ಸುವಾಸನೆಯಿಂದ ಕೂಡಿದ ಸಬ್ಬಸಿಗೆ ಸೊಪ್ಪು, ಅಧಿಕ ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವವನ್ನು ಒಳಗೊಂಡಿದೆ. ಈ ಸೊಪ್ಪುನ್ನು ಬಳಸಿ ನಾನಾ ತರಹದ ಅಡುಗೆಗಳಿಗೂ ಬಳಕೆಯಾಗುತ್ತದೆ. ಅದರಲ್ಲಿ ಸಬ್ಬಸ್ಗೆ ಸೊಪ್ಪಿನ ತಂಬುಳಿ ಆರೋಗ್ಯಕ್ಕೂ ಒಳ್ಳೆಯದು. ಸಬ್ಬಸ್ಗೆ ಸೊಪ್ಪಿನ ತಂಬುಳಿ ಸೇವಿಸುವುದರಿಂದ ತಾಯಂದಿರ ಎದೆ ಹಾಲು ಹೆಚ್ಚಾಗುವುದು ಹಾಗೂ ಜೀರ್ಣಕ್ರಿಯೆ ಸರಾಗವಾಗಿ ನಡೆದು ಮಲಬದ್ದತೆ ಸಮಸ್ಯೆ ಉಂಟಾಗುವುದಿಲ್ಲ.
Also read: ಸಬ್ಬಸಿಗೆ ಸೊಪ್ಪಿನಲ್ಲಿ ಇರುವ ಆರೋಗ್ಯಕರ ಗುಣಗಳು ಗೊತ್ತಾದ್ರೆ ಪ್ರತಿ ದಿನ ಅದನ್ನೇ ಉಪಯೋಗಿಸ್ತಿರಾ…!
ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇರುವುದರಿಂದ ಮಕ್ಕಳು ಮತ್ತು ಬಾಣಂತಿಯರಿಗೆ ಉತ್ತಮ ಆಹಾರ. ಬಾಣಂತಿಯರಿಗೆ ಎದೆ ಹಾಲು ಹೆಚ್ಚಿಸಲು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಸಬ್ಬಸ್ಗೆ ಸೊಪ್ಪು ಪಚನಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಅಷ್ಟೇ ಅಲ್ಲದೆ ನರಗಳಿಗೆ ಶಕ್ತಿಯನ್ನು ನೀಡುತ್ತದೆ, ನಿಮ್ಮ ದೈನಂದಿನ ಅಡುಗೆಯಲ್ಲಿ ಈ ಸೊಪ್ಪನ್ನು ಬಳಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ. ಬನ್ನಿ ಸಬ್ಬಸ್ಗೆ ಸೊಪ್ಪಿನ ತಂಬುಳಿ ಹೇಗೆ ಮಾಡುವುದೆಂದು ತಿಳಿಯೋಣ.
Also read: ದಿನನಿತ್ಯ ಬಳಸುವ ಸಬ್ಬಸಿಗೆ ಸೊಪ್ಪಿನಲ್ಲಿ ಅಡಗಿರುವ ೧೦ ಆರೋಗ್ಯಕರ ಲಾಭಗಳು…!
ಬೇಕಾಗುವ ಸಾಮಗ್ರಿಗಳು
- ಎರಡು ಕಟ್ಟು ಸಬ್ಬಸ್ಗೆ
- ತುಪ್ಪ
- ಜೀರಿಗೆ
- 4 ಕಾಳುಮೆಣಸು
- ಒಂದು ಬಟ್ಟಲು ಹಸಿ ಕೊಬ್ಬರಿ
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
- ಬಾಣಲೆಗೆ ಒಂದು ಚಮಚ ತುಪ್ಪ ಹಾಕಿಕೊಳ್ಳಿ. ತುಪ್ಪ ಕಾದನಂತರ 4 ಮೆಣಸಿನಕಾಳು ಮತ್ತು ಸ್ವಲ್ಪ ಜೀರಿಗೆ ಹಾಕಿ ಕೊಳ್ಳಿ.
- ಈಗ ಇದಕ್ಕೆ ಎರಡು ಕಟ್ಟಿನಷ್ಟು ಬಿಡಿಸಿ ತೊಳೆದುಕೊಂಡು ಸಬ್ಬಸ್ಗೆ ಯನ್ನು ಹಾಕಿ ಮೂರು ನಿಮಿಷಗಳ ಕಾಲ ಈ ತುಪ್ಪದಲ್ಲೇ ಸೋಬ್ಬನ್ನು ಬಾಡಿಸಿಕೊಳ್ಳಬೇಕು.
- ಈಗ ಇದಕ್ಕೆ ಒಂದು ಲೋಟ ನೀರನ್ನು ಹಾಕಿ 8 ರಿಂದ 9 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಬೇಕು.
- ಕುದಿಸಿದ ಸಬ್ಬಸ್ಗೆ ಯನ್ನು ತಣ್ಣಗಾಗಲು ಬಿಡಿ.
- ಈಗ ಒಂದು ಮಿಕ್ಸಿ ಜಾರಿಗೆ ಬೇಯಿಸಿದ ಸಬ್ಬಸ್ಸಿಗೆ ಹಾಕಿ ಇದಕ್ಕೆ ಒಂದು ಬಟ್ಟಲು ಹಸಿ ಕೊಬ್ಬರಿ ಮತ್ತು ಉಪ್ಪನ್ನು ಹಾಕಿ ರುಬ್ಬಿಕೊಳ್ಳಿ.
- ರುಬ್ಬಿರುವ ಮಿಶ್ರಣಕ್ಕೆ ಒಂದು ಬಟ್ಟಲು ಮೊಸರನ್ನು ಹಾಕಿ. ಈಗ ಒಂದು ಸಣ್ಣ ಬಾಣಲೆಗೆ ತುಪ್ಪ ಜೀರಿಗೆ ಒಗ್ಗರಣೆಯನ್ನು ಹಾಕಿ.
- ಈಗ ಸಬ್ಬಸ್ಗೆ ಸೊಪ್ಪಿನ ತಂಬುಳಿ ಸವಿಯಲು ಸಿದ್ದ.