ಬಾಲಿವುಡ್‍ ಬೆಚ್ಚಿ ಬೀಳಿಸಿದ ರಿಷಿ ಕಪೂರ್‍ ಅವರ 6 `ಖುಲ್ಲಂ ಖುಲ್ಲಾ’ ಹೇಳಿಕೆಗಳು

0
1713

ಬಾಲಿವುಡ್‍ ನಟ ರಿಷಿಕಪೂರ್‍ ತಮ್ಮ ಜೀವನಚರಿತ್ರೆ ಕುರಿತು ಬರೆದ `ಖುಲ್ಲಂಖುಲ್ಲಾ; ರಿಷಿಕಪೂರ್‍ ಅನ್‍ ಸೆನ್ಸಾರ್ಡ್‍’ ಪುಸ್ತಕ ಸಾಕಷ್ಟು ವಿವಾದ ಸೃಷ್ಟಿಸಿದೆ. ಪುಸ್ತಕ ಬುಧವಾರ ಸಂಜೆ ಮುಂಬೈನಲ್ಲಿ ಬಿಡುಗಡೆಗೊಂಡಿತಾದರೂ ಅದಕ್ಕೂ ಮುನ್ನವೇ ರಿಷಿ ಕಪೂರ್‍ ಹಲವಾರು ರೋಚಕ ಘಟನೆಗಳನ್ನು ಬಹಿರಂಗಪಡಿಸಿ ಕುತೂಹಲ ಮೂಡಿಸಿದ್ದಾರೆ. ಅದರಲ್ಲಿ 5 ವಿಷಯಗಳ ಕುರಿತು ಅವರು ಬಿಚ್ಚಿಟ್ಟ ಸತ್ಯ ಬಾಲಿವುಡ್‍ ಮಾತ್ರವಲ್ಲ, ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಅದರ ತುಣುಕುಗಳು ಇಲ್ಲಿವೆ.

  1. ತಾನು ನಟಿಸಿದ ಮೊದಲ ಚಿತ್ರ `ಬಾಬಿ’ ಚಿತ್ರದ ಅಭಿನಯಕ್ಕಾಗಿ ಸುಮಾರು 30 ಸಾವಿರ ರೂ. ನೀಡಿ ಪ್ರತಿಷ್ಠಿತ ಪತ್ರಿಯೊಂದರ ಪ್ರಶಸ್ತಿ ಪಡೆದಿದ್ದೆ. ಆದರೆ ಅದೇ ವರ್ಷ ಬಿಡುಗಡೆಯಾಗಿದ್ದ ಜಂಜೀರ್‍ ಚಿತ್ರಕ್ಕಾಗಿ ಅಮಿತಾಭ್‍ ಬಚ್ಚನ್‍ಗೆ ಈ ಪ್ರಶಸ್ತಿ ಸಲ್ಲಬೇಕಿತ್ತು ಎಂದು ನಂತರ ಕೊರಗಿದೆ. ಇತ್ತೀಚೆಗೆ ಕಪೂರ್ ಅಂಡ್‍ ಸನ್ಸ್ ಚಿತ್ರದ ಪೋಷಕ ಪಾತ್ರಕ್ಕಾಗಿ ಕೂಡ ಪ್ರಶಸ್ತಿ ಪಡೆಯುವ ಮುನ್ನ ವ್ಯಕ್ತಿಯೊಬ್ಬನಿಗೆ ಹಣ ನೀಡಿದ್ದೇನೆ. ಆದರೆ ಆತ ಫೀಲ್ಮ್ ಫೇರ್ ‍ಆಯ್ಕೆ ಸಮಿತಿ ಸದಸ್ಯರಿಗೆ ನೀಡಿದ್ದಾನೋ ಇಲ್ಲವೋ ಗೊತ್ತಿಲ್ಲ.
  2. ತಂದೆ ರಾಜ್‍ಕಪೂರ್‍ ತಮ್ಮ ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ನಟಿಯರೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳುತ್ತಿದ್ದರು. ಅದರಲ್ಲೂ ನರ್ಗಿಸ್‍ ದತ್‍ ಮತ್ತು ವೈಜಯಂತಿಮಾಲಾ ಅವರೊಂದಿಗೆ ಹೆಚ್ಚಾಗಿ ಕೇಳಿ ಬರುತ್ತಿತ್ತು. ಪ್ರಚಾರಕ್ಕಾಗಿ ಅವರು ರೋಮಾನ್ಸ್ ಮಾಡುವ ಕಲೆ ಅವರಿಗೆ ಹುಟ್ಟಿನಿಂದಲೇ ಬಂದಿತ್ತು.
  3. ಬಾಬಿ ಚಿತ್ರಕ್ಕಿಂತ ದೊಡ್ಡ ಬ್ಲಾಕ್‍ಬಾಸ್ಟರ್‍ ಚಿತ್ರ ದುಡ್ಡು ಮಾಡದೇ ಇದ್ದರೆ ನಾನು ಬರೆಯುವುದನ್ನೇ ನಿಲ್ಲಿಸುತ್ತೀನಿ ಅಂತ ಜಾವೇದ್‍ ಅಖ್ತರ್‍ ಅವರು ಕುಡಿದ ಮತ್ತಿನಲ್ಲಿ ಸವಾಲು ಹಾಕಿದ್ದರು. ಚೆನ್ನಾಗಿ ಬರೆಯಬಲ್ಲೆ ಎಂಬ ಅವರ ಅಹಂಕಾರ ನನಗೆ ಇಷ್ಟವಾಗಲಿಲ್ಲ.
  4. ರಾಜೇಶ್‍ ಖನ್ನಾ ರಾಜ್‍ಕಪೂರ್‍ ಚಿತ್ರದಲ್ಲಿ ನಟಿಸಬೇಕು ಎಂದು ಬಯಸಿದ್ದರು. ಆದರೆ ನಾನು ಅದಕ್ಕೆ ಅವಕಾಶ ನೀಡಲಿಲ್ಲ. ಸತ್ಯಂ ಶಿವಂ ಸುಂದರಂ ಚಿತ್ರದಲ್ಲಿ ವಾಸ್ತವವಾಗಿ ರಾಜೇಶ್‍ ಖನ್ನಾ ನಟಿಸಬೇಕಿತ್ತು. ಆದರೆ ನಂತರ ಶಶಿಕಪೂರ್ ನಟಿಸಿದರು. ಆದರೆ ತಾನೇ ನಿರ್ದೇಶನದ `ಆ ಅಬ್‍ ಲೌಟ್ ಚಲೇ’ ಚಿತ್ರದಲ್ಲಿ ರಾಜೇಶ್ ಖನ್ನಾ ಅವರಿಗೆ ಅವಕಾಶ ನೀಡಿದ್ದೆ. ಈ ಮೂಲಕ ಸಿನಿಮಾ ಉದ್ಯಮದಲ್ಲೂ ಜಾಣ್ಮೆ ಪ್ರದರ್ಶಿಸಿದ್ದೆ.
  5. ಬಾಲಿವುಡ್‍ನಲ್ಲಿ ಹಲವಾರು ಸಿನಿಮಾ ನಿರ್ಮಾಪಕರು ಮತ್ತು ನಟ-ನಟಿಯರಿಗೆ ಬೆದರಿಕೆ ಹಾಕುತ್ತಿದ್ದ ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಅವರನ್ನು 1998ರ ದುಬೈನ ಅವರ ಮನೆಯಲ್ಲೇ ಭೇಟಿ ಮಾಡಿ ಅವರೊಂದಿಗೆ ಚಹಾ ಸೇವಿಸಿದ್ದೆ. ಆಗ ಆತ ಕ್ರಿಮಿನಲ್ ಎಂದು ತಿಳಿದಿರಲಿಲ್ಲ. ಆಮೇಲೆ ತಿಳಿದರೂ ಏನು 2013ರಲ್ಲಿ ದಾವೂದ್‍ ಸ್ಫೂರ್ತಿಯ ಮೇಲೆ ಮಾಡಲಾದ `ಡಿ-ಡೇ’ ಚಿತ್ರದಲ್ಲಿ ನಾನೇ ದಾವೂದ್ ಪಾತ್ರ ಮಾಡಿದ್ದೆ.
  6. ಅಮಿತಾಭ್‍ ಬಚ್ಚನ್‍ ಒಳ್ಳೆಯ ನಟನೇ ಇರಬಹುದು. ಆದರೆ ಅವರು ತಮ್ಮ ಸಹನಟರನ್ನು ಎಂದು ಪ್ರೋತ್ಸಾಹಿಸುತ್ತಿರಲಿಲ್ಲ. ಎಲ್ಲಾ ಗೌರವಗಳೂ ತಮಗೆ ಧಕ್ಕಬೇಕೆಂದು ಬಯಸುತ್ತಿದ್ದರು.