ಸಾಮಾನ್ಯ ಕನ್ನಡಿಗ ನಿಂದ ರಾಮ ರಾಮ ರೇ review

0
1036

ಒಂದ್ ವೀಕ್ ಇಂದ ಎಲ್ಲಾ ಕಡೆ ಈ ಸಿನೆಮಾದೆ ಮಾತುಕತೆ ಕಣ್ರೀ. ಕೆಲವರಿಗಂತೂ ಆ ಸಿನೆಮಾದ ಹೆಸರೇ ಗೊತ್ತಿಲ್ಲ ಆದ್ರೂ ಕನ್ನಡದಲ್ಲೊಂದು ಸಿನಿಮಾ ಬಂದಿದೆಯಂತೆ, ತುಂಬಾ ಚೆನ್ನಾಗಿದೆಯಂತೆ ಅಂತಿದಾರೆ. ಫೇಸ್ ಬುಕ್, ಟ್ವಿಟ್ಟರ್ , ವಾಟ್ಸ್ ಆಪ್ ನಲ್ಲಂತೂ ಇದರದ್ದೇ ಹವಾ. ಸೆಲೆಬ್ರಿಟಿಸ್ ಅಂತೂ ಈ ಮೂವಿನ ಹೊಗಳಿದ್ದೋ ಹೊಗಳಿದ್ದು..

ಉಫ್ ಇಷ್ಟೆಲ್ಲ ಅಂತೆ ಕಂತೆಗಳನ್ನ ಕೇಳಿದ್ಮೇಲೆ ಸುಮ್ನೆ ಇರೋಕ್ ಆಗತ್ತಾ.. ಅಂತಾದ್ದು ಏನಿದೆ ಈ ಸಿನಿಮಾದಲ್ಲಿ ಅಂತ ನಾನು ಸಿನಿಮಾ ನೋಡೋಕ್ ಹೊರಟೇಬಿಟ್ಟೆ..
ಸಿನಿಮಾ ಯಾವ್ದು ಅಂತ ಗೊತ್ತಾಗಿರ್ಬೇಲ್ಲ.. ಅದೇ ರೀ “ರಾಮ ರಾಮ ರೇ… ”

ರಾಮಾಯಣದ ಸೀತೆಯ ಅಗ್ನಿಪರೀಕ್ಷೆಯಿಂದ ಶುರುವಾಗೋ ಸಿನಿಮಾ ಮಹಾಭಾರತದ ಶ್ರೀ ಕೃಷ್ಣನ ಬೋದನೆಯವರೆಗೂ ಸಾಗುತ್ತೆ.
ಇದು “ಸ್ಯಾಂಡಲ್ ರಾಜ”ನ ಬದುಕಿನ ಪಯಣ ಈ ಪಯಣದಲ್ಲಿ ಬದುಕು, ಭಾವನೆ, ಬದಲಾವಣೆಯ ಆಳವನ್ನ ಅರ್ಥ ಮಾಡ್ಸೋ ಪ್ರಯತ್ನ ಸತ್ಯ ಪ್ರಕಾಶ್ ರದು.

ಆದ್ರೆ ಯಾರ್ ಯಾರ ಬದುಕು..? ಯಾವ ಭಾವನೆಗಳು..? ಯಾರ್ ಯಾರಲ್ಲಿ ಬದಲಾವಣೆಗಳು..?? ಮತ್ತೆ ಹೇಗೆ..?? ಅನ್ನೋದೇ ಚಿತ್ರಕಥೆಯ ವಿಶೇಷ. ಅದನ್ನ ಥಿಯೇಟರಿನಲ್ಲೇ ನೋಡಿ ಮಜಾ ಬರತ್ತೆ.
ಹೊಸತನ, ಹೊಸ ಪ್ರಯತ್ನಗಳಿಗೆ ಸ್ಯಾಂಡಲ್ ವುಡ್ನಲ್ಲಿ ಜಯ ಸಿಗ್ತಾ ಇರೋ ಸಂದರ್ಭದಲ್ಲಿ ಮತ್ತೊಂದು ಹೊಸತರದ ಸಿನಿಮಾ ಬಂದಿರೋದು ಸಂತಸದ ಸಂಗತಿ.
ಎರಡು ಪಾತ್ರದ ಮುಖ ಪರಿಚಯ ಇರೋ ತರ ಅನ್ಸೋದ್ ಬಿಟ್ರೆ ಉಳಿದ ಎಲ್ಲಾ ಕಲಾವಿದರು ಹೊಸಬರೇ. ಒಟ್ಟಾರೆ ಇದು ಮಾಮೂಲಿ ಸಿನಿಮಾ ಅಲ್ಲ ಹೊಸಬರ ಹೊಸತನದ ಸಿನಿಮಾ.


ಸಿನಿಮಾ ಥೀಯೇಟರ್ ನಿಂದ ಥೀಯೇಟರ್ ಗೆ ಓಡೋ ಮೊದ್ಲು ಕನ್ನಡಿಗರ ಮನಸಿನಿಂದ ಮನಸಿಗೆ ಓಡಲಿ ಅನ್ನೋದು ನನ್ ಉದ್ದೇಶ.. “ಮಿಸ್ ಮಾಡ್ಕೋಬೇಡಿ”. ತುಂಬಾ ಒಳ್ಳೆ ಸಿನಿಮಾ. ನೋಡಿ ಒಂಚೂರ್ ಫೀಲ್ ಮಾಡಿ…

 

ಸಾಮಾನ್ಯ ಕನ್ನಡಿಗ : Ranganath Siddu