ಬಡತನ ಅನ್ನೋದು ಶಾಪ ಅಲ್ಲ, ಆ ಬಡತನದಿಂದ ಹೊರಬರದೇ ಇರೋದು ನಿಜವಾದ ಶಾಪ… ಸಾಧಕರ ಸೀಟ್ ನಲ್ಲಿ ರವಿ ಚೆನ್ನಣ್ಣವರ್…
ಜೀ ಕನ್ನಡ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಶನಿವಾರದ ಸಂಚಿಕೆಯಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ತಮ್ಮ ಬಡತನದ ಕುಟುಂಬ, ಕಷ್ಟದ ಜೀವನ, ಬಾಲ್ಯ, ಶಾಲೆ, ಕಾಲೇಜ್ ಜೀವನದ ಕುರಿತಾಗಿ ಮಾತನಾಡಿದ್ದಾರೆ. ರಜೆ ದಿನಗಳಲ್ಲಿ ಕೂಲಿ ಕೆಲಸ ಮಾಡಿದ್ದು, ಕೆಲಸ ಮಾಡುತ್ತಲೇ ಕಾಲೇಜ್ ನಲ್ಲಿ ಓದಿದ್ದು, ಹೈದರಾಬಾದ್ ನಲ್ಲಿ ತರಬೇತಿ ಪಡೆದುಕೊಂಡಿದ್ದು, ಕಷ್ಟದ ಜೀವನದ ಬಗ್ಗೆ ಮತ್ತು ಪ್ರೇರೇಪಣೆ ನೀಡಿದ ಬಗ್ಗೆ ಅವರು ಹೇಳುವಾಗ ಭಾವುಕರಾಗಿದ್ದಾರೆ.
ಸ್ವಾಭಿಮಾನ ತಾಯಿಯಿಂದ ಕಲಿತೆ. ಹಸಿವನ್ನು ನಾನು ಅನುಭವಿಸಿದ್ದೇನೆ. ಬಡತನ ಶಾಪವಲ್ಲ, ಅದರಿಂದ ಹೊರ ಬರಲಾಗದಿರುವುದು ಶಾಪ ಎನ್ನುವುದು ಅವರ ಅಭಿಪ್ರಾಯವಾಗಿದೆ.
ಕಲಬುರಗಿ, ಬೆಳಗಾಂ, ಹಾಸನ, ಶಿವಮೊಗ್ಗ, ಮೈಸೂರಿನಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಅವರು ಅನಿಸಿಕೆ ಹಂಚಿಕೊಂಡಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಿಬ್ಬಂದಿಗಳ ಸಹಕಾರದಿಂದ ಕೆಲಸ ಮಾಡಲು ಸಹಕಾರಿಯಾಗಿದೆ. ಪೊಲೀಸ್ ಎಂದರೆ ಭಯವಲ್ಲ, ಭರವಸೆ. ಜನ ಸಮವಸ್ತ್ರದಲ್ಲಿಲ್ಲದ ಪೊಲೀಸರಾದರೆ, ಪೊಲೀಸರು ಸಮವಸ್ತ್ರದಲ್ಲಿರುವ ಜನ ಎನ್ನುತ್ತಾರೆ ಅವರು.
ಏನೇ ಕೆಲಸ ಸಿಕ್ಕರೂ ಅದೊಂದು ಅವಕಾಶ ಎಂದು ಭಾವಿಸುತ್ತೇನೆ. ಜೀವನದಲ್ಲಿ ಇನ್ನೂ ಕಲಿಯುವುದು ಇದೆ. ಅಬಿ ಪಿಚ್ಚರ್ ಬಾಕಿ ಹೈ ಎಂದು ಚನ್ನಣ್ಣನವರ್ ಹೇಳಿದ್ದಾರೆ.
ರವಿ.ಡಿ.ಚೆನ್ನಣ್ಣನವರ್ ಅವರು ‘ಕರ್ನಾಟಕದ ಸಿಂಗಂ’ ಎಂದೇ ಖ್ಯಾತಿಗೊಳಿಸಿಕೊಂಡಿದ್ದಾರೆ.ಸದ್ಯ, ಮೈಸೂರಿನಲ್ಲಿ ರವಿ ಚನ್ನಣ್ಣನವರ್ ಕರ್ಯಾ ನಿರ್ವಹಿಸುತ್ತಿದ್ದಾರೆ.