ಇಂದಿನಿಂದ ಕಲಿಯುಗದ ಕಲ್ಪತರು ಶ್ರೀ ಗುರು ರಾಯರ ಆರಾಧನಾ ಮಹೋತ್ಸವ ಪ್ರಾರಂಭ

0
1256

ದಾರಿ ಕಾಣದಾಗಿದೆ ರಾಘವೇಂದ್ರನೇ ಎಂದು ದಾರಿ ತೋರಿಸುವಂತೆ ರಾಯರನ್ನು ಪ್ರಾರ್ಥಿಸುವವರ ಸಂಖ್ಯೆ ದೊಡ್ಡದು. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಶ್ರೀ ರಾಘವೇಂದ್ರರ ಆರಾಧನೆ ವಿಶ್ವದೆಲ್ಲೆಡೆ ನಡೆಯುತ್ತಿದೆ. ಇಂದಿನಿಂದ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನೆ ಮಹೋತ್ಸವ ಶುರುವಾಗಿದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮೂರು ದಿನಗಳವರೆಗೆ ನೆಡೆಯಲಿದೆ.ಆರಾಧನೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆ, ಭಜನೆ ಮತ್ತು ಸಂಗೀತ ಕಾರ್ಯಕ್ರಮಗಳು ಇಂದು ನಡೆಯುತ್ತವೆ.

source: meerasubbarao.wordpress.com

ಈ ಸಂದರ್ಭ ರಾಯರಿಗೆ ವಿವಿಧ ಸೇವೆಗಳು, ವೇದ ಪಾರಾ ಯಣ, ಫಲ ಪಂಚಾ ಮೃತ, ಅಭಿಷೇಕ, ಭಜನೆ, ಪಾದಪೂಜೆ, ಅರ್ಚನೆ, ಸರ್ವಸೇವೆ, ರಥೋತ್ಸವ, ಬ್ರಾಹ್ಮಣ ಅಲಂಕಾರ ಪೂಜೆ, ಅಷ್ಟೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ರಥೋತ್ಸವ ನಡೆಯುತ್ತವೆ.

source: gururaghavendra1.org

ಸುಮಾರು 300 ವರ್ಷ ವೃಂದಾವನದಲ್ಲಿಯೂ, 700 ವರ್ಷಗಳ ಕಾಲ ತಮ್ಮ ಗ್ರಂಥಗಳಲ್ಲಿಯೂ ಸನ್ನಿಹಿತರಾಗಿರುತ್ತೇವೆ ಎಂದು ಅಭಯವನ್ನು ನೀಡಿದ ರಾಘವೇಂದ್ರ ಸ್ವಾಮಿಗಳ ಗಂಥ ಸಂಪತ್ತು ತುಂಬಾ ದೊಡ್ಡದು. ಬಹಳ ಸರಳ ಹಾಗೂ ಸುಲಭ. ಇವರ ಧ್ಯಾನದಲ್ಲಿ ತೊಡಗಿದರೆ ನೆಮ್ಮದಿ, ಶಾಂತಿಯುತ ಬದುಕು ನಡೆಸಬಹುದು ಎಂಬ ನಂಬಿಕೆ ಇಂದಿಗೂ ಸಾವಿರಾರು ಜನರಲ್ಲಿದೆ. ಅದರಲ್ಲೂ ಈ ದಿನ ತುಂಬಾ ವಿಶೇಷವಾದ ದಿನ. ಈ ದಿನ ರಾಯರ ದರುಶನದಿಂದ ಸಕಲ ಪಾಪಗಳು ಕೂಡ ಪರಿಹಾರವಾಗುತ್ತವೆ. ಮಂತ್ರಾಲಯಕ್ಕೆ ಹೋಗಲಿಕ್ಕೆ ಆಗದೆ ಇರುವ ಜನರು ಇರುವಂತಹ ಮಠ ಗಳಿಗೆ ಅಥವಾ ಅವರು ತಮ್ಮ ಮನೆಯಲ್ಲಿಯೇ ರಾಘವೇಂದ್ರ ಸ್ವಾಮಿ ಆರಾಧನೆ ಮಾಡಬಹುದು.

source: sriraghavendra.weebly.com