ಥಾರ್ ಮರುಭೂಮಿಯಲ್ಲಿ 172 ಸಾವಿರ ವರ್ಷಗಳ ಹಳೆ ನದಿಯ ಕುರುಹು ಪತ್ತೆ

0
309

172 ಸಾವಿರ ವರ್ಷಗಳ ಹಿಂದೆಯೇ ಬಿಕಾನೆರ್ ಬಳಿಯ ಮಧ್ಯ ಥಾರ್ ಮರುಭೂಮಿಯ ಮೂಲಕ ಹರಿಯುತ್ತಿದ್ದ “ಮರೆಯಾದ” ನದಿಯ ಕುರುಹುಗಳು ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಮಾನವನ ವಾಸಕ್ಕೆ ಈ ನದಿ “ಆ” ಕಾಲದಲ್ಲಿ ಜೀವಸೆಲೆಯಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಕ್ವಾಟರ್ನರಿ ಸೈನ್ಸ್ ರಿವ್ಯೂಸ್ ಜರ್ನಲ್ನಲ್ಲಿ ಸಂಶೋಧನಾ ವರದಿಯೊಂದು ಪ್ರಕಟವಾಗಿದ್ದು, ಮಧ್ಯ ಥಾರ್ ಮರುಭೂಮಿಯ ನಲ್ ಕ್ವಾರಿಯಲ್ಲಿ 1,72,000 ವರ್ಷಗಳ ಹಿಂದೆ ನದಿಯೊಂದು ಹರಿಯುತ್ತಿತ್ತು ಎಂದು ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ದಿ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ದಿ ಸೈನ್ಸ್ ಆಫ್ ಹ್ಯೂಮನ್ನ ಜಿಂಬಾಬ್ ಬ್ಲಿಂಕ್ಹಾರ್ನ್, ಥಾರ್ ಮರುಭೂಮಿ ಶ್ರೀಮಂತ ಇತಿಹಾಸವನ್ನು ಹೊಂದಿತ್ತು ಎಂಬುದಕ್ಕೆ ಈಗ ಪತ್ತೆಯಾಗಿರುವ ನದಿ ಕುರುಹು ಸಾಕ್ಷಿ ಎಂದು ಹೇಳಿದ್ದಾರೆ.

80 ಸಾವಿರ ವರ್ಷಗಳ ಹಿಂದೆ ಥಾರ್ ಮರುಭೂಮಿ ವ್ಯಾಪ್ತಿಯಲ್ಲಿ ನದಿ ಸಕ್ರಿಯವಾಗಿತ್ತು. ಬಿಕಾನೇರ್ ಸಮೀಪದ ನಲ್ ಎಂಬ ಗ್ರಾಮದಲ್ಲಿ 2014ರಿಂದ 2019ರ ವರೆಗೆ ನಡೆಸಲಾಗಿರುವ ಅಧ್ಯಯನದಿಂದ ಈ ಅಂಶ ದೃಢಪಟ್ಟಿದೆ. ಜರ್ಮನಿಯ ಎಂಪಿಐ-ಎಸ್ಎಚ್ಎಚ್ನ ವಿಜ್ಞಾನಿ ಜೇಮ್ಸ್ ಬ್ಲಿಂಕಾರ್ನ್ ಹೊಸ ಶೋಧನೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ನದಿ ಇತ್ತು ಎಂಬುದನ್ನು ಶಾಖವಿಲ್ಲದೆ ಉತ್ಪತ್ತಿಯಾಗಿರುವ ಬೆಳಕಿನ ತಂತ್ರಜ್ಞಾನದ ಮೂಲಕ ಕಂಡುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಥಾರ್ ವ್ಯಾಪ್ತಿಯಲ್ಲಿ 80 ಸಾವಿರ ವರ್ಷಗಳ ಹಿಂದೆ ನದಿ ಇತ್ತು ಎಂಬ ಬಗ್ಗೆ ರಾಜಸ್ಥಾನದ ಲುನಿ ನದಿ ತೀರ ಪ್ರದೇಶದಲ್ಲಿ ಅಧ್ಯಯನ ನಡೆಸಲಾಗಿತ್ತು. ಮಹಿ, ಸಬರಮತಿ, ಒರ್ಸಾಂಗ್ ನದಿ ಕಣಿವೆ ವ್ಯಾಪ್ತಿಯಲ್ಲಿಯೂ ಈ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಥಾರ್ ವ್ಯಾಪ್ತಿಯಲ್ಲಿ ನದಿ ಇದ್ದದ್ದು ದೃಢಪಟ್ಟಿದೆ ಎಂದು ಬ್ಲಿಂಕಾರ್ನ್ ತಿಳಿಸಿದ್ದಾರೆ.

ಥಾರ್ ಮರುಭೂಮಿಯಲ್ಲಿ ಈ ನದಿ, ದಕ್ಷಿಣ ಏಷ್ಯಾದಾದ್ಯಂತ ಮತ್ತು ಅದರಾಚೆ ಮಾನವ ವಿಕಾಸವನ್ನು ಅರ್ಥಮಾಡಿಕೊಳ್ಳುವ ನಿರ್ಣಾಯಕ ಕಾಲಾವಧಿಯಲ್ಲಿ ಹರಿಯಿತು. ಇದು ನಮ್ಮ ಮಾನವ ಕುಲದ ಆರಂಭಿಕ ಸದಸ್ಯರಾದ ಹೋಮೋ ಸೇಪಿಯನ್ಸ್, ಮೊದಲು ಮಳೆಗಾಲ ಎದುರಿಸಿದ ಸಮಯವಾಗಿದೆ.ಮತ್ತು ಥಾರ್ ಮರುಭೂಮಿಯನ್ನು ದಾಟಿದ ಭೂಪ್ರದೇಶವನ್ನು ಇದು ಸೂಚಿಸುತ್ತದೆ, ಇಂದು ನಾವು ನೋಡಬಹುದಾದ ಭೂಪ್ರದೇಶಕ್ಕೆ ಇದು ತುಂಬಾ ಭಿನ್ನವಾಗಿರಬಹುದು ಎಂದು ಅವರು ಹೇಳಿದರು.