯ ಪದಾರ್ಥ ಮತ್ತು ಸೆಗಣಿಗಳಿಂದ ನೀಲಾ ರೇಣವಿಕರ್ ಅವರು ತಮ್ಮ ಸಸ್ಯಗಳಿಗೆ ಕಾಂಪೋಸ್ಟ್ ತಯಾರಿಸುತ್ತಾರೆ. ಮಣ್ಣಿಲ್ಲದ ಈ ಕಾಂಪೋಸ್ಟ್ ಎಲೆಗಳಿಂದಾಗಿ ದೀರ್ಘಕಾಲದವರೆಗೆ ತೇವಾಂಶವನ್ನು ಉಳಿಯುತ್ತದೆ. ಇದು ಸಸ್ಯಗಳನ್ನು ಆರೋಗ್ಯದಿಂದ ಇರಿಸುತ್ತದೆ. ಅಲ್ಲದೆ ಸಸ್ಯಗಳಿಗೆ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ.

ಟೆರೇಸ್ ಗಾರ್ಡೆನಿಂಗ್ ಬಗ್ಗೆ ನೀಲಾ ಅವರು ಹೇಳುವುದೇನೆಂದರೆ, ‘ನಾನು ಯಾವುದೇ ರೀತಿಯ ತಂತ್ರಜ್ಞಾನವನ್ನು ಬಳಸುವುದಿಲ್ಲ. ಅದರ ಸಲುವಾಗಿ ಕೇವಲ ಪರಿಶ್ರಮ ಮತ್ತು ಸಮಯವನ್ನು ಕೊಡಬೇಕಾಗುತ್ತದೆ. ನನಗೆ ಕಿಚನ್ ನಲ್ಲಿ ಉಳಿದ ವೆಸ್ಟ್ ಪದಾರ್ಥಗಳನ್ನು ಏನು ಮಾಡಬೇಕೆಂಬುದು ತಿಳಿಯುತ್ತಿರಲಿಲ್ಲ. ಈ ಸಮಯದಲ್ಲಿ ಅವರು ಕಾಂಪೋಸ್ಟ್ ಮಾಡುವ ಸ್ನೇಹಿತರ ಸಹಾಯವನ್ನು ಪಡೆದೆ. ತದನಂತರ ಅವರು ಕಿಚನ್ ನಲ್ಲಿಯ ವೆಸ್ಟ್ ಪದಾರ್ಥ ಬೇರ್ಪಡಿಸುವದು ಹಾಗೂ ಅದರಿಂದ ಕಂಪೋಸ್ಟಿಂಗ್ ಮಾಡುವದನನ್ನು ಕಲಿತುಕೊಂಡೆ’ ಎಂದು ಹೇಳಿದ್ದಾರೆ. ಅಲ್ಲದೇ, ನೀಲಾ ಅವರು ಇಂಟರ್ನೆಟ್ ಮೂಲಕ ಮಣ್ಣು ಇಲ್ಲದೆ ಸಸ್ಯಗಳನ್ನು ಬೆಳೆಯುವ ತಂತ್ರಜ್ಞಾನದ ಬಗ್ಗೆ ಕಲಿತುಕೊಂಡರು. ಅಂದರೆ ಸಸ್ಯಗಳಿಗಾಗಿ ಹೊದಿಕೆ ಹೇಗೆ ತಯಾರಿಸುವುದು, ಅವುಗಳಿಗೆ ನೀರು ಎಷ್ಟು ಹಾಕುವದು, ಅವುಗಳ ಸಲುವಾಗಿ ಯಾವ ಪ್ರಕಾರದ ಗೊಬ್ಬರದ ಅವಶ್ಯಕತೆ ಇದೆ ಎಂಬುದರ ಕುರಿತು ಇಂಟರ್ನೆಟ್ ನಿಂದ ಅರಿತುಕೊಂಡರು. ಕೆಲವು ದಿವಸಗಳ ನಂತರ ಅವರು ತಮ್ಮ ಮನೆಯಲ್ಲಿಯೇ ಕಾಂಪೋಸ್ಟ್ ತಯಾರಿಸಲು ಪ್ರಾರಂಭಿಸಿದರು. ಅದರ ಸಲುವಾಗಿ ಒಂದು ಡಬ್ಬಿಯಲ್ಲಿ ಒಣಗಿದ ಎಲೆಗಳನ್ನು ಹಾಕಿದರು, ಸೆಗಣಿ ಹಾಕಿದರು ಮತ್ತು ಒಂದು ವಾರದ ಕಿಚನ್ ತ್ಯಾಜ್ಯ ಪದಾರ್ಥ ಸಹ ಅದರಲ್ಲಿಯೇ ಹಾಕಿದರು. ಒಂದು ತಿಂಗಳಿನ ನಂತರ ಆ ಡಬ್ಬಿಯಲ್ಲಿ ಗೊಬ್ಬರ ನಿರ್ಮಾಣವಾಗಿತ್ತಂತೆ.

ಮೊದಮೊದಲು ನೀಲಾ ಅವರು ಈ ಮಿಶ್ರಗೊಬ್ಬರವನ್ನು ಬಕೆಟ್‌ನಲ್ಲಿ ಹಾಕಿ ಅದರಲ್ಲಿ ಸೌತೆಕಾಯಿ ಬೀಜಗಳನ್ನು ನೆಟ್ಟು, ಸಮಯಕ್ಕೆ ಸರಿಯಾಗಿ ನೀರು ಹಾಕುತ್ತಿದ್ದರು. ಬಳಿಕ 40 ದಿನಗಳ ನಂತರ ಅದರಲ್ಲಿ ಎರಡು ಸೌತೆಕಾಯಿಗಳು ಬಿಟ್ಟವು. ಇದರಿಂದ ಧೈರ್ಯ ಬಂತು. ಮುಂದೆ ನೀಲಾ ಅವರು ಮೆಣಸಿನಕಾಯಿ, ಟೊಮ್ಯಾಟೋ ಮತ್ತು ಆಲೂಗಡ್ಡೆ ಮುಂತಾದವುಗಳನ್ನು ಬೆಳೆದರಂತೆ. ಅಷ್ಟೇ ಅಲ್ಲ ಮಣ್ಣು ಬಳಸದೇ ಕೃಷಿ ಮಾಡುವದರಿಂದ ಮುಖ್ಯವಾಗಿ ಮೂರು ಲಾಭಗಳಿವೆಯಂತೆ: ಮೊದಲನೆಯದು ಅವುಗಳಿಗೆ ಕೀಟಗಳು ಹತ್ತುವದಿಲ್ಲ, ಎರಡನೆಯದು ಕಳೆ ಅಥವಾ ಹುಲ್ಲು ಆಗುವದಿಲ್ಲ, ಮೂರನೆಯದು ಮಣ್ಣಿನ ಹೊಲದಲ್ಲಿ ಸಸ್ಯಗಳು ಪೋಷಣೆ ಮತ್ತು ನೀರನ್ನು ಹುಡುಕುತ್ತವೆ.

ಮನೆಯಲ್ಲಿ ಉಪಯೋಗಿಸಿರುವ ಹಳೆಯ ಡಬ್ಬಿಗಳು, ಪ್ಲಾಸ್ಟಿಕ್ ಪಾತ್ರೆಗಳು ಇತ್ಯಾದಿಗಳಲ್ಲಿ ಸಸ್ಯಗಳನ್ನು ಬೆಳೆಯಬಹುದು. ನೀಲಾ ಅವರ ಗಾರ್ಡನ್ ನಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಡಬ್ಬಿಗಳಿವೆ, ಅವುಗಳನ್ನು ಇನ್ನಷ್ಟು ಹೆಚ್ಚಿಸುವ ಯೋಚನೆ ಮಾಡುತ್ತಿದ್ದಾರೆ. ಅಲ್ಲದೆ ಅವರು ಈ ಗಾರ್ಡನ್ ನಲ್ಲಿಯ ತರಕಾರಿ ಮತ್ತು ಹಣ್ಣುಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನೀಲಾ ಅವರು ತಮ್ಮ ಗೆಳೆಯರೊಂದಿಗೆ ‘ಆರ್ಗೇನಿಕ್ ಗಾರ್ಡನಿಂಗ್ ಗ್ರೂಪ್’ ಎಂಬ ಹೆಸರಿನ ಫೇಸ್ಬುಕ್ ಗ್ರೂಪ್ ತಯಾರಿಸಿದ್ದಾರೆ. ಅದರಲ್ಲಿ ಸುಮಾರು ಮೂವತ್ತು ಸಾವಿರ ಜನರು ಭಾಗಿಯಾಗಿದ್ದಾರೆ. ಆ ಗ್ರೂಪ್ ನಲ್ಲಿ ನೀಲಾ ಅವರು ಗಾರ್ಡನಿಂಗ್ ಕುರಿತು ಟಿಪ್ಸ್ ಮತ್ತು ಟ್ರಿಕ್ಸ್ ಶೇರ್ ಮಾಡುತ್ತಿರುತ್ತಾರೆ. ಮಹಡಿ ಮೇಲೆ ತೋಟ ಬೆಳೆಯುವುದರಿಂದ ನನಗೆ ಯಾವುದೇ ಲಾಭವಾಗಬೇಕಾಗಿಲ್ಲ. ಅದರಿಂದ ನನಗೆ ಖುಷಿ ದೊರೆಯುತ್ತದೆ. ನಾನು ನೆಟ್ಟ ಬೀಜ ಫಲ ಕೊಟ್ಟಾಗ ಅದು ನೀಡುವ ಸಂತಸ ನನಗೆ ಮಾತ್ರ ಗೊತ್ತು ಎಂದು ಡಿಸೋಜಾ ತಮ್ಮ ತೋಟದ ಕೃಷಿ ಬಗ್ಗೆ ಹೇಳಿಕೊಳ್ಳುತ್ತಾರೆ ನೀಲಾ.

Also read: ಕರೋನ ಪರೀಕ್ಷೆ ನೆಗಟಿವ್ ಬಂದರೂ ಕಡ್ಡಾಯ ಕ್ವಾರಂಟೈನ್-ನಲ್ಲಿ ಇಡುವುದು ಸೂಕ್ತವೇ?