ಮಲೆನಾಡಿನ ಈ ತಟ್ಟು ಕಡುಬು ಮಾಡೋದನ್ನ ಕಲಿಯಿರಿ, ಇದು ರುಚಿಗೂ ಸೈ ಆರೋಗ್ಯಕ್ಕೂ ಸೈ!!

0
4063

ಮಲೆನಾಡಿನ ಮನೆಮಾತಾಗಿರುವ ಬೆಳಗಿನ ತಿಂಡಿ ಅಕ್ಕಿ ತರಿ ತಟ್ಟು ಕಡುಬು. ಬೆಳಿಗ್ಗೆ ಉಪಹಾರಕ್ಕೆ ಇದನ್ನು ತಿಂದರೆ ದಿನವಿಡೀ ಹಗುರವಾಗಿರಬಹುದು. ಚಟ್ನಿ, ಬೆಳೆ ಸಾರಿನ ಜೊತೆಗೆ ಇದನ್ನು ತಿನ್ನಲು ಚೆನ್ನಾಗಿರುತ್ತದೆ. ಕೇವಲ ಅಕ್ಕಿ ರವೆಯನ್ನು ಬಳಸಿ ಕಡುಬನ್ನು ಮಾಡುವುದರಿಂದ ಇದರ ಅಡುಗೆಗೆ ಹೆಚ್ಚಿನ ಸಾಮಾಗ್ರಿಗಳು ಬೇಡ.

Also read: ಈರುಳ್ಳಿ ಮತ್ತು ಆಲೂಪರೋಟಾನ ಸಾಮಾನ್ಯವಾಗಿ ನೀವು ತಿಂದಿರುತ್ತೀರಿ…ಆದರೆ ಟೊಮೆಟೊ ಪರೋಟಾ ರುಚಿನೇ ಬೇರೆ…

ಬೇಕಾಗುವ ಸಾಮಗ್ರಿಗಳು:

 • ಅಕ್ಕಿ ರವೆ 1 ಲೋಟ
 • ಎಣ್ಣೆ
 • ಸಾಸಿವೆ
 • ಜೀರಿಗೆ
 • ಕಾಯಿತುರಿ
 • ಕೊತ್ತೊಂಬರಿ ಸೊಪ್ಪು
 • ಕರಿಬೇವು
 • ಕಾಳು ಮೆಣಸಿನ ಪೂಡಿ
 • ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

 • ಮೊದಲಿಗೆ ತಿಂಡಿ ಅಕ್ಕಿಯನ್ನು ತೊಳೆದು ಒಣಗಿದ ಬಟ್ಟೆ ಮೇಲೆ ಹರವಿ, ಅದು ಆರಿದ ಮೇಲೆ ಮಿಕ್ಸಿನಲ್ಲಿ ತರು ತರಿಯಾಗಿ ಪುಡಿ ಮಾಡಿಕೊಳ್ಳಬೇಕು.
 • ಮೊದಲು ಬಾಣಲೆಗೆ ಮೂರು ಚಮಚ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು, ಚಿಟಗೆ ಇಂಗನ್ನು ಹಾಕಿ ನಂತರ ಎರಡು ಕಪ್ಪಿನಷ್ಟು ನೀರನ್ನು ಹಾಕಿ.
 • ಇದಕ್ಕೆ ಒಂದು ಬಟ್ಟಲು ತೆಂಗಿನ ಕಾಯಿ ತೂರಿ, ಕೊತ್ತೊಂಬರಿ ಸೊಪ್ಪು, ಪುಡಿಮಾಡಿರುವ ಕರಿಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಬೇಕು.
 • ಈಗ ಒಂದು ಕುದಿ ಬಂದ ನಂತರ ಇದಕ್ಕೆ ಅಕ್ಕಿ ತುರಿಯನ್ನು ಹಾಕಿಕೊಂಡು ಮೂರು ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು. ಚೆನ್ನಾಗಿ ಬೆಂದ ಮೇಲೆ ಎಣ್ಣೆ ಕೈ ಮಾಡಿಕೊಂಡು ರೌಂಡ್ ಶೇಪ್ ಅಲ್ಲಿ ತಟ್ಟಬೇಕು.
 • ಒಂದು ಪಾತ್ರೆಯ (ಕಡುಬಿನ ಪಾತ್ರೆ) ನೀರು ಹಾಕಿ ಕಾದ ಮೇಲೆ ಅಟ್ಟಣಿಗೆ ಇಟ್ಟು ಉಂಡೆಗಳನ್ನು ಹಾಕಿ, ಮುಚ್ಚಳವನ್ನು ಮುಚ್ಚಿ. ನೀರು ಕಾದ ಹಬೆಯಲ್ಲಿ 30 ನಿಮಿಷಿಗಳ ಕಾಲ ಬೇಯಿಸಿದರೆ ಕಡಬು ಸವಿಯಲು ಸಿದ್ದ.