ಕಣ್ಣು ಕೊಟ್ಟ ಪ್ರಿಯತಮನನ್ನೇ ಮರೆತ ಇವಳು ಪ್ರಾಣಕ್ಕೆ ಪ್ರಾಣ ಕೊಡೊ ಗೆಳೆಯನ್ನನು ಮರೆಯಲ್ಲ ಅನ್ನೋದಕ್ಕೆ ಏನ್ ಗ್ಯಾರೆಂಟಿ..!

0
1286

ಒಂದು ಕಾಲೇಜಿನಲ್ಲಿ ಒಬ್ಬ ಹುಡುಗ ಮತ್ತು ಹುಡಿಗಿ ಪ್ರೀತಿ ಮಾಡುತ್ತಿದ್ದರು, ಇಬ್ಬರಿಗೂ ಪರಸ್ಪರ ಅಘಾದವಾದ ಪ್ರೀತಿ ಬೆಳೆದಿತ್ತು..

ಒಮ್ಮೆ ಹುಡುಗಿ ತನ್ನ ಕುಟುಂಬದೊಂದಿಗೆ ಯಾತ್ರೆಗೆ ತೆರಳಿದ್ದಾಗ, ಅವರ ಕಾರ್ ಅಪಘಾತಕೀಡಾಗಿತ್ತು. ಬೇರೆಯವರಿಗೆ ಅಲ್ಪ ಸ್ವಲ್ಪ ಗಾಯಗಳಾದರೂ, ಹುಡುಗಿಯ ಎರಡು ಕಣ್ಣು ಅಪಘಾತದಲ್ಲಿ ಕಳೆದುಕೊಂಡಿದ್ದಳು..

ಆ ಹುಡುಗನಿಗೆ ಈ ವಿಷಯ ಕೇಳಿ ತುಂಬಾ ಆಘಾತವಾಗಿತ್ತು, ಅವಳನ್ನು ಎರಡು ತಿಂಗಳುಗಳ ಕಾಲ ಆರೈಕೆ ಮಾಡಿ ಅವಳು ಸಂಪೂರ್ಣ ಚೇತರಿಕೆಯಾಗುವ ತನಕ ನೋಡಿಕೊಂಡಿದ್ದ..

ಆ ಹುಡುಗನಿಗೆ ಇವಳ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ, ಆ ಹುಡುಗಿಯ ಪೋಷಕರಿಗಿಂತಲೂ ಇವಳ ದಿನ ನಿತ್ಯದ ಕೆಲಸಗಳನ್ನು ಮಾಡುತ್ತಿದ್ದ..

ಆಕೆ ಚೇತರಿಕೆಯಾದರು ತನ್ನ ಕುರುಡುತನವನ್ನು ಒಪ್ಪಿಕೊಂಡಿರಲಿಲ್ಲ, ಸದಾ ಬೇಜಾರಲಿದ್ದು ಖಿನ್ನತೆಗೆ ಹೋಗಿದ್ದಳು, ಇದನ್ನು ಆ ಹುಡುಗನಿಗೆ ಸಹಿಸಲು ಆಗುತ್ತಲೇ ಇರಲಿಲ್ಲ..

ಒಂದು ದಿನ ಆಸ್ಪತ್ರೆಯಿಂದ ಈ ಹುಡುಗಿಯ ತಂದೆಗೆ ಕರೆ ಬಂತು, “ನಿಮ್ಮ ಮಗಳಿಗೆ ನಾವು ಆಪರೇಷನ್ ಮಾಡಬಹುದು, ಯಾರೋ ಒಬ್ಬರು ಕಣ್ಣು ದಾನ ಮಾಡಿದ್ದಾರೆ” ಕುಟುಂಬದವರಿಗೆಲ್ಲ ಖುಷಿಯಾಯಿತು..

ಆಪರೇಷನ್ ನಂತರ ಆ ಹುಡುಗಿಗೆ ಕಣ್ಣು ಕಾಣಲಾರಂಭಿಸಿತು, ಅವಳು ಖಿನ್ನತೆಯಿಂದ ಹೊರಬಂದು. ತುಂಬಾ ಸಂತೋಷಗೊಂಡು ತನ್ನ ಪ್ರಿಯಕರನನ್ನು ಭೇಟಿಯಾಗಲು ಹೋದಳು..

ಈ ಹುಡುಗನಿಗೆ ಇವಾಗ ಕಣ್ಣು ಇರಲಿಲ್ಲ. ಈ ಹುಡುಗಿ ಅವನನ್ನು ನೋಡಿ, “ನಿನಗೆ ಕಣ್ಣು ಇಲ್ಲವ, ನಾನು ನಿನ್ನೊಂದಿಗೆ ಇರಲು ಇಷ್ಟವಿಲ್ಲ, ನನಗೆ ನೀನು ಬೇಡ” ಎಂದು ಹೇಳಿ ಹೊರಟು ಹೋದಳು..

ಆ ಹುಡುಗನಿಗೆ ಅತೀವ ಸಂಕಟವಾಗಿತ್ತು, ಅವನು ವಾಟ್ಸಪ್ಪ್-ನಲ್ಲಿ”ನೀನು ನನಗೆ ಸಿಗದಿದ್ದರೂ ಪರವಾಗಿಲ್ಲ, ನನ್ನ ಕಣ್ಣ ಮೂಲಕ ನೀನು ಪ್ರಪಂಚ ನೋಡುತಿದ್ದೀಯಾ, ಅದನ್ನು ಹುಷಾರಿಗಿ ಕಾಪಾಡಿಕೋ” ಎಂದು ಒಂದು ಚಿಕ್ಕ ಧ್ವನಿ ಸಂದೇಶ ಕಳಿಸಿದ..

ಸ್ನೇಹಿತರೆ, ಕೆಲುವೊಮ್ಮೆ ಸನ್ನಿವೇಶಗಳು ಬದಲಾದಂತೆ ಮನುಷ್ಯರೂ ಬದಲಾಗುತ್ತಾರೆ.. ನಾವು ಮಾಡಿದ ಸಹಾಯ ನಮಗೆ ಮುಳುವಾಗಬಹುದು, ಈ ಕ್ರೂರ ಪ್ರಪಂಚದಲ್ಲಿ ಕ್ರತಜ್ಞರು ಕಡಿಮೆ…