ಪತ್ನಿ ಸಾವಿಗೆ ವೈದ್ಯರ ಕಾರಣವೆಂದು ಹೋರಾಟ ಮಾಡಿದ ಗಂಡನಿಗೆ ಪರಿಹಾರವಾಗಿ ಸಿಕ್ತು 39 ಲಕ್ಷ.!

0
531

ಇತ್ತೀಚಿಗೆ ವೈದ್ಯರ ನಿರ್ಲಕ್ಷ್ಯದಿಂದ ಸಾವಿನ ಸಂಖ್ಯೆ ಏರುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಕೆಲವು ಘಟನೆಗಳು ಮುಚ್ಚಿಹೊದರೆ ಇನ್ನೂ ಕೆಲವು ಘಟನೆಗೆ ಸಂಬಂಧಪಟ್ಟು ಕೋರ್ಟ್ ಮೆಟ್ಟಿಲೆರುತ್ತಿವೆ. ಆದರೆ ಕೆಲವು ಘಟನೆಗಳು ಸೀದಾ ವೈದ್ಯರ ತಪ್ಪಿನಿಂದ ಆದರೆ ಇನ್ನೂ ಕೆಲವು ಘಟನೆಗಳು ಬೇರೆಯೇ ಕಾರಣಕ್ಕೆ ಆಗಿರುತ್ತೇವೆ ಆದರೆ ಎಲ್ಲವೂ ವೈದ್ಯರೇ ಮಾಡಿದ ತಪ್ಪು ಎಂದು ಹೇಳಲು ಸಾದ್ಯವಿಲ್ಲ. ಇಂತಹದೆ ಒಂದು ಘಟನೆ ನಡೆದಿದ್ದು ಹೆಂಡತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕೋರ್ಟ್​ ಮೆಟ್ಟಿಲೇರಿದ ಗಂಡನಿಗೆ 39 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಹೌದು ವೈದ್ಯರ ನಿರ್ಲಕ್ಷ್ಯಕ್ಕೆ ಹೆಂಡತಿ ಮೃತಪಟ್ಟಿದ್ದಾಳೆ ಎಂದು ಕೋರ್ಟ್​​ ಮೆಟ್ಟಿಲೇರಿದ ಭಾರತೀಯ ಮೂಲದ ಗಂಡನಿಗೆ ಅರಬ್​ ಸಂಯುಕ್ತ ಸಂಸ್ಥಾನದ ನ್ಯಾಯಾಲಯವು 39 ಲಕ್ಷ ಪರಿಹಾರ ಕೊಡಿಸುವುದಾಗಿ ಹೇಳಿದೆ. ಅರಬ್​ ಸಂಯುಕ್ತ ಸಂಸ್ಥಾನದಲ್ಲಿ ಈ ಪ್ರಕರಣ ವರದಿಯಾಗಿದ್ದು. ಜೋಸೆಫ್​ ಅಬ್ರಾಂ ಕೋರ್ಟ್​ ಮೆಟ್ಟಿಲೇರಿದ್ದ ವ್ಯಕ್ತಿ. ಇವರ ಮಡದಿ ಬ್ಲೆಸ್ಸಿ ಟಾಮ್​​ ಮೃತಪಟ್ಟ ಮಹಿಳೆಯಾಗಿದ್ದು. ಶರ್ಜಾ ಮೂಲದ ವೈದ್ಯ ಸನ್ನಿ ಮೆಡಿಕಲ್​ ಸೆಂಟರ್​​ ಹಾಗೂ ಅದರ ವೈದ್ಯ ಭಾರತೀಯ ಮೂಲದ ದರ್ಶನ್​ ಪ್ರಭಾತ್​ ರಾಜಾರಾಮ್​ ಪಿ ನಾರಾಯಣ್ ಅವರು ಜೋಸೆಫ್​ ಅಬ್ರಾಂ ಅವರಿಗೆ ಪರಿಹಾರವಾಗಿ ​39 ಲಕ್ಷ ನೀಡುವಂತೆ ಸಿವಿಲ್​ ನ್ಯಾಯಾಲಯವು ಆದೇಶಿಸಿದೆ. ಪರಿಹಾರವಾಗಿ ದೊರೆಯುವ 39 ಲಕ್ಷ ಹಣವನ್ನು ಜೋಸೆಫ್​ ಇಬ್ರಾಹಿಂ ಹಾಗೂ ಆತನ ಇಬ್ಬರು ಮಕ್ಕಳು ಹಂಚಿಕೊಳ್ಳುವಂತೆ ಕೋರ್ಟ್​​ ಆದೇಶ ನೀಡಿದೆ.

ಮಹಿಳೆ ಸಾವಿಗೆ ಕಾರಣವೇನು?

ಬ್ಲೆಸ್ಸಿ ಟಾಮ್​ ಮೂಲತಃ ಕೇರಳದ ಕೊಲ್ಲಂ ಜಿಲ್ಲೆಯವರು. ಇವರು ಶರ್ಜಾ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ನರ್ಸ್​​ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2015ರ ನವೆಂಬರ್​ ತಿಂಗಳಲ್ಲಿ ಬ್ಲೆಸ್ಸಿ ಸ್ತನ ಕ್ಯಾನ್ಸರ್​ಗೆ ತುತ್ತಾದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ವೈದ್ಯರು ಆಕೆಗೆ ಟೆಸ್ಟ್​ ಮಾಡದೆ ಆಂಟಿಬಯೋಟಿಕ್​ ಇಂಜೆಕ್ಷನ್​​ನ್ನು ಟಾಮ್​ಗೆ ನೀಡಿದ್ದಾರೆ. ಆಂಟಿ ಬಯೋಟಿಕ್​ ಡ್ರಗ್​ ಆಗಿ ರಿಯಾಕ್ಷನ್​ ಆಗಿದೆ. ಇದರಿಂದಾಗಿ ಟಾಮ್​ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದಾದ ಬಳಿಕ ಟಾಮ್ ಅವರನ್ನು ಶರ್ಜಾ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಟಾಮ್​ ಮೃತಪಟ್ಟಿದ್ದಾರೆ. ಆಸ್ಪತ್ರೆಯ ವೈದ್ಯರು ಟಾಮ್​ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಟಿಫಿಕೇಟ್​ ನೀಡಿದ್ದರು.

ಘಟನೆಯ ಬಳಿಕ ಶರ್ಜಾ ಆಸ್ಪತ್ರೆಯ ಡಾಕ್ಟರ್​ ನಾರಾಯಣ್​ ಅರಬ್​ ಸಂಸ್ಥಾನವನ್ನು ತೊರೆದಿದ್ದರು. ಜೂನ್ 17 ರಂದು ನಾರಾಯಣ್​ ಅವರು ತಪ್ಪಿತಸ್ಥರೆಂದು ಸತ್ಯಾಂಶ ಬಯಲಾಗಿದೆ. ಮೃತ ಮಹಿಳೆ ಟಾಮ್​ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕೋರ್ಟ್​ ಆದೇಶ ನೀಡಿದೆ. ಆದರೆ ಅರಬ್ ರಾಷ್ಟ್ರ ತೊರೆದಿರುವ ಡಾಕ್ಟರ್ ನಾರಾಯಣ್​ ಭಾರತದಲ್ಲಿ ನೆಲೆಸಿದ್ದಾರೆ. ಇನ್ನೂ ಸಹ ಅರಬ್​ಗೆ ಹಿಂದಿರುಗಿಲ್ಲ ಎನ್ನಲಾಗಿದೆ. ಪ್ರಕರಣ ಸಂಬಂಧ ನಾರಾಯಣ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಕೀಲರೊಬ್ಬರು ತಿಳಿಸಿದ್ದಾರೆ. ಆದರೆ ಪ್ರಾಣಕ್ಕೆ ಬೆಲೆಯಾಗಿ ಅಥವಾ ವೈದ್ಯರ ತಪ್ಪಿಗಾಗಿ 39 ಲಕ್ಷ ಹಣವಾದರೂ ಸಿಕ್ಕಿದೆ.