ಎಸ್ ಪಿ ಸಾಂಗ್ಲಿಯಾನ ಚಿತ್ರದಲ್ಲಿ ಬಾಲನಟನಾದ ಮಾಸ್ಟರ್ ಮಂಜುನಾಥ್ ಸದ್ದಿಲ್ಲದೇ ನಟನೆ ಬಿಡಲು ಕಾರಣವೇನು? ಸದ್ಯ ಏನ್ ಮಾಡುತ್ತಿದ್ದಾರೆ ಗೊತ್ತಾ??

0
1333

ಮಾಲ್ಗುಡಿ ಡೇಸ್ ಹಿಂದಿ ಧಾರವಾಹಿ, ಹಾಗೂ ಕನ್ನಡ ಸಿನಿಮಾ ಎಸ್ ಪಿ ಸಾಂಗ್ಲಿಯಾನ, ಎಲ್ಲರಿಗೂ ನೆನಪಿರುವ ಸಿನಿಮಾಗಳಾಲಾಗಿದ್ದು ಅದರಲ್ಲಿ ಒಬ್ಬ ಬಾಲ ನಟ ಪಟ್ ಪಟ್ ಮಾತನಾಡುವ ಚೂಟಿ ಬಾಲಕನಿಗೆ ಅಭಿಮಾನಿಗಳು ಆಗದೆ ಇರುವರು ಯಾರಿಲ್ಲ ಅನ್ಸುತೆ, ಅಷ್ಟೊಂದು ಮುದಾಗಿ ನಟನೆ ಮಾಡುವ ಮಾಸ್ಟರ್ ಪೀಸ್ ನಟನೆಯನ್ನೇ ತೊರೆದಿದ್ದು ಯಾಕೆ? ಎನ್ನುವ ಪ್ರಶ್ನೆ ಎಲ್ಲರಲ್ಲಿವೂ ಇದೆ. ಹಾಗೆಯೇ ಅಭಿನಯ ಬಿಟ್ಟು ಆ ಕಾಲದ ಬಾಲನಟ ಎಲ್ಲಿದ್ದಾರೆ ಹೇಗಿದ್ದಾರೆ ಎನ್ನುವುದು ಎಲ್ಲೂ ತಿಳಿಸಿಲ್ಲ, ಈ ಕುರಿತು ಸ್ವತಹ ನಾಯಕರ್ ಅಲಿಯಾಸ್ ಮಾಸ್ಟರ್ ಯಾಕೆ ನಟನೆಯಿಂದ ದೂರ ಸರಿದೆ ಎನ್ನುವ ಕುರಿತು ವಿವರಣೆ ಇಲ್ಲಿದೆ ನೋಡಿ.

ಹೌದು 1987ರಲ್ಲಿ ಬಿಡುಗಡೆಗೊಂಡಿದ್ದ ಮಾಲ್ಗುಡಿ ಡೇಸ್ ಧಾರವಾಹಿ 39 ಎಪಿಸೋಡ್ ಗಳನ್ನು ಶಂಕರ್ ನಾಗ್ ಹಾಗೂ 15 ಎಪಿಸೋಡ್ ಗಳನ್ನು ಕವಿತಾ ಲಂಕೇಶ್ ನಿರ್ದೇಶಿಸಿದ್ದರು. ಅದರಲ್ಲಿ ಸ್ವಾಮಿಯ ಪಾತ್ರಧಾರಿ ಮಾಸ್ಟರ್ ಮಂಜುನಾಥ್ 1976ರಲ್ಲಿ ಬೆಂಗಳೂರಿನಲ್ಲಿ ಜನಿಸಿ ಮಂಜುನಾಥ್ ಅವರ ಸಿನಿಲೋಕದ ಜರ್ನಿ ತುಂಬಾ ಕುತೂಹಲಕಾರಿ ಹಾಗೂ ಬಾಲನಟನಾಗಿ ಎಲ್ಲರ ಮನೆಗೆದ್ದ ಸದ್ದಿಲ್ಲದೆ ತೆರೆಮರೆಗೆ ಸರಿದಿದ್ದು ಕೂಡಾ ಅಷ್ಟೇ ಕುತೂಹಲಕಾರಿ ಕಥನ. ಬಾಲ ಪ್ರತಿಭೆಯಾಗಿ ಮಾಸ್ಟರ್ ತನ್ನ 3ನೇ ವಯಸ್ಸಿಗೆ ನಟನೆಯನ್ನು ಆರಂಭಿಸಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ನಲ್ಲಿ ಮಾಸ್ಟರ್ ತನ್ನ ಶಾಲಾ ದಿನಗಳ ರಜೆಯಲ್ಲಿ (1985-86) ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. 1987ರಲ್ಲಿ ಮಾಲ್ಗುಡಿ ಡೇಸ್ ಎಂಬ ಪ್ರಸಿದ್ಧ ಧಾರಾವಾಹಿ ಆರಂಭವಾಗಿತ್ತು.

ಮಾಸ್ಟರ್ ಸಿನಿಮಾ ಲೋಕಕ್ಕೆ ಬಂದಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿ, ತನ್ನ ಪಾಡಿಗೆ ಶಾಲೆಗೆ ಹೋಗುತ್ತಿದ್ದೆ, ಒಂದು ದಿನ ಶಂಕರ್ ನಾಗ್, ಕೂಡಲೇ ನನ್ನ ಭೇಟಿ ಮಾಡಬೇಕು ಮನೆಗೆ ಕಾರು ಕಳುಹಿಸುತ್ತೇನೆ ಎಂದು ಹೇಳಿಕಳುಹಿಸಿದರು ಅದರಂತೆ ವುಡ್ ಲ್ಯಾಂಡ್ಸ್ ಹೋಟೆಲ್ ಗೆ ಹೋಗಿದ್ದಾಗ ಸಣ್ಣ ಕಾಸ್ಟಿಂಗ್ ರೂಂನಲ್ಲಿ ಹಲವಾರು ಮಕ್ಕಳು ಇದ್ದರು, ಆಗ ಶಂಕರ್ ನಾಗ್ ಹಿಂದಿ ಬರುತ್ತದೆಯಾ ಎಂದು ಕೇಳಿದರು ಅದಕ್ಕೆ ಒಂದು ಶಬ್ದವೂ ಗೊತ್ತಿಲ್ಲ ಎಂದ್ದನಂತೆ, ಆದರೆ ಶಂಕರ್ ನಾಗ್ ಅವರಿಗೆ ಸ್ವಾಮಿ ಪಾತ್ರ ನನ್ನ ಹತ್ತಿರನೇ ಮಾಡಿಸಬೇಕೆಂದು ನಿರ್ಧರಿಸಿಬಿಟ್ಟಿದ್ದರು. ನಾಗ್ ಅವರಿಗೂ ನನ್ನ ಬಗ್ಗೆ ಚೆನ್ನಾಗಿ ತಿಳಿದಿತ್ತು, ಈ ಹುಡುಗ ಮಾಸ್ಟರ್ ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸಬಲ್ಲ ಎಂಬುದು ಅವರ ವಿಶ್ವಾಸವಾಗಿತ್ತು. ಹೀಗೆ ತನಗೆ ಮಾಲ್ಗುಡಿ ಡೇಸ್ ನಲ್ಲಿ ಸ್ವಾಮಿ ಪಾತ್ರ ಮಾಡುವ ಅವಕಾಶ ಲಭಿಸಿತ್ತು.

ಸ್ವಾಮಿ ಪಾತ್ರವನ್ನು ಹೇಗೆ ನಿರ್ವಹಿಸಬೇಕೆಂಬ ಕಲ್ಪನೆ ಕೂಡಾ ಮಾಸ್ಟರ್ ಮಂಜುನಾಥ್ ಗೆ ಇರಲಿಲ್ಲವಾಗಿತ್ತು. ಆದರೆ ಮಾಲ್ಗುಡಿ ಡೇಸ್ ದೊಡ್ಡ ಹಿಟ್ ಆದ ನಂತರ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ನಡೆದ ಸೆಲೆಬ್ರೆಷನ್ಸ್ ನಲ್ಲಿ ಆರ್.ಕೆ ನಾರಾಯಣ್ ಅವರು ತನ್ನ ನಟನೆ ಮೆಚ್ಚಿ ಶ್ಲಾಘಿಸಿದ್ದು ದೊಡ್ಡ ಕೊಡುಗೆ ಎಂದೇ ಮಾಸ್ಟರ್ ಮಂಜುನಾಥ್ ಹಲವು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ. ಇದು ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಗಿತ್ತು ಎಂಬುದು ಮಾಸ್ಟರ್ ಮಂಜುನಾಥ್ ಮನದಾಳದ ಮಾತನ್ನು ಹೇಳಿದರು.

ಸಿನಿಮಾ ಜೀವನ;

ವಿ.ಸೋಮಶೇಖರ್ ನಿರ್ದೇಶನದ ಅಂಬರೀಶ್, ಜಯಮಾಲಾ, ಟೈಗರ್ ಪ್ರಭಾಕರ್, ಸುಂದರ್ ಕೃಷ್ಣ ಅರಸ್ ಸೇರಿದಂತೆ ಘಟಾನುಘಟಿಗಳು ನಟಿಸಿದ್ದ ಅಜಿತ್ ಸಿನಿಮಾದಲ್ಲಿ ಮಾಸ್ಟರ್ ಮಂಜುನಾಥ್ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದ್ದರು. ನಂತರ ಮುತ್ತಿನಂಥ ಅತ್ತಿಗೆ, ಟೋನಿ, ಜಗ್ಗು, ಹೊಸ ತೀರ್ಪು, 1983ರಲ್ಲಿ ಶಂಕರ್ ನಾಗ್ ನಿರ್ದೇಶನದ ನೋಡಿ ಸ್ವಾಮಿ ನಾವಿರೋದೆ ಹೀಗೆ, ಸಾಂಗ್ಲಿಯಾನ, ರಣಧೀರ ಸೇರಿದಂತೆ 60ಕ್ಕೂ ಅಧಿಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. 1990ರಲ್ಲಿ ಬಂದ ಅಗ್ನಿಪಥ್ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ರೋಹಿಣಿ ಹಟ್ಟಿಯಂಗಡಿ, ಜತೆ ನಟಿಸಿದ್ದರು. ಹೀಗೆ ಬಾಲನಟನಾಗಿ ಕೇವಲ 19ನೇ ವಯಸ್ಸಿನವರೆಗೆ ಮಾತ್ರ ನಟಿಸಿ 6 ಅಂತಾರಾಷ್ಟ್ರೀಯ, ಒಂದು ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಗೆದ್ದು ನಂತರ ನಟನೆಗೆ ಗುಡ್ ಬೈ ಹೇಳುವ ಮೂಲಕ ಅಪಾರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

ಆದಾದ ನಂತರ ಮಂಜುನಾಥ್ ಬಿಎ ಇಂಗ್ಲೀಷ್, ಎಂಎ ಸೋಶಿಯಾಲಜಿ ಪದವೀಧರ. ಸಿನಿಮಾಟೋಗ್ರಫಿಯಲ್ಲಿ ಡಿಪ್ಲೋಮಾ ಮಾಡಿಕೊಂಡಿರು, ಒಂದು ದಿನ ಇಟಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾಸ್ಟರ್ ಯೋಚನೆ ಒಂದು ಹೊಳೆಯಿತು ಪ್ರಶಸ್ತಿ ತೆಗೆದುಕೊಳ್ಳುವ ವೇಳೆ ಗೆಳೆಯರು ಇಲ್ಲ, ಆ ಖುಷಿಯನ್ನು ಹಂಚಿಕೊಳ್ಳಲು ಕುಟುಂಬ ವರ್ಗದವರೂ ಇರಲಿಲ್ಲವಾಗಿತ್ತು. ಅಂದೇ ನಾನು ನಟನೆಯನ್ನು ಬಿಟ್ಟುಬಿಡಲು ನಿರ್ಧರಿಸಿಬಿಟ್ಟಿದ್ದೆ. ಜೀವನದಲ್ಲಿ ಹಣದ ವಿಚಾರ ಬೇರೆ ಮಾತು. ಒಳ್ಳೆಯ ಸಿನಿಮಾದಲ್ಲಿ ನಟಿಸಿದ್ದಕ್ಕೆ ಗೌರವ ಸಿಕ್ಕಿದೆ. ಒಳ್ಳೆಯ ಶಿಕ್ಷಣ ಇದೆ. ಹೀಗಾಗಿ ಬೇರೊಂದು ಕೆಲಸ ತನಗೆ ದೊರಕುವುದು ಕಷ್ಟದ ವಿಚಾರವಲ್ಲ ಎಂದು ದೃಢ ನಿರ್ಧಾರಕ್ಕೆ ಸಿನಿಮಾ ಕೈ ಬಿಟ್ಟು ಇದೀಗ ಸ್ವಂತ ಪಬ್ಲಿಕ್ ರಿಲೆಶನ್ಸ್ ಕನ್ಸ್ ಲ್ಟ್ ಟೆಂಟ್ ಆಗಿ ಮಾಸ್ಟರ್ ಮಂಜುನಾಥ್ ಕಾರ್ಯನಿರ್ವಹಿಸುತ್ತಿದ್ದಾರೆ.