ದೊಡ್ಮನೆಯಿಂದ ಸಿವಿಲ್ ಸರ್ವಿಸ್ ಆಕಾಡೆಮಿ
ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲು, ಭಾಗ್ಯವಂತರು ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಕರ್ನಾಟಕದಜನರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದವರು ಡಾ.ರಾಜ್ಕುಮಾರ್. ಇವರ ನೆನಪನ್ನು ಶಾಶ್ವತವಾಗಿ ಹಸಿರುಉಳಿಯುವಂತೆ ಮಾಡಲು ದೊಡ್ಮನೆ ಯೋಜನೆಯೊಂದನ್ನು ರೂಪಿಸಿಕೊಂಡಿದೆ.
ಐ.ಎ.ಐಸ್ ಹಾಗೂ ಐ.ಪಿ.ಎಸ್ ಹುದ್ದೆಯ ಕನಸು ಕಾಣುತ್ತಿರುವ ಕರ್ನಾಟಕ ಪ್ರತಿಭವಂತ ಬಡ ವಿದ್ಯಾರ್ಥಿಗಳಿಗೆ ಅನುಕೂಲಕೊಸ್ಕರ ರಾಜ್ಯದಲ್ಲಿ ಸಿವಿಲ್ ಸರ್ವಿಸ್ ಆಕಾಡೆಮಿ ತೆರೆಯಲು ರಾಜ್ ಕುಟುಂಬದವರು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ರಾಘವೇಂದ್ರ ರಾಜ್ಕುಮಾರ್, ನಮ್ಮ ರಾಜ್ಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಿವಿಲ್ ಸರ್ವಿಸ್ತರಬೇತಿಗೆ ಬೇರೆ ರಾಜ್ಯಗಳಿಗೆ ಹೋಗುತ್ತಾರೆ. ಇದನ್ನು ಮನಗೊಂಡ ನಮ್ಮ ಕುಟುಂಬ ಈ ತೀರ್ಮಾನವನ್ನು ಕೈಗೊಂಡಿದೆ. ಅಲ್ಲದೆರಾಜ್ಯದಿಂದ ಸಿವಿಎಲ್ ಸರ್ವಿಸ್ಗೆ ನೇಮಕವಾಗುವರ ಸಂಖ್ಯೆ ಕಡಿಮೆ. ನಮ್ಮ ರಾಜ್ಯದಿಂದಲೂ ಹೆಚ್ಚು ಹೆಚ್ಚು ಜನ ಉನ್ನತಹುದ್ದೆಯನ್ನು ಅಲಂಕರಿಸಬೇಕು ಎಂಬ ಬಯಕೆ ನಮ್ಮದಾಗಿದೆ ಎಂದು ತಿಳಿಸಿದ್ದಾರೆ.

ಈ ಕೇಂದ್ರದ ಉದ್ಘಾಟನೆ ಮಾ.೫ರಂದು ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಏ.೨೪ ಅಪ್ಪಾಜಿಯರವ ಹುಟ್ಟಿದದಿನದಂದು ತರಗತಿಗಳು ಆರಂಭವಾಗುತ್ತವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಸಂಸ್ಥೆಯಲ್ಲಿ ಬೆಲೆ ಸಹ ಕಡಿಮೆ ಇರುತ್ತದೆಎಂದು ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ.