ಮತ್ತೆ ಪತ್ನಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಹಲ್ಲೆ? ಡಿ ಬಾಸ್ ಖಾಸಗಿ ಜೀವನದ ಬಗ್ಗೆ ರವಿ ಬೆಳಗೆರೆ ಮಾಡಿರುವ ವಿಡಿಯೋದಲ್ಲೆನಿದೆ??

0
600

ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಛಾಪು ಮೂಡಿಸಿ ಡಿ ಬಾಸ್ ಎಂದು ಹವಾ ಮಾಡಿರುವ ದರ್ಶನ್ ಮತ್ತೆ ಪತ್ನಿಯ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬರುತ್ತಿದೆ. ಇದೆ ವಿಷಯವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲಿಗೂ ಹೋಗಿ ಬಂದಿದ್ದರು ಆದಾದ ನಂತರ ಮತ್ತೆ ಚಿತ್ರರಂಗದಲ್ಲಿ ಹೆಸರು ಮಾಡಿದ ಅವರು ಮತ್ತೆ ಪತ್ನಿಯ ಮೇಲೆ ಕುಡಿದ ನಸೆಯಲ್ಲಿ ಹಲ್ಲೆ ಮಾಡಿದ್ದಾರೆ, ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರಿ ಹೇಳಿದ್ದು, ದರ್ಶನ್ ಅವರಿಗೆ ವಿಡಿಯೋ ಮೂಲಕ ಬುದ್ದಿವಾದ ಹೇಳಿದ್ದು ಕನ್ನಡ ಚಿತ್ರರಂಗದ ಹಲವು ನಾಯಕರು ಪ್ತನಿಯರ ಮೇಲೆ ಮಾಡುವ ಹಲ್ಲೆಯನ್ನು ಹೇಳಿದ್ದಾರೆ. ಈಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ವಿವಾದ ಹುಟ್ಟಿಸಿದೆ.

ಪತ್ನಿ ಮೇಲೆ ದರ್ಶನ್ ಮತ್ತೆ ಹಲ್ಲೆ?

ಇತ್ತೀಚೆಗಷ್ಟೇ ವರಮಹಾಲಕ್ಷ್ಮಿ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅಲ್ಲದೇ, ಟ್ವಿಟರ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅಂತಿದ್ದ ಹೆಸರನ್ನ ವಿಜಯಲಕ್ಷ್ಮಿ ಅಂತಷ್ಟೇ ಚೇಂಜ್ ಮಾಡಿದ್ದು, ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿತ್ತು. ಆದ್ರೆ ವಿಜಯಲಕ್ಷ್ಮಿ ಟ್ವೀಟ್ ಮಾಡಿ, ಇದೆಲ್ಲ ಗಾಳಿ ಸುದ್ದಿ ಇದನ್ನೆಲ್ಲ ನಂಬಬೇಡಿ ಎಂದು ಹೇಳಿದ್ರು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ವೈಯಕ್ತಿಕ ದಾಳಿ ನಡೆಸಿರುವ ಪತ್ರಕರ್ತ ರವಿ ಬೆಳಗೆರೆ, ‘ದರ್ಶನ್​ ಒಳ್ಳೆ ಹುಡುಗ. ಆದರೆ, ಅವನಿಗ್ಯಾಕೆ ಹೆಂಡತಿಗೆ ಹೊಡೆಯೋ ಚಟ? ಬರಬಾರದ ಕಾಲದಲ್ಲಿ ಬರಬಾರದ ರೀತಿಯಲ್ಲಿ ದುಡ್ಡು ಬಂದರೆ ಹೀಗೇ ಆಗೋದು. ನಮ್ಮ ಅಣ್ಣಾವ್ರು ರಾಜ್​ಕುಮಾರ್​ ಅವರನ್ನು ನೋಡಿ ಇಂದಿನ ನಟರು ಕಲಿಯಬೇಕು. ಅವರ ಸಿನಿಮಾಗಳನ್ನು ನೋಡಿದಾಗ ನಾವೂ ಅವರಂತೆಯೇ ಆಗಬೇಕೆಂದು ಬಯಸುತ್ತಿದ್ದೆವು. ಆದರೆ, ಇಂದಿನ ಕಾಲದ ನಟರು ಹೆಂಡತಿ ಮೇಲೆ ಕೈಮಾಡಿ, ಹೆಂಡತಿಯನ್ನು ಬಿಟ್ಟು ಖಾಸಗಿ ಜೀವನವನ್ನು ಅಧ್ವಾನ ಮಾಡಿಕೊಂಡಿದ್ದಾರೆ’ ಎನ್ನುವ ಮೂಲಕ ದರ್ಶನ್​ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ.

ಆಸ್ತಿ ಕೊಡುವಂತೆ ಪತ್ನಿಮೇಲೆ ಹಲ್ಲೆ?

Also read: ಮತ್ತೊಮ್ಮೆ ದಚ್ಚು, ಕಿಚ್ಚು ಮುಖಾಮುಖಿ; ಸ್ಯಾಂಡಲ್ ವುಡ್-ನಲ್ಲಿ ಮತ್ತೆ ದರ್ಶನ್ ಸುದೀಪ್ ನಡುವೆ ಕಾಳಗ; ಎಲ್ಲಿ? ಹೇಗೆ? ಇಲ್ಲಿದೆ ನೋಡಿ ಮಾಹಿತಿ..

ವಿಜಯಲಕ್ಷ್ಮಿ ಹೆಸರಿನಲ್ಲಿ ದರ್ಶನ್ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಅದನ್ನು ವಾಪಾಸ್ ಕೊಡುವಂತೆ ಈಗ ಒತ್ತಾಯಿಸುತ್ತಿದ್ದಾರೆ. ಆದರೆ, ವಿಜಯಲಕ್ಷ್ಮಿ ಕೊಡುತ್ತಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ವಿಚಾರವನ್ನು ವಿಜಯಲಕ್ಷ್ಮಿ ಬೇರೊಬ್ಬರಲ್ಲಿ ಹೇಳಿರುವ ಬಗ್ಗೆ ಮಾಹಿತಿ ದೊರೆತಿದೆ.ದೊಡ್ಡ ನಟರಾಗಿರುವ ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ , ತಮ್ಮ ಪತ್ನಿ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಬೇಕು. ಗಂಡ-ಹೆಂಡತಿ ಜಗಳ ಯಾಕೆ ಬೀದಿಗೆ ಬರಬೇಕು? ಇದನ್ನೆಲ್ಲ ಬಿಟ್ಟು ಚೆನ್ನಾಗಿರಪ್ಪ.. ಪವಿತ್ರಾ ಜೊತೆಗಾದರೂ ಇರು ಯಾರ ಜೊತೆಗಾದರೂ ಇರು. ಆದರೆ, ಖುಷಿಯಾಗಿರು’ ಎಂದು ದರ್ಶನ್​ಗೆ ಕಿವಿಮಾತು ಹೇಳಿದ್ದಾರೆ.

ಬ್ಲಾಕ್​ ಕೋಬ್ರಾ ಕರಿ ಗೊಬ್ಬರ;

Also read: ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಹೀರೋ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್…!!

ಹೀಗೆ ನಟ ದುನಿಯಾ ವಿಜಯ್​, ನಿರ್ದೇಶಕ ಓಂಪ್ರಕಾಶ್​ ರಾವ್​ ಬಗ್ಗೆಯೂ ವಿಡಿಯೋದಲ್ಲಿ ಹೇಳಿದ್ದು. ಅವನ್ಯಾರೋ ಬ್ಲಾಕ್​ ಕೋಬ್ರಾ ಕರಿ ಗೊಬ್ಬರ ದುನಿಯಾ ವಿಜಯ್​ನದ್ದು ಇನ್ನೊಂದು ರೀತಿಯ ಅವಾಂತರ. ಆತ ಅದೆಷ್ಟು ಜನರನ್ನು ಮದುವೆಯಾಗ್ತಾನೆ? ಒಬ್ಬಳು ಹೆಂಡತಿಯನ್ನು ಬಿಟ್ಟು, ಇನ್ನೊಂದು ಹೆಂಡತಿಯನ್ನು ಕಟ್ಟಿಕೊಂಡು ಆತನೂ ಜೈಲು ಪಾಲಾಗುತ್ತಾನೆ. ಈ ಹುಡುಗರಿಗೆ ಏನಾಗಿದೆ? ಅವರಿಗೆ ಒಳ್ಳೆಯ ಮಾರ್ಕೆಟ್ ಇದೆ, ಉತ್ತಮ ಜೀವನ ನಡೆಸೋ ಬದಲು ಹೀಗೆಲ್ಲ ಯಾಕೆ ಮಾಡಿಕೊಳ್ತಾರೆ? ‘ನಿರ್ದೇಶಕ ಓಂಪ್ರಕಾಶ್​ ರಾವ್ ಅವನು ಹೀಗೆ ಆತ ಐದಾರು ಮದುವೆಯಾಗಿದ್ದಾನೆ. ಯಾಕಪ್ಪ ಅಷ್ಟೆಲ್ಲ ಮದುವೆಯಾಗಬೇಕು? ಎಂದು ಕೇಳಿದ್ದೆ. ಹುಡುಗೀರನ್ನು ಕಂಡರೆ ನನಗೆ ಕರುಣೆ ಅಣ್ಣ, ಅದಕ್ಕೇ ಮದುವೆಯಾಗಿದ್ದೇನೆ ಎಂದು ಹೇಳಿದ್ದ! ನಮ್ಮ ಪರ್ಸನಲ್ ಲೈಫ್​ ಚೆನ್ನಾಗಿ ಇಟ್ಟುಕೊಳ್ಳದಿದ್ದರೆ ಸಾರ್ವಜನಿಕ ಜೀವನವೂ ಚೆನ್ನಾಗಿರುವುದಿಲ್ಲ’ ಎಂದು ರವಿ ಬೆಳಗೆರೆ ನೇರವಾಗಿ ಹೇಳಿದ್ದು ವಿವಾದ ಸೃಷ್ಟಿಸಿದೆ.