ಭೂಕಂಪನದ ಅಳೆಯಲು ರಿಕ್ಟರ್ ಮಾಪನ ಬಳಸುತ್ತಾರೆ, ಏನದು?? ಮುಂದೆ ಓದಿ!!!

0
2222

ಜಗತ್ತಿನ ಯಾವುದೇ ಸ್ಥಳದಲ್ಲಿ ಭೂಕಂಪ ಆದಾಗ ಅದರ ತೀವ್ರತೆ ಎಷ್ಟು ಎಂದು ತಿಳಿದುಕೊಳ್ಳಲಾಗುತ್ತದೆ. ಇದನ್ನು ಅಳೆಯಲು ಬಳಸುವ ಸಾಧನ ರಿಕ್ಟರ್ ಮಾಪನ. ಈ ಮಾಪನವನ್ನು ಕಂಡುಹಿಡಿದವರು ಅಮೆರಿಕದ ವಿಜ್ಞಾನಿ ಚಾಲ್ರ್ಸ್ ಫ್ರಾನ್ಸಿಸ್ ರಿಕ್ಟರ್. ರಿಕ್ಟರ್ ತನ್ನ ಸಂಶೋಧನೆಯ ಜೊತೆಗೆ ತನ್ನ ಹೆಸರನ್ನು ಸೇರಿಸಿದ್ದರಿಂದ ಭೂಕಂಪ ಅಳೆಯುವ ಮಾಪನವು ರಿಕ್ಟರ್ ಎಂದೇ ಹೆಸರಾಯಿತು.

Image result for richter scale\

ಭೂಕಂಪಗಳ ಪ್ರಮಾಣ ಅಳೆಯುವ ಮಾಪನವನ್ನು ಅಭಿವೃದ್ಧಿ ಪಡಿಸಿದ ಭೂಕಂಪ ಶಾಸ್ತ್ರಜ್ಞ ರಿಕ್ಟರ್ ಭೂಕಂಪನ ಸಂಶೋಧನೆಯಲ್ಲಿ ತೊಡಗಿದವರಲ್ಲಿ ಮೊದಲಿಗರು. ರಿಕ್ಟರ್ ಮಾಪನ ಅವರು ಜಗತ್ತಿಗೆ ನೀಡಿದ ಅತ್ಯುತ್ತಮ ಕೊಡುಗೆ. ಹ್ಯಾಮಿಲ್ಟನ್ ಸಮೀಪದ ಓಹಿಯೋ ಫಾರ್ಮ್‍ನಲ್ಲಿ 1900 ಏಪ್ರಿಲ್ 26ರಂದು ಜನಿಸಿದ ರಿಕ್ಟರ್ ಅಮೆರಿಕದ ವಿಜ್ಞಾನಿ, ಭೂಕಂಪ ಶಾಸ್ತ್ರಜ್ಞ. ಇವರು ಭೂಕಂಪದ ಪ್ರಮಾಣ ಅಳೆಯುವ ರಿಕ್ಟರ್ ಮಾಪನವನ್ನು ಅಭಿವೃದ್ಧಿಪಡಿಸಿದರು. ತಾಯಿಯೊಂದಿಗೆ 1916ರಲ್ಲಿ ಲಾಸ್‍ಏಂಜಲಿಸ್‍ಗೆ ತೆರಳಿದ ರಿಕ್ಟರ್ ಯುನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಣ ಪಡೆದರು.

ಸ್ಟಾನ್‍ಫೋರ್ಡ್ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರ ಮತ್ತು ಕ್ಯಾಲಿಫೋರ್ನಿಯಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಿಎಚ್‍ಡಿ ಪಡೆದರು. ವಾಷಿಂಗ್ಟ್‍ನ್ ಕಾರ್ನೇಜಿ ಸಂಸ್ಥೆಯಲ್ಲಿ ಭೂಕಂಪಶಾಸ್ತ್ರ ಪ್ರಯೋಗಾಲಯದ ಸಿಬ್ಬಂದಿಯಾಗಿದ್ದರು. ನಂತರ ಕಾಲ್‍ಟೆಕ್‍ನಲ್ಲಿ ಭೌತಶಾಸ್ತ್ರ ಮತ್ತು ಭೂಕಂಪಶಾಸ್ತ್ರ ಬೋಧಕರಾಗಿದ್ದು, ಅಲ್ಲಿನ ಭೂಕಂಪಶಾಸ್ತ್ರ ಪ್ರಯೋಗಾಲಯದಲ್ಲೂ ಕಾರ್ಯನಿರ್ವಹಿಸಿದರು. ಕಾಲ್‍ಟೆಕ್‍ನಲ್ಲಿ ಪ್ರೊಫೆಸರ್ ಬೆನೊ ಗುಟೆನ್‍ಬರ್ಗ್‍ರೊಂದಿಗೆ ರಿಕ್ಟರ್ ಕಾರ್ಯನಿರ್ವಹಿಸಿದರು. ಇಬ್ಬರೂ ಸೇರಿ ಭೂಕಂಪದ ತೀವ್ರತೆ ಅಳೆಯುವ ಸಾಧನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿದರು.

ಅವರು ಸಿದ್ಧಪಡಿಸಿದ ಮಾಪವನ್ನು 1930ರಲ್ಲಿ ರಿಕ್ಟರ್ ಸ್ಕೇಲ್ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು.ತನ್ನ ಜೀವಿತಾವಧಿಯ ಬಹುತೇಕ ಸಮಯವನ್ನು ಕಾಲ್‍ಟೆಕ್‍ನಲ್ಲಿ ಸಂಶೋಧನ ಮಾಡುವುದರಲ್ಲಿ ಕಳೆದ ರಿಕ್ಟರ್, 1952ರಲ್ಲಿ ಭೂಕಂಪಶಾಸ್ತ್ರದ ಪ್ರಾಧ್ಯಾಪಕರಾದರು. ಭೂಕಂಪಶಾಸ್ತ್ರ ಕುರಿತ ಸಂಶೋಧನೆಯ ಜೊತೆಗೆ ಪ್ರಾಧ್ಯಾಪಕ ವೃತ್ತಿಯನ್ನೂ ಮಾಡಿದರು. ಭೂಮಿಯ ಸಿದ್ಧಾಂತ ಫಲಕಕ್ಕೆ ಗಣನೀಯ ಕೊಡುಗೆ ನೀಡಿದವರು ರಿಕ್ಟರ್.

Image result for richter scale\

ರಿಕ್ಟರ್ ಸಂಶೋಧನೆಗೂ ಮುನ್ನ 1902ರಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಮೆರ್ಕಾಲಿ ಸ್ಕೇಲ್‍ನಿಂದ ಭೂಕಂಪದ ತೀವ್ರತೆಯನ್ನು ಅಳೆಯಲಾಗುತ್ತಿತ್ತು. ಮೆರ್ಕಾಲಿ ಮಾಪಕದಲ್ಲಿ ಜನರು ಮತ್ತು ಕಟ್ಟಡಗಳಿಗೆ ಸಂಭವಿಸಿದ ಹಾನಿಯ ಪ್ರಮಾಣವನ್ನು ಅವಲಂಬಿಸಿ 1ರಿಂದ 12ರವರೆಗೆ ವರ್ಗೀಕೃತ ಭೂಕಂಪಗಳನ್ನು ವಿಂಗಡಿಸಲಾಗುತ್ತಿತ್ತು. ರಿಕ್ಟರ್ ಮಾಪಕವು ಭೂಕಂಪವೊಂದರ ತೀವ್ರತೆಯನ್ನು ಸಂಪೂರ್ಣವಾಗಿ ಅಳತೆ ಮಾಡುತ್ತದೆ. ಭೂಕಂಪದ ತೀವ್ರತೆಯನ್ನು ಅಳೆಯುವ ವಾಸ್ತವಿಕ ಮಾಪಕವಿದು.1930ರ ಕೊನೆಯಲ್ಲಿ ರಿಕ್ಟರ್ ಮತ್ತು ಗುಟೆನ್ಬಗ್ ಜಗತ್ತಿನಾದ್ಯಂತ ಭೂಕಂಪ ಚಟುವಟಿಕೆಯ ಮೇಲ್ವಿಚಾರಣೆ ಕೈಗೊಂಡರು. ಆಳವಾದ ಭೂಕಂಪನಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದು, 185 ಮೈಲುಗಳಿಗಿಂತ ಹೆಚ್ಚಿನ ನೆಲದಾಳದಲ್ಲಿ ಗಮನ ಕೇಂದ್ರೀರಿಸಿ ಅಧ್ಯಯನ ನಡೆಸಿದರು. ಎಲ್ಲಾ ಪ್ರಮುಖ ಭೂಕಂಪಗಳ ಅಧಿಕೃತ ಕೇಂದ್ರ ಮತ್ತು ಅವುಗಳ ಭೌಗೋಳಿಕ ವರ್ಗೀಕರಣದ ಕುರಿತು ಸಂಶೋಧನೆ ನಡೆಸಿದರು.

ರಿಕ್ಟರ್ ಉತ್ತಮ ಭೂಕಂಪ ಕಟ್ಟಡ ಸಂಹಿತೆಗಳು ಮತ್ತು ಭೂಕಂಪ ವಲಯಗಳಲ್ಲಿ ವಾಸಿಸುವ ಜನರಿಗೆ ಸರಿಯಾದ ತರಬೇತಿ ಕುರಿತ ಪ್ರಚಾರ ಭೂಕಂಪ ಎಂಜಿನಿಯರಿಂಗ್‍ನಲ್ಲಿ ಪಾಲ್ಗೊಂಡರು. ಮೂವತ್ತಕ್ಕಿಂತ ಹೆಚ್ಚಿನ ಮಹಡಿಯ ಕಟ್ಟಡ ನಿರ್ಮಾಣವನ್ನು ವಿರೋಧಿಸುತ್ತಿದ್ದ ಅವರು ಅಪಾಯಕಾರಿ ಬಾಹ್ಯ ವರ್ಧನೆಗಳನ್ನು ವಿರೋಧಿಸುತ್ತಿದ್ದರು. ಇಂತಹ ಮುಂಜಾಗ್ರತೆಗಳಿಂದ ಅನೇಕ ಜೀವಗಳನ್ನು ಉಳಿಸಿದ ಕೀರ್ತಿ ರಿಕ್ಟರ್‍ಗೆ ಸಲ್ಲುತ್ತದೆ. ಚಾಲ್ರ್ಸ್ ರಿಕ್ಟರ್ 1985ರ ಸೆಪ್ಟೆಂಬರ್ 30ರಂದು ನಿಧನರಾದರು.