ಭಾರತದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಇಡಿ ದೇಶವನ್ನು ಲಾಕ್ ಡೌನ್ ಮಾಡಿದೆ. ಇದರಿಂದ ಒಳ್ಳೆಯದೇ ಆದರು ಬಡವರು ಮತ್ತು ಕೂಲಿ ಕಾರ್ಮಿಕರಿಗೆ, ಭಿಕ್ಷೆ ಬೇಡುವರಿಗೆ ಊಟವಿಲ್ಲದೆ ಸಾಯುತ್ತಿದ್ದಾರೆ, ಇದು ಬಿಜೆಪಿ ಸರ್ಕಾರ ವೈಪಲ್ಯವೆಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಊಟ ವಿಲ್ಲದೆ ಒದ್ದಾಡುತ್ತಿರುವ ಬಡವರ ಮತ್ತು ಮಕ್ಕಳ ವೀಡಿಯೋವನ್ನು ಟ್ವೀಟ್-ರ್ ಹಂಚಿಕೊಂಡು, ನಾವು ಪ್ರೀತಿಸುತ್ತಿರುವ ಭಾರತದಲ್ಲಿ ಜನರಿಗೆ ಹಿಂಸೆ ನೀಡಿದಂತೆ ಆಗುತ್ತೆ, ಅದಕ್ಕಾಗಿ ಸರ್ಕಾರ ಬೇಗನೆ ಲಾಕ್ ಡೌನ್ ನಿಂದ ಆದ ಸಮಸ್ಯೆಗೆ ಸರಿಯಾದ ಉಪಾಯವನ್ನು ನೀಡಬೇಕು ಎಂದು ಹೇಳಿದ್ದಾರೆ.
The lockdown will devastate our poor & weak. It will deliver a heavy blow to the India we love. India isn’t black & white. Our decisions have to be carefully thought through. A more nuanced & compassionate approach is required to deal with this crisis. It’s still not too late. pic.twitter.com/qZuoABfOMi
— Rahul Gandhi (@RahulGandhi) March 27, 2020
ಹೌದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಾಕ್ಡೌನ್ ನಮ್ಮ ಬಡವರನ್ನು ಮತ್ತು ದುರ್ಬಲರನ್ನು ಧ್ವಂಸಗೊಳಿಸುತ್ತದೆ. ಇದು ನಾವು ಪ್ರೀತಿಸುವ ಭಾರತಕ್ಕೆ ಭಾರಿ ಹೊಡೆತವನ್ನು ನೀಡುತ್ತದೆ. ಭಾರತ ಕಪ್ಪು ಮತ್ತು ಬಿಳಿ ಅಲ್ಲ. ನಮ್ಮ ನಿರ್ಧಾರಗಳನ್ನು ಎಚ್ಚರಿಕೆಯಿಂದ ಯೋಚಿಸಬೇಕು. ಈ ಬಿಕ್ಕಟ್ಟನ್ನು ಎದುರಿಸಲು ಹೆಚ್ಚು ಸೂಕ್ಷ್ಮ ಮತ್ತು ಸಹಾನುಭೂತಿಯ ವಿಧಾನದ ಅಗತ್ಯವಿದೆ. ಅದಕ್ಕಾಗಿ ಬಡವರಿಗೆ ದಿನನಿತ್ಯದ ಬಳಕೆಯ ವಸ್ತುಗಳು ಮತ್ತು ಸ್ವಲ್ಪ ಹಣಕಾಸಿನ ಸಹಾಯ ಮಾಡಬೇಕು, ಬರಿ 5 ದಿನಗಳ ಬಂದ್ ಮಾಡಿದಕ್ಕೆ ಇಷ್ಟೊಂದು ತೊಂದರೆ ಆಗಿದೆ. ಇನ್ನೂ ಏಪ್ರಿಲ್ 14 ವರೆಗೆ ಬಂದ್ ಮಾಡಿದರೆ ಜನರು ಜೀವಂತ ಸಾಯುವ ಪರಿಸ್ಥಿತಿ ಬರುತ್ತೆ.
ಈ ಸಂದರ್ಭದಲ್ಲಿ ಭಾರಿ ಉದ್ಯೋಗ ನಷ್ಟವನ್ನು ತಡೆಗಟ್ಟಲು ಹೆಣಗಾಡುತ್ತಿರುವ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿ ಮತ್ತು ಆರ್ಥಿಕ ಸಹಾಯವನ್ನು ಘೋಷಿಸುವಲ್ಲಿ ಸರ್ಕಾರ ಶೀಘ್ರವಾಗಿ ಕಾರ್ಯನಿರ್ವಹಿಸಬೇಕು. “ಭಾರತವು ಕರೋನವೈರಸ್ ವಿರುದ್ಧ ಯುದ್ಧವನ್ನು ನಡೆಸುತ್ತಿದೆ. ಈ ಯುದ್ಧದಲ್ಲಿ ಸಾವುನೋವುಗಳನ್ನು ನಾವು ಹೇಗೆ ಕಡಿಮೆ ಮಾಡಬಹುದು? ನಮ್ಮ ತಂತ್ರವು 2 ಘಟಕಗಳನ್ನು ಹೊಂದಿರಬೇಕು ಎಂದು ನಾನು ನಂಬುತ್ತೇನೆ – COVID-19 ಅನ್ನು ನಿಭಾಯಿಸುವುದು ಮತ್ತು ವೈರಸ್ ಅನ್ನು ಪ್ರತ್ಯೇಕಿಸಿ ಮತ್ತು ಅದರ ಪಾರು ಮಾರ್ಗಗಳನ್ನು ನಿರ್ಬಂಧಿಸಿ. ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ವಲಸಿಗರಿಗೆ ಊಟ ಮತ್ತು ವಸತಿ ನೀಡಿ:
ಇಂದು ನಮ್ಮ ನೂರಾರು ಸಹೋದರ-ಸಹೋದರಿಯರು ಹಸಿವು ಮತ್ತು ಬಾಯಾರಿಕೆಯಿಂದ ಕಾಲ್ನಡಿಗೆಯಲ್ಲಿ ತಮ್ಮ ಕುಟುಂಬಗಳ ಜೊತೆ ಅವರವರ ಊರುಗಳಿಗೆ ತೆರಳುತ್ತಿದ್ದಾರೆ. ಅವರ ಈ ಕಷ್ಟದ ಹಾದಿಯಲ್ಲಿ ಸಮರ್ಥರು ವಲಸಿಗರಿಗೆ ಆಹಾರ, ಆಶ್ರಯ ಮತ್ತು ನೀರನ್ನು ಕೊಡಿ. ನಾನು ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಬುಧವಾರದಿಂದ ದೆಹಲಿ-ಗಾಜಿಯಾಬಾದ್ ಗಡಿಯಲ್ಲಿ ಸಾವಿರಾರು ವಲಸಿಗ ಕಾರ್ಮಿಕರು ತಮ್ಮ -ತಮ್ಮ ಊರುಗಳಿಗೆ ನೂರಾರು ಮೈಲಿಗಳ ದೂರ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಈ 21 ದಿನಗಳ ಲಾಕ್ಡೌನ್ ಆದೇಶದ ಬಳಿಕ ದಿನಗೂಲಿ ಕಾರ್ಮಿಕರು ತಮ್ಮ ಬದುಕು ದೂಡುವ ಬಗ್ಗೆ ಆತಂಕದಲ್ಲಿದ್ದಾರೆ. ಇನ್ನೊಂದು ಕಡೆ ಗುತ್ತಿಗೆದಾರರು ರಜೆ ಮೇಲೆ ಕಾರ್ಮಿಕರನ್ನು ಮನೆಗಳಿಗೆ ಕಳುಹಿಸುತ್ತಿದ್ದಾರೆ. ಸೋನಿಯಾ ಗಾಂಧಿಯವರ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಕೂಡ ದಿನಗೂಲಿ ಕಾರ್ಮಿಕರ ಸ್ಥಿತಿಯನ್ನು ಶೋಚನೀಯ ಎಂದು ಹೇಳಿದ್ದಾರೆ.