ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಲಾಠಿ, ಖಡ್ಗ ಇಟ್ಟುಕೊಳ್ಳಬೇಕು, ಧರ್ಮ ವಿರೋಧಿಯ ತಲೆ ಕಡಿಯಬೇಕು; ರಾಜಾ ಸಿಂಗ್

0
989

ಹಿಂದೂ ವಿರಾಟ್ ಸಮಾವೇಶದಲ್ಲಿ ಹೈದರಾಬಾದ್ ಶಾಸಕ ರಾಜಾ ಸಿಂಗ್ ಪ್ರಚೋದನಕಾರಿ ಭಾಷಣ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಶಾಸಕರು ತಮ್ಮ ಭಾಷಣದಲ್ಲಿ ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಲಾಠಿ, ಖಡ್ಗ ಇಟ್ಟುಕೊಳ್ಳಬೇಕು. ಸಂದರ್ಭ ಬಂದರೆ ಧರ್ಮ ವಿರೋಧಿಯ ತಲೆ ಕಡಿಯಬೇಕು ಅಂತ ಫರ್ಮಾನ್ ಹೊರಡಿಸಿದ್ದರು. ಶಾಸಕರು ಈ ರೀತಿ ಹೇಳಿಕೆ ಕೊಡುತ್ತಿದ್ದಂತೆಯೇ ನೆರೆದಿದ್ದ ಯುವ ಸಮೂಹ ಕತ್ತಿ ಹಿಡಿದು ಕೇಕೆ ಹಾಕಿದೆ. ಯಾದಗಿರಿ ಪೊಲೀಸರ ಸಮ್ಮುಖದಲ್ಲಿಯೇ ಶಾಸಕರು ಈ ರೀತಿ ಹೇಳಿಕೆ ಕೊಟ್ಟಿರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಲಾಠಿ, ಖಡ್ಗ ಇಟ್ಟುಕೊಳ್ಳಬೇಕು. ಸಂದರ್ಭ ಬಂದರೆ ಧರ್ಮ ವಿರೋಧಿಯ ತಲೆ ಕಡಿಯಬೇಕು ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾಸಿಂಗ್‌ ಠಾಕೂರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ವಿರಾಟ್‌ ಹಿಂದೂ ಸಮಾವೇಶದಲ್ಲಿ ಮಾತನಾಡಿರುವ ಅವರು, ಹಿಂದು ಯುವಕರು ಖಡ್ಗದ ತರಬೇತಿ ಪಡೆಯುವುದರಿಂದ ಧರ್ಮ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬಹುದು. ಈಗಾಗಲೇ ರಾಜ್ಯದಲ್ಲಿ ಹಿಂದುಗಳ ಹತ್ಯೆ ನಡೆಯುತ್ತಿರುವ ವೇಳೆಯಲ್ಲಿ ತಮ್ಮ ಸುರಕ್ಷತೆಗಾಗಿ ಹಿಂದುಗಳೆಲ್ಲರೂ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂದಿದ್ದಾರೆ.

ನೂರು ಕೋಟಿ ಜನರನ್ನು ಸಂರಕ್ಷಣೆ ಮಾಡಲು 33 ಲಕ್ಷ ಪೊಲೀಸರಿದ್ದಾರೆ. 13 ಲಕ್ಷ ಸೇನಾ ಸಿಬ್ಬಂದಿಯಿದ್ದಾರೆ. ಆದರೂ ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ದೇಶದಲ್ಲಿ ಆಂತರಿಕ ಗಲಭೆ ಉಂಟಾದಾಗ ಪೊಲೀಸರು ಮತ್ತು ಸೇನಾಪಡೆಯಿಂದ ಯಾವುದೇ ರೀತಿಯ ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ವೇಳೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ರಾಜಾ ಸಿಂಗ್ ಅವರಿಗೆ ಖಡ್ಗವನ್ನು ನೀಡಿದರು. ಬಳಿಕ ವೇದಿಕೆಯಲ್ಲೇ ಶಾಸಕ ಖಡ್ಗವನ್ನು ಪ್ರದರ್ಶನ ಮಾಡಿದರು. ಇದೆಲ್ಲವೂ ಪೊಲೀಸರ ಎದುರೇ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಜಾಣ ಮೌನ ವಹಿಸಿದ್ದರು.