ಮೋದಿಯವರ ಕನಸಿನ ಆಯುಷ್ಮಾನ್ ಯೋಜನೆಯಿಂದ ಐದು ಲಕ್ಷದವರೆಗೆ ಆರೋಗ್ಯ ಭಾಗ್ಯ ಹೇಗೆ ಪಡೆದುಕೊಳ್ಳುವುದು ಅಂತ ಓದಿ…

0
1808

ವಿಶ್ವದ ಅತಿ ದೊಡ್ಡ ಆರೋಗ್ಯ ಸೇವೆ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್-ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ(ಎಬಿ-ಎನ್‍ಎಚ್‍ಪಿಎಸ್) ಗೆ ಚಾಲನೆ ಸಿಕ್ಕಿದೆ. ಜಾರ್ಖಂಡ್‍ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಿದರು. ಈ ಯೋಜನೆಯೂ 31 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯುಷ್ಮಾನ್ ಭಾರತ್ ಅನುಷ್ಠಾನಗೊಳ್ಳಲಿದೆ.

ಏನಿದು ಆಯುಷ್ಮಾನ್ ಭಾರತ್ ಯೋಜನೆ?

  • ಪಂಡಿತ್ ದೀನ್ ದಯಾಳು ಉಪಾಧ್ಯಾಯರ ಜನ್ಮದಿನವಾದ ಸೆಷ್ಟೆಂಬರ್ 25ರಂದು ಈ ಯೋಜನೆ ಆರಂಭವಾಗಲಿದೆ.
  • ದೇಶದ 50 ಕೋಟಿ ಮಂದಿಗೆ ಅನುಕೂಲವಾಗುವ ಆರೋಗ್ಯ ಯೋಜನೆಯನ್ನು ಇದಾಗಿದೆ.
  • ಕುಟುಂಬವೊಂದಕ್ಕೆ ವಾರ್ಷಿಕ ಐದು ಲಕ್ಷ ರೂಪಾಯಿಗಳ ಆರೋಗ್ಯ ಸೇವಾ ವೆಚ್ಚವನ್ನು ಸರ್ಕಾರ ಭರಿಸಲಿದೆ.
  • 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಈ ಆರೋಗ್ಯ ವಿಮೆ ಸಿಗಲಿದೆ. ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷವರೆಗೆ ಆಸ್ಪತ್ರೆ ಖರ್ಚು ಭರಿಸಲಾಗುತ್ತದೆ.
  • ಗ್ರಾಮೀಣ ಕುಟುಂಬಗಳಿಗೆ 8.03 ಕೋಟಿ ಹಾಗೂ ನಗರ ವಾಸಿಗಳಿಗೆ 2.33 ಕೋಟಿ ರೂಪಾಯಿಯನ್ನು ನಿಗಧಿಗೊಳಿಸಲಾಗಿದೆ.

ಮೊದಲ ಹಂತದಲ್ಲಿ ಛತ್ತೀಸ್‍ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ 70-80 ಜಿಲ್ಲೆಗಳಲ್ಲಿ ಜಾರಿಯಾಗಲಿದೆ. ಈ ಆರೋಗ್ಯ ಯೋಜನೆಯಲ್ಲಿ 100 ಆಸ್ಪತ್ರೆಗಳಿರುತ್ತವೆ. 8,735 ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗನಲ್ಲಿ ಸೇವೆ ಲಭ್ಯವಿದೆ. ಮೊದಲಿಗೆ ಶಸ್ತ್ರಚಿಕಿತ್ಸೆ ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆ ಸಿಗುತ್ತದೆ. ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವ ನಿರ್ಧಾರಿತ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ. ಯೋಜನೆಯ ಸೌಲಭ್ಯಕ್ಕಾಗಿ ಪಡಿತರ ಚೀಟಿ ಇದ್ದರೆ ಸಾಕು. ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ. ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ ಇದ್ದರಾಯ್ತು.

ಯಾರಿಗೆ ವಿಮೆ ಸಿಗುತ್ತೆ? ಯಾವೆಲ್ಲಾ ರೋಗಗಳಿಗೆ ಚಿಕಿತ್ಸೆ?

ಖಾಸಗಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಸೇವೆ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯೂ ಈ ಯೋಜನೆ ಒಳಗೊಂಡಿದೆ. ಧೀರ್ಘಕಾಲಿನ ರೋಗಗಳು, ಹೃದಯದ ಬೈಪಾಸ್ ಸರ್ಜರಿ, ಮಂಡಿ ಚಿಪ್ಪು ಅಳವಡಿಕೆ, ಆಸ್ಪತ್ರೆ ಸೇರುವ ಮೊದಲು/ನಂತರದ ವೆಚ್ಚ, ಕನಿಷ್ಟ 25 ಸಾವಿರ ರೂ. ಕ್ಲೈಂ, ಒಮ್ಮೆ ನೋಂದಣಿ ಮಾಡಿಕೊಂಡರೆ ದೇಶದ ಯಾವುದೇ ಚಿಕಿತ್ಸೆ ಪಡೆಯಬಹುದು.