ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ 2400 ಎಟಿಎಂ ಮಿಷಿನ್ ಗಳ ಸ್ಥಾಪನೆ

0
680

ನವದೆಹಲಿ: ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ 2400 ಎಟಿಎಂಗಳನ್ನು ಸ್ಥಾಪನೆಗೆ ಚಾಲನೆ ನೀಡಲಿದೆ. ರೈಲ್ವೆ ಇಲಾಖೆಯಲ್ಲಿ ಪ್ರಥಮ ಎನ್ನಲಾದ ಸುಂಕ ರಹಿತ ಆದಾಯ ಗಳಿಕೆ ನೀತಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಸದ್ಯದಲ್ಲೇ ಅನಾವರಣಗೊಳಿಸಲಿದ್ದಾರೆ.
ಸುಂಕ ರಹಿತ ಮೂಲಗಳಿಂದ ವಾರ್ಷಿಕ 2000 ಕೋಟಿ ರೂ.ಗಳ ಆದಾಯ ಗಳಿಕೆ ಮೇಲೆ ಕಣ್ಣಿಟ್ಟಿರುವ ರೈಲ್ವೆ ಇಲಾಖೆ,
ಈ ನೀತಿಯು ಹಲವು ಯೋಜನೆಗಳನ್ನು ಒಳಗೊಂಡಿದೆ. ರೈಲ್ವೆ ಬ್ರಾಂಡಿಂಗ್, ರೈಲು ರೇಡಿಯೋ ಯೋಜನೆಗಳು ಮತ್ತು ದೇಶದ ಪ್ರಮುಖ ರೈಲು ಅಂಕಣಗಳಲ್ಲಿ 2400 ಎಟಿಎಂಗಳನ್ನು ಸ್ಥಾಪಿಸುವುದು ಇದರಲ್ಲಿ ಸೇರಿದೆ. ಮುಂದಿನ ಈ ವಾರ ಈ ನೀತಿಯನ್ನು ರೈಲ್ವೆ ಸಚಿವರು ಪ್ರಕಟಿಸಲಿದ್ದು , ಸುಂಕ ರಹಿತ ಮೂಲಗಳಿಂದ ವಾರ್ಷಿಕವಾಗಿ ಎರಡು ಸಾವಿರ ಕೋಟಿ ರೂ. ವರಮಾನ ಗಳಿಸಲು ಉದ್ದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.