ರಾವಣ ಭಾರತೀಯರಿಗೆ ವಿಲನ್, ಶ್ರೀಲಂಕಾದವರಿಗೆ ಶ್ರೇಷ್ಠ ರಾಜ..ರಾವಣನ ಬಗ್ಗೆ ಕೂತುಹಲ ಸಂಗತಿಗಳು ಇಲ್ಲಿವೆ ನೋಡಿ..!!

0
2588

ಇತ್ತೀಚಿಗಷ್ಟೆ ಭಾರತದಲ್ಲಿ ನವರಾತ್ರಿ ದಸರಾ ಆಚರಿಸಲಾಯಿತು. ಈ ಹಬ್ಬಕ್ಕೆ ಪುರಾತನ ತಳಕು ಇದೆ. ರಾಮಾಯಣದಲ್ಲಿ ರಾಮ್, ರಾವಣ್ನ ವಿರುದ್ಧ ಯುದ್ಧ ಗೆದ್ದ ದಿನವೆಂದು, ಭಾರತೀಯರು ಆಚರಿಸುತ್ತಾರೆ. ಆದ್ರೆ ಎಲ್ಲ ಕಥೆಗೂ ಎರಡೂ ರೂಪಗಳಿರುತ್ತವೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅದರಂತೆ ಭಾರತದಲ್ಲಿ ಈ ಹಬ್ಬವನ್ನು ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ.

ಇನ್ನು ಕೇವಲ ಶ್ರೀಲಂಕಾದ ಜನಸಂಖ್ಯೆಯ ೧೨.೬% ಶೇಕಡಾ ರಷ್ಟಿರುವ ಹಿಂದುಗಳ ಪಾಲಿಗೆ ಈ ಕಥೆಯ ಮಹತ್ವವೆ ಬೇರೆಯಾಗಿದೆ. ರಾವಣ್ ಸಪ್ತಋಷಿಗಳಲ್ಲಿ ಒಬ್ಬರಾದ ಮನು ಅವರ ಮಗ. ತಂದೆಯ ಗರಡಿಯಲ್ಲಿ ಬೆಳೆದ ಮಗಹ ಉನ್ನತ ಶಿಕ್ಷಣ ಹಾಗೂ ಯುದ್ಧ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುತ್ತಾನೆ. ಇನ್ನು ರಾವಣನಿಗೆ ದಶಮುಖ ಹೀಗಾಗಿ ಶ್ರೀಲಂಕಾದ ಜನ ಆತನಿಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ಅಂದಹಾಗೆ ರಾವಣ್ನಿಗೆ ಅಪಾರ ಜ್ಞಾನ ಇತ್ತೆಂದು ಅಲ್ಲಿನ ಜನರ ನಂಬಿಕೆ. ಅಲ್ಲದೆ ಉತ್ತಮ ಆಡಳಿತಾತ್ಮಕ ಅಂಶಗಳನ್ನು ಅಳವಡಿಸಿಕೊಂಡ ಮನಷ್ಯ ಎಂದು ಅಲ್ಲಿನವರ ನಂಬಿಕೆ. ಇನ್ನು ರಾವಣನ ಬಗ್ಗೆ ೭ ಆರ್ಯುವೇದಕ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಶ್ರೀಲಂಕಾವಾಸಿಗಳ ಪ್ರಕಾರ ರಾವಣ್ ಹಲವು ಪ್ರಥಮಗಳ ಕರ್ತು ಎಂಬ ನಂಬಿಕೆ. ರಾವಣ್ ಸೀತಾ ಮಾತೆಯನ್ನು ಅಪಹರಿಸುವಾಗ ಪುಷ್ಪಕ ವಿಮಾನವನ್ನು ಮಾಡಿ, ಅದರಲ್ಲಿ ಸೀತೆಯನ್ನು ಕುರಿಸಿಕೊಂಡು ಬರುತ್ತಾನೆ ಎಂಬ ಕಥೆ ಎಲ್ಲರಿಗೂ ಗೊತ್ತೆ ಇದೆ. ಈಡಿ ಭುಮಿಯಲ್ಲಿ ಹಾರಾಡುವ ವಸ್ತುವನ್ನು ಕಂಡು ಹಿಡಿದ ಹೆಗ್ಗಳಿಕೆ ರಾವಣನಿಗೆ ಸಲ್ಲುತ್ತದೆ ಎಂಬ ನಂಬಿಕೆ ಅಲ್ಲಿನ ಜನರದ್ದು. ಇನ್ನು ರಾವಣ್ ಶಿವನ ಪರಾಮಪ್ತ ಭಕ್ತ ಎಂಬುದು ಎಲ್ಲರಿಗೂ ಗೊತ್ತೆ ಇದೆ. ಈತನ ತಪ್ಪಸಿಗೆ ಮೆಚ್ಚಿ ಶಿವ ವರದ ರೂಪದಲ್ಲಿ ಆಯುಧವೊಂದನ್ನು ನೀಡಿದ್ದಾನೆ ಎಂಬ ನಂಬಿಕೆ ಇಲ್ಲಿನ ಜನರದ್ದು.

ಇನ್ನು ಭಾರತೀಯ ಪ್ರಕಾರ ರಾವಣ್ನ ಸಂಹಾರಕ್ಕೆ ಸೀತಾ ಅಪರಹಣ ಮುಖ್ಯವಾದ್ರೆ, ಶ್ರೀಲಂಕಾ ಜನರಿಗೆ ಮಾತ್ರ ಇದ್ದು ಕೊಂಚ ಭಿನ್ನ. ರಾವಣ್ನ ಸಂಹಾರಕ್ಕಾಗಿ ಲಕ್ಷಣ, ಶೂರ್ಪನಕಿಯ ಮೂಗನ್ನು ಕತ್ತರಿಸಿದ್ದೇ ಕಾರಣ ಎಂದು ಅಲ್ಲಿನ ಜನರ ನಂಬಿಕೆ. ಇನ್ನು ಭಾರತೀಯರ ಪಾಲಿಗೆ ರಾವಣ್ ರಾಕ್ಷಸನಾದ್ರೆ, ಶ್ರೀಲಂಕಾ ಜನರ ಪಾಲಿಗೆ ಆತ ದೇವನಲ್ಲ. ಅಲ್ಲಿಯ ಜನರ ಪಾಲಿಗೆ ರಾವಣ್ ಓರ್ವ ಶ್ರೇಷ್ಠ ರಾಜ. ಹೀಗಾಗಿ ಆತನ ದೇವಾಲಯಗಳು ಶ್ರೀಲಂಕಾದಲ್ಲಿ ಕಾಣಸಿಗುತ್ತವೆ. ಇದರಿಂದ ತಿಳಿಯುವ ಒಂದು ಸಂಗತಿ ಎಂದ್ರೆ ಓರ್ವ ಮನುಷ್ಯ ಒಂದು ಸಮುದಾಯಕ್ಕೆ ವಿಲನ್ ಆದ್ರೆ, ಇನ್ನೊಂದು ಸಮುದಾಯಕ್ಕೆ ಹೀರೋ.