ಕೊರೊನಾ ಪೀಡಿತ ರೋಗಿಗಳ ಹಿತಕ್ಕೆ ಪಟಾಕಿಗಳನ್ನು ಬ್ಯಾನ್ ಮಾಡಿದ ರಾಜಸ್ಥಾನ ಸರ್ಕಾರ; ಕರ್ನಾಟಕದಲ್ಲಿಯೂ ಬ್ಯಾನ್ ಮಾಡಬೇಕೆ??

0
151

ಬೆಂಗಳೂರು: ಇಡೀ ಜಗತ್ತನ್ನೇ ಆವರಿಸಿರುವ ಕೊರೊನಾ ಮಹಾಮಾರಿ ಹಬ್ಬ-ಹರಿದಿನಗಳ ಆಚರಣೆಗೂ ಕೊಕ್ಕೆ ಹಾಕಿದೆ. ಕೊರೊನಾ ಸೋಂಕು ಹರಡುವಲ್ಲಿ ಮಾಲಿನ್ಯದ ಪಾತ್ರವೂ ಇರುವ ಕಾರಣದಿಂದಾಗಿ ಈಗಾಗಲೇ ರಾಜಸ್ಥಾನದಲ್ಲಿ ಪಟಾಕಿಯನ್ನು ನಿಷೇಧಿಸಲಾಗಿದೆ.

ಈ ಬಗ್ಗೆ ರಾಜ್ಯದಲ್ಲೂ ಕೊರೊನಾ ಸೋಂಕಿತರ ಹಿತ ಕಾಪಾಡುವ ಸಲುವಾಗಿ ಪಟಾಕಿಗಳನ್ನು ನಿಷೇಧಿಸುವುದು ಉತ್ತಮ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಅಂತೆಯೇ, ದೀಪಾವಳಿ ಹಬ್ಬದ ವೇಳೆ ಪಟಾಕಿ ಬಳಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಶ್ವಾಸಕೋಶದ ಸೋಂಕಾಗಿರುವ ಕೊರೊನಾ ಉಸಿರಾಟದ ಸಮಸ್ಯೆಯನ್ನು ಸೃಷ್ಟಿಸಿ ಸೋಂಕಿತರನ್ನ ಸಾವಿನ ದವಡೆಗೆ ದೂಡುತ್ತಿದೆ. ಮಾಲಿನ್ಯ ಕಾರಕಗಾಳಿ ಉಸಿರಾಟ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ನಗರ ಪ್ರದೇಶದಲ್ಲಿ ಮಾಲಿನ್ಯದ ಪ್ರಭಾವ ಹೆಚ್ಚಿರುವ ಕಾರಣ ಪಟಾಕಿ ಬಳಕೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ರಾಜ್ಯ ಸರ್ಕಾರದ ಮುಂದಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿದ್ದು ಆ ಸಮಿತಿ ಕೊರೋನಾ ಕಾಲದ ದೀಪಾವಳಿಯಲ್ಲಿ ಪಟಾಕಿ ಬಳಕೆ ಬೇಕೆ, ಬೇಡವೋ ಎನ್ನುವುದರ ಬಗ್ಗೆ ವರದಿ ನೀಡಲಿದೆ.

ಈ ವರದಿ ಆಧರಿಸಿ ಹಬ್ಬದಲ್ಲಿ ಪಟಾಕಿ ಬಳಕೆ, ಹಾಗೂ ರಾಜ್ಯದಲ್ಲಿ ಪಟಾಕಿ ಮಾರಾಟ ಮಾಡುವುದರ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
ಈಗಾಗಲೇ ರಾಜಸ್ಥಾನ ಸರ್ಕಾರ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ತನ್ನ ರಾಜ್ಯದಲ್ಲಿ ಪಟಾಕಿ ಬಳಕೆಗೆ ನಿಷೇಧ ಹೇರಿದೆ. ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ಪಟಾಕಿ ನಿಷೇಧದ ಬಗ್ಗೆ ಟ್ವೀಟ್ ಮಾಡಿರುವ ಅಶೋಕ್ ಗೆಹ್ಲೋಟ್ ಅವರು, ಸಿಡಿಮದ್ದು ಸಿಡಿಸುವ ಮೂಲಕ ಕಲುಷಿತ ವಾತಾವರಣದಿಂದ ಕೊರೊನಾ ಸೋಂಕಿಗೆ ಒಳಗಾದ ರೋಗಿಗಳಿಗೆ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿರುವ ನಿಟ್ಟಿನಲ್ಲಿ ಸಿಡ್ಡಿ ಮದ್ದು ಮಾರಾಟಕ್ಕರ ನಿಷೇಧ ಹೇರಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಪಟಾಕಿ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಕಠೀಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅಶೋಕ್ ಗೆಹ್ಲೂಟ್ ಅವರು, ‘ಸಿಡಿಮದ್ದು ಸಿಡಿಸುವ ಮೂಲಕ ಕಲುಷಿತ ವಾತಾವರಣದಿಂದ ಕೋವಿಡ್ 19 ಸೋಂಕಿಗೆ ಒಳಗಾದ ರೋಗಿಗಳಿಗೆ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿರುವ ನಿಟ್ಟಿನಲ್ಲಿ ಸಿಡಿಮದ್ದು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಪಟಾಕಿ ಮಾರಾಟ ಮಾಡಿದಲ್ಲಿ ಅಂತಹವರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇನ್ನು ಈಗಾಗಲೇ ದೆಹಲಿ ಸರ್ಕಾರ ಕೂಡ ದೀಪಾವಳಿ ಸಂದರ್ಭದಲ್ಲಿ ಪರಿಸರ ಸ್ನೇಹಿ ಹಸಿರು ಪಟಾಕಿ ಮಾತ್ರ ಉಪಯೋಗಿಸುವಂತೆ ಆದೇಶ ನೀಡಿದೆ. ಹಾಗೊಂದು ವೇಳೆ ಸಿಡಿಮದ್ದು ಮಾರಾಟ ಕಂಡುಬಂದಲ್ಲಿ ದುಬಾರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.