ರಾಜ್ಯದಲ್ಲಿ ಹೆಚ್ಚಾದ ರೋಬೋಟ್-ಗಳ ದರ್ಬಾರ್; ಸಿಲಿಕಾನ್ ಸಿಟಿಯ ಶಾಲೆಯೊಂದರಲ್ಲಿ ರೋಬೋಟ್‌ ಟೀಚರ್‌.!

0
465

ಮನುಷ್ಯನ ಜೀವನವೇ ತಂತ್ರಜ್ಞಾನ ಆಗುವುದರಲ್ಲಿ ಅನುಮಾನವಿಲ್ಲ, ಎನ್ನುವ ಮಾತು ಸತ್ಯವಾಗಿದೆ. ಏಕೆಂದರೆ ಇತ್ತೀಚಿಗೆ ರೊಬೋಟ್-ಗಳ ಹಾವಳಿ ಹೆಚ್ಚುತ್ತಿದ್ದು ಮಾನವನು ಮಾಡುವ ಎಲ್ಲ ಕೆಲಸವನ್ನು ರೋಬೋಟ್-ಗಳೇ ಮಾಡುತ್ತಿದ್ದು ಆಶ್ಚರ್ಯಿಯಾಗಿದೆ. ಮೊನ್ನೆ ತಾನೇ ರಾಜ್ಯದ ಹೊಟೇಲ್‌ಗಳಲ್ಲಿ ಸಪ್ಲೈಯರ್‌ ಕೆಲಸ ಮಾಡಿದ ರೋಬೋಟ್ ಈಗ ಶಿಕ್ಷಕರ ಹಾಗೇ ಟೀಚಿಂಗ್ ಮಾಡುತ್ತಿದೆ. ಇಂತಹ ಸಾಹಸ ನಡೆಯುತ್ತಿರುವುದು ಕೂಡ ಬೆಂಗಳೂರಿನ ಶಾಲೆಯಲ್ಲಿ ಎನ್ನುವುದು ಹೆಮ್ಮೆಯಾಗಿದೆ.

ಹೌದು ಇಂದಿನ ತಂತ್ರಜ್ಞಾನ ಜಗತ್ತು ಹಲವು ಹೊಸ ಆಯಾಮಗಳಿಗೆ ವೇದಿಯಾಗುತ್ತಿದ್ದು, ಮನುಷ್ಯನಿಗೆ ಸರಿಸಮನಾಗಿ ನಿಲ್ಲಬಲ್ಲ ಮಾನವ ರೋಬೋಟ್‌ಗಳು ತಯಾರಾಗುತ್ತಿವೆ. ಹಲವು ಕ್ಷೇತ್ರಗಳಲ್ಲಿ ಕೆಲಸಕ್ಕೆಂದು ಮಾನವರ ಬದಲು ರೋಬೋಟ್‌ಗಳನ್ನು ಬಳಸುತ್ತಿಸುತ್ತಿದ್ದಾರೆ. ಆದ್ರೆ ಮಾನವ ರೋಬೋಟ್‌ಗಳು ಈಗ ಶಿಕ್ಷಕ ವೃತ್ತಿಯನ್ನು ಆರಂಭಿಸಿವೆ ಎನ್ನುವ ಸಂಗತಿ ಅಚ್ಚರಿ ಎನಿಸಿದ್ದು. ಬೆಂಗಳೂರಿನ ಇಂದೂಸ್‌ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲು ಮಾನವ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೆರವಿನಿಂದ ಕೆಲಸ ಮಾಡುವ ಈ ರೋಬೋಟ್‌ಗಳು ಪ್ರತಿದಿನ ಸುಮಾರು 5 ವಿಷಯಗಳ ಕುರಿತು ಸುಮಾರು 300 ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತವೆ.

ಅದೇರೀತಿ ಪಾಠದ ಕುರಿತಾಗಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಇದು 5.7 ಪೂಟ್ ಎತ್ತರ ಹೊಂದಿರುವ ಈ ರೋಬೋಟ್‌ 45kg ತೂಕವನ್ನು ಹೊಂದಿವೆ. ಫಾರ್ಮಲ್‌ ಡ್ರೆಸ್‌ ಧರಿಸಲಾಗಿದ್ದು, ನೋಡಲು ಶಿಕ್ಷಕಿಯರಂತೆ ಕಾಣಿಸುತ್ತವೆ. ಜೀವಶಾಸ್ತ್ರ, ರಾಸಾಯನಶಾಸ್ತ್ರ, ಭೌಗೋಳ ಶಾಸ್ತ್ರ, ಭೌತಶಾಸ್ತ್ರ ಮತ್ತು ಇತಿಹಾಸ ವಿಷಯದ ಪಾಠಗಳನ್ನು ಮಾಡುತ್ತದೆ. ಈ ರೋಬೋಟ್‌ಗಳೊಂದಿಗೆ ಶಿಕ್ಷಕರು ಜೊತೆಗಿದ್ದು, ಬೋಧಿಸುವ ವಿಷಯದ ಕುರಿತು ಕೀ ಕಾನ್ಸೆಪ್ಟ್‌ ಮತ್ತು ಅಪ್ಲಿಕೇಶನ್‌ಗಳನ್ನು ಗಮನಕ್ಕೆ ತರುತ್ತಾರೆ. ಶಾಲೆಯ ಚೀಫ್ ಡಿಸೈನ್ ಅಧಿಕಾರಿ ವಿಘ್ನೇಶ ರಾವ್ ಮತ್ತು 17 ಸದಸ್ಯರ ಒಳಗೊಂಡ ಅವರ ತಂಡ ಸೇರಿ ಒಟ್ಟು ಮೂರು ರೋಬೋಟ್‌ಗಳನ್ನು ನಿರ್ಮಿಸಿದ್ದಾರೆ.

ಈ ರೋಬೋಟ್‌ಗಳ ತಯಾರಿಕೆಯಲ್ಲಿ 3D ಪ್ರಿಂಟೆಡ್‌ ಮೆಟಿರಿಯಲ್‌ಗಳು ಮತ್ತು ಸ್ಮಾರ್ಟ್‌ ಸರ್ವೋ ಮೋಟರ್‌ಗಳನ್ನು ಬಳಸಲಾಗಿದ್ದು, ಹಾಗೆಯೇ ಸಾಫ್ಟವೇರ್, ಕೃತಕ ಬುದ್ಧಿಮತ್ತೆ ಮತ್ತು ಡಿಸೈನ್‌ ತಯಾರಿಸಲು ಎರಡು ವರ್ಷಗಳೆ ಬೇಕಾಯಿತಂತೆ. ಪ್ರತಿ ರೋಬೋಟ್ ತಯಾರಿಕೆಗೆ 8ಲಕ್ಷ ಖರ್ಚಾಗಿದೆ ಎಂದಿದ್ದಾರೆ ರಾವ್. ಶಾಲೆಯ ತರಗತಿಗಳಲ್ಲಿ ರೋಬೋಟ್‌ಗಳ ಪಾಠ ಬೋಧನೆಗೆ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಶಿಕ್ಷಕರ ಜೊತೆಗೆ ಮಾನವ ರೋಬೋಟ್‌ಗಳು ತರಗತಿಯಲ್ಲಿ ಪಾಠ ಬೋಧನೆಯಲ್ಲಿ ತೊಡಗುವುದು ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತೇಜನ ನೀಡಲಿದೆ. ರೋಬೋಟ್‌ ಪಾಠ ಮಾಡುತ್ತಿದ್ದರೇ, ಅದೇ ವೇಳೆ ಶಿಕ್ಷಕರು ಪ್ರತಿ ವಿದ್ಯಾರ್ಥಿಗಳತ್ತ ಗಮನ ನೀಡಲು ನೆರವಾಗಲಿದೆ ಎಂದು ಇಂದೂಸ್‌ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅರ್ಜುನ್ ರೇ ಹೇಳಿದ್ದಾರೆ.

ಅದರಂತೆ ಮಕ್ಕಳಿಗೂ ಪಾಠ ಕೇಳಲು ಉತ್ಸಾಹ ಮೂಡುತ್ತಿದೆ. ಎಷ್ಟು ಬೇಕೂ ಅಷ್ಟನ್ನು ಅರ್ಥವಾಗುವ ರೀತಿಯಲ್ಲಿ ರೋಬೋಟ್ ಕಲಿಸಲಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಗೆ ಹೆಚ್ಚಿನ ನೆರವಾಗಿದೆ. ಎಂದು ತಿಳಿಸಿದ್ದಾರೆ. ಒಟ್ಟಾರೆ ರೋಬೋಟ್ ಹಾವಳಿ ಶಿಕ್ಷಣ ಕ್ಷೆತ್ರಕ್ಕೂ ಕಾಲಿಟ್ಟಿದ್ದು ಮುಂದೊಂದು ದಿನ ವಾಹನ ಚಲಾಯಿಸಲು ಕೂಡ ರೋಬೋಟ್ ಬರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

Also read: ಹಸಿದವರಿಗೆ ಊಟ ಸಿಗುವಂತ ಕಾರ್ಯ ಮಾಡಲು ಮುಂದಾದ ರೈಲ್ವೆ ಇಲಾಖೆ; ಬೆಂಗಳೂರು, ಮೈಸೂರು ನಿಲ್ದಾಣಗಳಲ್ಲಿ ಸ್ಥಾಪನೆಯಾಗಲಿವೆ ರೆಫ್ರಿಜರೇಟರ್..