ಶಾಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ಸಿಹಿ ಸುದ್ದಿ; ಬ್ಯಾಗ್ ತೂಕ ಮಿತಿಗೊಳಿಸಿದ ಸರ್ಕಾರ ಬ್ಯಾಗ್ ರಹಿತ ದಿನ ಆಚರಣೆಗೆ ಆದೇಶ..

0
516

ಪಾಲಕರಿಗೆ ಶಾಲೆಯ ಡೊನೇಶನ್ ಕಟ್ಟುವುದು ಬಾರವಾದರೆ ಅದಕ್ಕಿಂತ ದೊಡ್ಡ ಬಾರ ತಮ್ಮ ಮಕ್ಕಳು ಮಣಬಾರವಿರುವ ಬ್ಯಾಗ್ ಹೊತ್ತು ಹೇಗೆ ಶಾಲೆಗೆ ಹೋಗಬೇಕು ಎನುವುದು ದಿನ ನಿತ್ಯದ ಗೋಳಾಗಿತ್ತು. ಮಕ್ಕಳು ಶಾಲೆಗೆ ಹೊರಟರೆ ಪಾಲಕರಿಗೆ ಎದೆಬಡಿತ ಶುರುವಾಗುತ್ತಿತ್ತು, ಚಿಕ್ಕ ಮಕ್ಕಳು ಅಷ್ಟೊಂದು ಬಾರ ಹೊತ್ತು ಹೇಗೆ ಹೋಗಬೇಕು ಎನ್ನುವುದು ಸಂಕಷ್ಟದ ವಿಷಯವಾಗಿತ್ತು. ಇನ್ಮುಂದೆ ಈ ತಾಪತ್ರೆ ತಪ್ಪಲಿದ್ದು ಕೇಂದ್ರ ಸರಕಾರದ ಸೂಚನೆ ಪಾಲಿಸಲು ರಾಜ್ಯಸರಕಾರ ಎಲ್ಲ ಕ್ರಮ ಕೈಗೊಂಡಿದ್ದು. ಬ್ಯಾಗ್ ತೂಕಕ್ಕೆ ಮಿತಿ ಹೇರಿ, ಬ್ಯಾಗ್ ರಹಿತ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ.

Also read: ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ಇನ್ಮುಂದೆ ಭಾರವಾದ ಬ್ಯಾಗ್ ಜೊತೆಗೆ ಹೋಂ ವರ್ಕ್ ಕಿರಿಕಿರಿ ಇಲ್ಲ..

ಹೌದು ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳ ಶಾಲಾ ಬ್ಯಾಗ್‌ಗೆ ತೂಕ ನಿಗದಿಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಜೊತೆಗೆ, ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಮನೆಗೆಲಸ (ಹೋಮ್‌ ವರ್ಕ್) ನೀಡಬಾರದು ಹಾಗೂ ಮೂರನೇ ಶನಿವಾರವನ್ನು ಬ್ಯಾಗ್‌ ರಹಿತ ದಿನವೆಂದು ಆಚರಿಸಬೇಕೆಂದು ತಿಳಿಸಿದ್ದು. 2019-20ನೇ ಸಾಲಿನಲ್ಲಿ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ ತೂಕವು ವಿದ್ಯಾರ್ಥಿಯ ದೇಹದ ಸರಾಸರಿ ತೂಕದ ಶೇ.10ರಷ್ಟು ಮೀರಬಾರದು ಎಂದು ರಾಜ್ಯ ಸರಕಾರ ಆದೇಶಿಸಿದೆ.

ಏನಿದು ಹೊಸ ನಿಯಮ?

Also read: ಕಸಕ್ಕೆ ಹಾಕಿದ್ದ ನೀರಿನ ಕ್ಯಾನ್-ನಿಂದ ಟಾಯ್ಲೆಟ್ ತಯಾರಿಸಿದ ಈ ಹಳ್ಳಿ ಪೋರನ ಬಗ್ಗೆ ಕೇಳಿದ್ರೆ ಹೆಮ್ಮೆ ಆಗುತ್ತೆ!!

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ (ಯೋಜನೆ) ಎಸ್‌.ಆರ್‌.ಎಸ್‌. ನಾಧನ್‌ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಕೂಡ ಪ್ರತ್ಯೇಕ ಆದೇಶ ಹೊರಡಿಸಲಿದ್ದಾರೆ. ಅದರಂತೆ ತರಗತಿಯ ಅನುಗುಣವಾಗಿ ಸರಕಾರವು ಮಕ್ಕಳಿಗೆ ಬ್ಯಾಗ್ ಭಾರವನ್ನು ನಿಗದಿಪಡಿಸಿದೆ. ಇದರ ಜೊತೆಗೆ ಮಕ್ಕಳು ನೀರಿನ ಬಾಟಲ್ ಒಯ್ಯುವಂತಿಲ್ಲ, ಮಕ್ಕಳು ಬಳಸುವ ನೋಟ್​ಬುಕ್ 100 ಪುಟ ಮೀರುವಂತಿಲ್ಲ. ಬ್ಯಾಗ್ ಕೂಡ ಹೆಚ್ಚು ಭಾರದ್ದಾಗಿರುವಂತಿಲ್ಲ. ಹಗುರವಾದ ಮತ್ತು ಬಾಳಿಕೆ ಬರುವ ಶಾಲಾ ಬ್ಯಾಗ್ ಅನ್ನು ವಿದ್ಯಾರ್ಥಿಗಳಿಗೆ ತೊಡಿಸಬೇಕು ಎಂದು ಸರಕಾರ ತಿಳಿಸಿದೆ.

ಆದೇಶದಲ್ಲಿ ಏನಿದೆ:

ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಮನೆಗೆಲಸ ನೀಡಬಾರದು. ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪಠ್ಯಪುಸ್ತಕ, ನೋಟ್‌ ಪುಸ್ತಕಗಳನ್ನು ಶಾಲೆಗೆ ತರಲು ಅಗತ್ಯ ಸೂಚನೆ ನೀಡಬೇಕು. ಮಕ್ಕಳು ಶಾಲೆಗಳಿಗೆ ಕುಡಿಯುವ ನೀರು ತರುವುದನ್ನು ತಪ್ಪಿಸಲು ಶಾಲೆಗಳಲ್ಲಿಯೇ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಬೇಕು. 100 ಪೇಜ್‌ ಮೀರಿದ ನೋಟ್‌ ಪುಸ್ತಕಗಳನ್ನು ನಿಗದಿಗೊಳಿಸಬಾರದು ಎಂದು ಸೂಚಿಸಿದೆ.

ಯಾವ ತರಗತಿಗೆ ಎಷ್ಟು ಕೆ.ಜಿ.:

Also read: ಇನ್ಮುಂದೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವಂತಿಲ್ಲ; ಶಿಕ್ಷಣ ಇಲಾಖೆಯಿಂದ ಆದೇಶ..

ಸಣ್ಣ ವಯಸ್ಸಿನ ಮಕ್ಕಳಿಗೆ ಹೆಚ್ಚಿನ ಹೊರೆ ಹೊರಿಸುವುದರಿಂದ ಬೆನ್ನು ನೋವು, ಕತ್ತು ನೋವುಗಳು ಶಾಶ್ವತವಾಗಿ ಕಾಣಿಸಿಕೊಳ್ಳಲಿವೆ. ಹೀಗಾಗಿ, ಬ್ಯಾಗ್‌ ತೂಕವನ್ನು ಕಡಿಮೆ ಮಾಡಲಾಗುತ್ತಿದೆ. ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ 1.5ರಿಂದ 2 ಕಿ.ಗ್ರಾಂ., ಮೂರರಿಂದ ಐದನೇ ತರಗತಿಗೆ 2ರಿಂದ 3 ಕಿ.ಗ್ರಾಂ., ಆರರಿಂದ ಎಂಟನೇ ತರಗತಿಗೆ 3ರಿಂದ 4 ಕಿ.ಗ್ರಾಂ., 9ರಿಂದ 10ನೇ ತರಗತಿಗೆ ನಾಲ್ಕರಿಂದ ಐದು ಕಿ.ಗ್ರಾಂ. ಮೀರಬಾರದು ಎಂದು ತಿಳಿಸಿದೆ.

3ನೇ ಶನಿವಾರ ನೋ ಬ್ಯಾಗ್‌ ಡೇ:

ಪ್ರತಿ ತಿಂಗಳ 3ನೇ ಶನಿವಾರವನ್ನು ಬ್ಯಾಗ್‌ರಹಿತ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಆ ದಿನ ಶಿಕ್ಷಕರು ಪಠ್ಯಪುಸ್ತಕ ಅಥವಾ ಇತರ ಪೂರಕ ಸಾಮಗ್ರಿಗಳ ಅವಶ್ಯಕತೆಯಿಲ್ಲದೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ದಿನದಂದು ಕ್ಷೇತ್ರ ಸಂಚಾರ, ಗಣಿತದ ವಿನೋದ, ಅಬ್ಯಾಕಸ್‌, ವಿಜ್ಞಾನದ ಪ್ರಯೋಗ ಮತ್ತು ಪ್ರದರ್ಶನಗಳು, ಮಣ್ಣಿನಲ್ಲಿ ವಸ್ತುಗಳ ತಯಾರಿಕೆ, ಇನ್ನಿತರೆ ಕರಕುಶಲ ಚಟುವಟಿಕೆಗಳು, ಸಾಮಾನ್ಯ ಜ್ಞಾನ ಸೇರಿದಂತೆ ಇತರೆ ಹಲವಾರು ಚಟುವಟಿಕೆಗಳನ್ನು ಸೇರಿಸಲಾಗಿದೆ.