ನಿವೃತ್ತ ಸಬ್ ಇನ್ಸ್ ಪೆಕ್ಟರ್ ಚಿಂದಿ ಆಯುತ್ತಿರೋದು ಯಾಕೆ ಗೊತ್ತ..??

0
361

ಚಿಕ್ಕಬಳ್ಳಾಪುರ: ಅಕೌಂಟ್ ನಲ್ಲಿ ಲಕ್ಷ ಲಕ್ಷ ಹಣ ಇದ್ರೆ ಕೂತು ತಿನ್ನುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ತಿಂಗಳಿಗೆ 9 ಸಾವಿರ ಸರ್ಕಾರದಿಂದ ಪೆನ್ಶನ್ ಬಂದರೂ ಚಿಂದಿ ಹಾಯ್ದು ತಿನ್ನುವ ಬದುಕು ನೆಮ್ಮದಿ ಅನ್ನಿಸುತ್ತಿದೆ ಅಂತಾರೆ.

ಹೌದು ಇದು ವಿಚಿತ್ರ ಅನ್ಸಿದ್ರು ಸತ್ಯ. ಆದ್ರೆ ಅದಕ್ಕು ಒಂದು ಕಾರಣ ಇದೆ. ಇವರ ಹೆಸರು ಮಧುಸೂದನ್. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ರು. ಆನಂತರ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ನೆಮ್ಮದಿ ಜೀವನ ಸಾಗಿಸೋಣ ಅಂತ ನಿರ್ಧಾರ ಮಾಡಿದ್ರು.

ದಿನ ಕಳೆಯುತ್ತಿದ್ದಂತೆ ಅವರ ಹೆಂಡತಿ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಬಿಟ್ಟಿದ್ದಾರೆ. ಆ ನೋವು ಮಧುಸೂದನ್ ಅವರನ್ನ ವಿಪರೀತ ಬಾಧಿಸಿದ್ದು, ಕುಡಿತಕ್ಕೆ ದಾಸನನ್ನಾಗಿಸಿದೆ. ಇದೆ ಚಟ ಮನೆಯಲ್ಲಿದ್ದ ಮಕ್ಕಳಿಗೆ ಕಿರಿಕಿರಿ ಉಂಟು ಮಾಡಿದೆ. ಕೊನೆಗೆ ಮನೆ ಬಿಟ್ಟು ಬಂದ ಮಧುಸೂದನ್ ಬೀದಿ ಬೀದಿಯಲ್ಲಿ ಚಿಂದಿ ಹಾಯ್ದು ಜೀವನ ನಡೆಸೋದಕ್ಕೆ ಶುರು ಮಾಡಿದ್ದಾರೆ.

ಪ್ರತಿ ತಿಂಗಳ ಅವರ ಅಕೌಂಟ್ ಗೆ ಸರ್ಕಾರದದಿಂದ ಪೆನ್ಶನ್ ಕೂಡ ಬರುತ್ತೆ. ಆದ್ರೆ ಇಲ್ಲಿವರೆಗೆ ಅದನ್ನ ತೆಗೆದುಕೊಂಡಿಲ್ಲ ಬದಲಿಗೆ ಚಿಂದಿ ಹಾಯ್ದು ಅದರಿಂದ ಬಂದ ಹಣದಿಂದಲೇ ಊಟ_ತಿಂಡಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಈ ವಿಷಯ ತಿಳಿದು ಅವರಿಗೆ ಸುಂದರ ಬದುಕು ಕಟ್ಟಿಕೊಡೋದಕ್ಕೆ ಹೋಗಿದ್ದಾರೆ. ಆದ್ರೆ ಅದನ್ನು ಒಪ್ಪದ ಮಧುಸೂದನ್ ಚಿಂದಿ ಹಾಯುವುದೆ ಸುಂದರ ಬದುಕಿ ಎನಿಸಿದೆ ಎಂದಿದ್ದಾರೆ.

ಏನಿದ್ದರೇನಂತೆ ನೆಮ್ಮದಿಯೇ ಇಲ್ಲ ಎಂದಾಗ. ಲಕ್ಷ ಲಕ್ಷ ಹಣ ಅಕೌಂಟ್ ನಲ್ಲಿದ್ದರು ಅದು ಆತನಿಗೆ ನೆಮ್ಮದಿ ನೀಡಿಲ್ಲ. ಆದ್ರೆ ಆ ಚಿಂದಿ ಹಾಯುವ ಕೆಲಸ ನೆಮ್ಮದಿ ನೀಡಿದೆ. ಜೀವನದಲ್ಲಿ ಮುಖ್ಯವಾಗಿ ಬೇಕಾಗಿರೋದು ಅದೆ ಅಲ್ವಾ.