ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ,ರಮ್ಯಾ ನಂತರ ರಚಿತಾ ರಾಮ್…!

0
2774

ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ,ರಮ್ಯಾ ನಂತರ ರಚಿತಾ ರಾಮ್ ತಮ್ಮದೆ ಆದ ಒಂದು ಛಾಪು ಮೂಡಿಸಿದ್ದಾರೆ ಎಸ್ ಇದು ನಿಜ ಯಾಕೆ ಅಂದರೆ ಇವರು ಮಾಡಿದಂತಹ ಸಿನಿಮಾಗಳು ಸ್ಟಾರ್ ಹೀರೊ ಜೊತೆ ಮಿಂಚಿದ್ದಾರೆ. ಆದರೆ ಇವರು ಹೇಳುವ ಪ್ರಕಾರ ನಾನು ಯಾರನ್ನು ಮೀರಿಸಿ ಈ ಪಟ್ಟಕ್ಕೆ ಬರುವ ಅಸೆ ಇಲ್ಲ ಅನ್ನುತ್ತಾರೆ ರಚಿತಾ.

Image result for rachitha ram in ambareesha

‘ಜಾನಿ ಜಾನಿ ಯಸ್ ಪಾಪ’ ಸಿನೆಮಾದಲ್ಲಿ ನಟಿ ರಚಿತಾ ರಾಮ್ ಮೊದಲ ಬಾರಿಗೆ ದುನಿಯಾ ವಿಜಯ್ ಜೊತೆ ನಟಿಸುತ್ತಿದ್ದಾರೆ. ಇದು ‘ಜಾನಿ ಮೇರಾ ನಾಮ್’ ಸಿನೆಮಾದ ಮುಂದುವರೆದ ಭಾಗ. ಆ ಸಿನೆಮಾದಲ್ಲಿ ರಮ್ಯಾ ನಟಿಸಿದ್ದ ಪಾತ್ರಕ್ಕೆ ಈಗ ರಚಿತಾ ರಂಗು ತುಂಬಲಿದ್ದಾರೆ.

Image result for rachitha ram hd rathavara images

ಈ ಹಿಂದೆ ದರ್ಶನ್ ಅವರ ‘ಬುಲ್ ಬುಲ್’ ಸಿನೆಮಾದಲ್ಲಿ ಕೂಡ ರಮ್ಯಾ ನಟಿಸಬೇಕಿದ್ದ ಪಾತ್ರಕ್ಕೆ ರಚಿತಾ ರಾಮ್ ಬದಲಿಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

Image result for rachitha ram and darshan bubl bull

ಈಗ ಕನ್ನಡ ಚಿತ್ರರಂಗದಲ್ಲಿ ಹಲವು ಆಸಕ್ತಿದಾಯಕ ಪಾತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟಿ “ಈ ರಂಗದಲ್ಲಿ ಯಾರು ಯಾರನ್ನು ಬದಲಿಸಲು ಸಾಧ್ಯವಿಲ್ಲ” ಎನ್ನುತ್ತಾರೆ. “ನಾನು ರಮ್ಯಾ ಅವರ ಅತಿ ದೊಡ್ಡ ಅಭಿಮಾನಿ. ಅವರನ್ನಾಗಲಿ ಅಥವಾ ಇನ್ಯಾರನ್ನಾಗಲಿ ಮೀರಿ ಮಿಂಚುವ ಯಾವುದೇ ಇರಾದೆ ನನಗಿಲ್ಲ. ನನ್ನ ಪ್ರತಿಭೆಯನ್ನು ಗುರುತಿಸಿ ನಿರ್ದೇಶಕರು ಪಾತ್ರ ನೀಡುತ್ತಾರೆ ಎಂದೇ ನಂಬಿದ್ದೇನೆ.

Image result for rachitha ram hd photos

“ಜನ ರಮ್ಯಾ ನಂತರ ರಚಿತಾ ಎಂದು ಹೇಳಿದಾಗಲೆಲ್ಲಾ ನನಗೆ ಸಂತಸವಾಗುತ್ತದೆ. ಚಿತ್ರರಂಗದಲ್ಲಿ ಛಾಪು ಮೂಡಿಸಿದ ಮಾಲಾಶ್ರೀ ಮತ್ತು ರಮ್ಯಾ ನಟಿಸಿದ್ದ ಪಾತ್ರಗಳಂತಹ ಪಾತ್ರಗಳಲ್ಲಿ ನಟಿಸುವುದು ನನ್ನ ಕನಸಾಗಿತ್ತು” ಎನ್ನುತ್ತಾರೆ ರಚಿತಾ ರಾಮ್

Related image