ಶ್ರೀ |ಶ್ರೀ |ಸಮರ್ಥ ಸದ್ಗುರು ಸದಾನಂದ ಬಾಬಾರ ಮಹಿಮೆ..

0
1459

ಕಲಿಯುಗದ ಕಾಮಧೇನು ಮತ್ತು ಕಲ್ವವೃಕ್ಷದಂತಿರುವ ಶ್ರೀ ಸದಾನಂದ ಬಾಬಾರವರನ್ನು ಧೃಢನಂಬಿಕೆ, ವಿಶ್ವಾಸ ಮತ್ತು ವಿನಮ್ರ ಭಕ್ತಿಯಿಂದ ಆರಾಧಿಸಿ ಅವರ ಆಶೀರ್ವಾದದ ವಿಶೇಷ ಲಾಭ ಪಡೆದು ಜೀವನ ಸಾರ್ಥಕ ಮಾಡಿಕೊಂಡು ಸದಾ ಆನಂದನಯವಾಗಿರಿ.

ಜೈಸದಾನಂದ್ಮಹಾರಾಜ್

ಶ್ರೀ ಸದಾನಂದ ಬಾಬಾ ಅವರು ಅಖಿಲಾಂಡ ಕೋಟಿ ಬ್ರಹ್ಹಾಂಡ್ನಾಯಕರಾದ ಶ್ರೀ ಗುರುದತ್ತಾತ್ರೇಯ ಅವತಾರಿಗಳು. ಸರ್ವದೇವತಾಸ್ವರೂಪರು. ಅದ್ಭುತ ಮಹಾಪುರುಷರು. ಜನರಲ್ಲಿ ಭಕ್ತಿ ಬೀಜಗಳನ್ನೆಟ್ಟು, ಧರ್ಮ ಜಾಗೃತಿಯನ್ನುಂಟುಮಾಡಿ ಜನರ ಬಾಳಿ ನಗು ಸಾಧನೆಗೆ ದಾರಿದೀಪವಾಗಿದ್ದಾರೆ. ಭಕ್ತರ ಹೃದಯದಲ್ಲಿ ಸುಪ್ರತಿಷ್ಠಿತರಾದ, ಬಾಬಾರ ಮಹಿಮೆ ಒಂದೇ !! ಎರಡೇ !!ಅಪಾರ !! ಅಘಾದ ಮತ್ತು ಅನಂತ. ಗುರುವೆಂದರೆ ಪರಮಾತ್ಮ, ಅಂತೆಯೇ ಬಾಬಾರವರು ಭಕ್ತರಮಾರ್ಗದರ್ಶನಕ್ಕಾಗಿ ಮಾನವರೂಪದಲ್ಲಿ ಬಂದಿರುವ ದತ್ತಾವತಾರಿಗಳು.

ಶ್ರೀ ಬಾಬಾರವರ ಹುಟ್ಟು, ತಂದೆ ತಾಯಿ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲವಾದರೂ ಬಲ್ಲಮೂಲಗಳಿಂದ ತಿಳಿದಿರುವ ಪ್ರಕಾರ ಬಾಬಾರು ಗುಲ್ಬರ್ಗ ಜಿಲ್ಲೆಯ, ಸುರಪುರ ತಾಲೂಕಿನ, ಪರಸನಹಳ್ಳಿಯವರೆಂದು ಚರಿತ್ರೆಯಲ್ಲಿ ಉಲ್ಲೇಖಿತವಾಗಿದೆ. ಇವರು ಎಲ್ಲ ಮಕ್ಕಳಂತಲ್ಲದೆ ವಿಚಿತ್ರ ಸ್ವಭಾವದವರಾಗಿದ್ದರು ಬಾಲಕ ಬಾಬಾ ಬಾಲ್ಯದಲ್ಲೇ ಚಮತ್ಕಾರಗಳನ್ನು ಮಾಡಿ ಊರಿನ ಜನರನ್ನು ಆಶ್ಚ್ಯರ್ಯ ಚಕಿತರನ್ನಾಗಿ ಮಾಡುತಿದ್ದರು. ಬಾಲಕ ಬಾಬಾರವರು ಸುರಪುರದ ಸಮೀಪದ ಗುಡ್ಡುಗಾಡು, ಅರಣ್ಯ, ಗುಹೆಗಳಲ್ಲಿ ವಾಸಿಸುತ್ತಿದ್ದರು. ಒಮ್ಮೆ ಅವರ ಮೈಯಲ್ಲಿ ಬೇನೆ ಬಂದಾಗ ದತ್ತಗುರು, ವೃದ್ಧನರೂಪದಲ್ಲಿ ಬಂದು, ಬಾಲಕ ನಶುಶ್ರುಷೆಮಾಡಿ, ಸಂಪೂರ್ಣ ಗುಣಮುಖರಾದ ಬಳಿಕ ವೃದ್ಧನ ರೂಪದಿಂದ ದತ್ತಾವತಾರಿಗಳಾಗಿದರು ಶನ ನೀಡಿ, ಬಾಲಕನ ನಾಲಿಗೆಯ ಮೇಲೆ ಮೂರು ಬೆರಳನ್ನಿಟ್ಟು “ನೀನು ಈ ದಿನದಿಂದ ನುಡಿಯುವ ಪ್ರತಿಯೊಂದು ಮಾತು ಸತ್ಯವಾಗಲಿ” ಎಂದು ಪ್ರೇಮ ಪೂರ್ವಕವಾಗಿ ಆಶೀರ್ವದಿಸಿ, ಅಂತರ್ಧಾನರಾದರು. ಬಾಬಾರ ನಾಲಿಗೆ ಮೇಲೆ ದತ್ತಾತ್ರೇಯನ ಮೂರು ಬೆರಳಿನ ಗುರುತು ಇತ್ತು, ಆದರೆ ಸಾಮಾನ್ಯವಾಗಿ ಅದು ಯಾರ ಕಣ್ಣಿಗೂ ಕಾಣುತ್ತಿರಲಿಲ್ಲವೆಂದು ಹೇಳುತ್ತಾರೆ.

ನಂತರ ಅವರ ಪ್ರಯಾಣ ಮುಂದಕ್ಕೆ ಸಾಗಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿದ್ಧ ಪರ್ವತ ಪ್ರಾಂತ್ಯಕ್ಕೆ ಬಂದು , ಆ ಪರ್ವತದ ಮೇಲಿರುವ “ಬಗಳಾoಬಿಕದೇವಿ” ದೇವಸ್ಥಾನದಲ್ಲಿ ವಾಸಿಸ ತೊಡಗಿ, ದೇವಿಯ ಸಾನಿಧ್ಯದಲ್ಲೆ ಇದ್ದರು, ಈ ಪ್ರಕಾರವಾಗಿ ಬಾಲಕ ನಿರುವಾಗಲೇ ದೇವಿಯ ಆಶೀರ್ವಾದದಿಂದ, ಶ್ರೀದತ್ತಾತ್ರೇಯರ ದಿವ್ಯ ಶಕ್ತಿಪಡೆದು, ಸಿದ್ಧ ಪುರುಷರೆನಿಸಿಕೊಂಡ ದತ್ತಾವತಾರಿ ಬಾಬಾರವರು ಸರ್ಪರೂಪಿಗಳು ಹೌದು.

ಶ್ರೀ ಬಾಬಾರ ಅಮೃತವಾಣಿ
* ನೂರಾರು ಮೈಲಿ ದೂರದಿಂದ ಭಕ್ತರು ಹೇಳಿದ್ದು ಕೇಳತೈತಿ, ನಮಸ್ಕಾರ ಮಾಡಿದ್ದು ತಿಳಿತೈತಿ.
* ನಿತ್ಯ ಆರತಿಗೆ ಬಾ, ಎಲ್ಲ ಚಲೋ ಆಗತೈತಿ
* ಭಕ್ತಿ ವಿಶ್ವಾಸ ಇಟ್ಟನಡೀರಿ ಎಲ್ಲ ಒಳ್ಳೆದ ಆಗತೈತಿ
* ಒಮ್ಮೆ ಸದಾನಂದನ ಗಾಡಿ ಹತ್ತಿದ್ರ ಇನ್ನೆಂದೂ ಚಿಂತಿ ಇಲ್ಲ
* ನೀ ನನ್ನ ಕಡೆಗ ಮನ ಕೊಡು ನಾನಿನ್ನ ಕಡೆಕೊಡ್ತೇನಿ
* ನಾ ಇದ್ದಾಗ ಚಾರಾಣಿ (ನಾಲ್ಕಾಣೆ), ಗವಿಗೆಹೋದ್ಮೇಲೆಬಾರಾಣಿ ( ಹನ್ನೆರಡಾಣೆ )

ಹಿಡಿದವನುನಕ್ಕಾನು … ಬಿಟ್ಟವನುಅತ್ತಾನು..

ಶ್ರೀ ದತ್ತ ಗುರು ಸದಾನಂದ ಬಾಬಾರವರು ತೋರಿಸಿದ ಭಕ್ತಿ ಮಾರ್ಗ ಮಾನವ ಜೀವನದಲ್ಲಿ ಬಹು ಪ್ರಮುಖ ಪಾತ್ರವಹಿಸುತ್ತದೆ. ಆ ಭಕ್ತಿ ಮಾರ್ಗದಲ್ಲಿ ನಡೆದರೆ ಆ ಭಕ್ತನ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ, ಆರೋಗ್ಯದ ಜೊತೆ ಸಿರಿ ಸಂಪತ್ತು ಸದಾತುಂಬಿರುತ್ತದೆ. ಅದೇ ಭಕ್ತಿ ಮಾರ್ಗ ಬಿಟ್ಟವನು ತಾಳ್ಮೆ, ಸಹನೆ ಮತ್ತು ವಿಶ್ವಾಸಗಳನ್ನು ಕಳೆದುಕೊಂಡು, ತನ್ನ ಆಸೆ ಅಪೇಕ್ಷೆಗಳನ್ನು ಧೀಡಿರಾಗಿ ಪಡೆಯುವ ಉದ್ದೇಶದಿಂದ ಅನ್ಯಮಾರ್ಗಹಿಡಿದು, ಅನೇಕ ದೇವರುಗಳ ಪೂಜೆ, ಜಪ, ತಪ, ಹರಕೆ, ದುಬಾರಿ ವೆಚ್ಚದ ಹೋಮ ಹವನ ಹಾಗೂ ಮಂಡಲ ಪೂಜೆಗಳಿಗೆ ದಾಸನಾಗಿ, ವಿವಿಧಮೋಸ, ಕಷ್ಟಗಳಿಗೆ ಸಿಲುಕಿ ಅಳುತ್ತಾನೆ. ಆದ್ದರಿಂದ ಈ ಭಕ್ತಿ ಮಾರ್ಗದ ಚಿತ್ರಣ ತಿಳಿದು,” ಶ್ರೀಸದ್ಗುರುಸದಾನಂದರಒಲುಮೆ, ಸಕಲದೈವದಬಲ ” ಎಂದುನಂಬಿ, ಏಕ ದೇವೋಪಾಸಕರಾಗಿ ಜೀವನ ಪಾವನ ಮಾಡಿಕೊಳ್ಳೋಣ.

ಶ್ರೀ ಸದಾ ನಂದ ಬಾಬಾರ ಆರತಿಯ ಮಹಿಮೆ

“ನಿತ್ಯ ಆರತಿಗೆ ಬಾ ಎಲ್ಲ ಚಲೋ ಆಗತೈತಿ” ಎಂದು ಬಾಬಾರವರು ಹೇಳುತ್ತಿದ್ದರು, ಅದರಂತೆಯೇ ಆರತಿಗೆ ಬಂದು ಆಯುರಾರೋಗ್ಯದ ಜೊತೆ ತಮ್ಮ ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಂಡಿರುವ ಭಕ್ತರಸಂಖ್ಯೆ ಅಪಾರವಾಗಿದೆ. ಶ್ರೀಸದ್ಗುರು ಸದಾನಂದರ ಆರತಿಯು “ಏಕ ರೂಪ ದತ್ತನ ಆರತಿಯೇ ಆಗಿದೆ. ಈ ದಿವ್ಯ ಆರತಿಯಲ್ಲಿ ಪಾಲ್ಗೊಳ್ಳುವುಧು ಅನೇಕ ವರ್ಷಗಳ ಜಪತಪಗಳನ್ನು ಮಾಡಿ ಪಡೆದ ಫಲಗಳಿಗೆ ಸಮನಾಗಿರಿತ್ತದೆ. ಆದ್ದರಿಂದ ಇಂಥ ಮಹಾಮಹಿಮನ ಆರತಿಗೆ ಬಂದು ಜೀವನ ಸಾರ್ಥಕ ಮಾಡಿಕೊಳ್ಳಿ”

ಶ್ರೀ ಸದಾನಂದ ಬಾಬಾರ ಪ್ರಸಾದದ ಮಹಿಮೆ.

ಶ್ರೀ ಗುರುವಿಗೆ ನೈವೇದ್ಯೆ ಎಂದು ನೀಡಿದ್ದೆ ಮಹಾಪ್ರಸಾದ. ಶ್ರೀ ಸದಾನಂದ ಬಾಬಾರ ಪ್ರಸಾದದ ಮಹಿಮೆ ಸ್ವೀಕರಿಸಿದವನ್ನೇ ಬಲ್ಲ. ಈ ಪ್ರಸಾದವನ್ನು ಪ್ರೀತಿಯಿಂದ ಸ್ವೀಕರಿಸುವುದರಿಂದ ಎಲ್ಲ ರೀತಿಯ ರೋಗರುಜನಿಗಳು ಮಾಯವಾಗುವವು. ಈ ಕಲಿಯುಗದಲ್ಲಿ ತೀರ್ಥಪ್ರಸಾದದಿಂದಲೇ ಭಯಂಕರವಾದ ಕಾಯಿಲೆಗಳನ್ನು ವಾಸಿಮಾಡುವ ಸಮರ್ಥ ಗುರು ಶ್ರೀಸದಾನಂದರು.” ಆಶ್ರಮದ ತೀರ್ಥಪ್ರಸಾದ ಸೇವಿಸುವುದರಿಂದ ಗಂಟಲಿನ ಕ್ಯಾನ್ಸರ್ಮತ್ತಿತರ ವೈದ್ಯರ ಲೋಕದಲ್ಲಿ ವಾಸಿ ಮಾಡಲಾಗದ ಕಾಯಿಲೆಗಳು ವಾಸಿಯಾಗುತ್ತವೆ” ಎನ್ನುತ್ತಿದ್ದರು ಶ್ರೀಬಾಬಾರವರು. ಇದು ವಿಚಿತ್ರವೆನಿಸಿದರೂ ಸತ್ಯ. ಅಂತೆಯೇ ಅನೇಕ ರೀತಿಯ ರೋಗಗಳನ್ನು ನಿವಾರಿಸಿಕೊಂಡು ಸುಖಮಯ ಜೀವನ ನಡೆಸುತ್ತಿರುವ ಭಕ್ತರ ಸಂಖ್ಯೆ ಅಪಾರವಾಗಿದೆ.

ಶ್ರೀಸದ್ಗುರು ಸದಾನಂದ ಮಹಾರಾಜರು ೧೯೬೮ ಇಸ್ವಿಯಲ್ಲಿ ಬೆಂಗಳೂರಿಗೆ ಪಾದಾರ್ಪಣೆ ಮಾಡಿದರು. ಶ್ರೀಯುತ ಬಿ.ಡಿ.ಜಟ್ಟಿಯವರು ಬಾಬಾರ ಆರಾಧಕರು, ಅವರೇ ಬಾಬಾರನ್ನು ಬೆಂಗಳೂರಿಗೆ ಕರೆತಂದರು, ಭಕ್ತರ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚಾಗಿದ್ದರಿಂದ ಪ್ರತ್ಯೇಕ ಬಾಬಾರ ಆಶ್ರಮ ನಿರ್ಮಾಣದ ಅಗತ್ಯವಾಯ್ತು. ಅದಕ್ಕಾಗಿ ಯೋಗ್ಯ ಸ್ಥಳದ ಶೋಧ ನಡೆಯಿತು. ಕಡೆಗೆ ಗುರುಗಳ ಇಚ್ಚೆಯಂತೆ ಮತ್ತು ಅವರ ಅನುಗ್ರಹದಿಂದ ಬೆಂಗಳೂರಿನ ಚಕ್ರವರ್ತಿ ಲೇಔಟ್ನಲ್ಲಿ ೧೯೮೫ರಲ್ಲಿ ಆಶ್ರಮ ನಿರ್ಮಾಣವಾಯಿತು.

ಬಾಬಾರವರು ೧೨-೨-೧೯೯೬ ಮಾಘ ಮಾಸದ ಸೋಮವಾರ ಅಷ್ಠಮಿ ನಕ್ಷತ್ರದ ಪರಮ ಪಾವನ ಪುಣ್ಯ ದಿನದಂದು ಮಧ್ಯಾಹ್ನ ೧.೧೦ ಸಮಯದಲ್ಲಿ, ಊದ್ವಶ್ವಾಸವನ್ನೆಳೆದರು ಮತ್ತು ವಿಶ್ವದಲ್ಲಿ ಐಕ್ಯರಾದರು. ಬಾಬಾರ ಸಮಾಧಿ ಸ್ಥಳ ಧಾರವಾಡ ಜಿಲ್ಲೆಯ ರಾಯಪುರ ಆಶ್ರಮದಲ್ಲಿದೆ.

ಆಶ್ರಮದಲ್ಲಿ ಪ್ರಸಕ್ತ ಕೆಳಗಿನ ಕಾರ್ಯಗಳು ಬಹು ಶಿಸ್ತಿನಿಂದ ನಡಿಯುತ್ತವೆ,
೧) ಆಶ್ರಮದಲ್ಲಿ ಪ್ರತಿಷ್ಠಿತ ಗಣಪತಿ, ಶ್ರೀದತ್ತಾತ್ರೇಯ ಸ್ವಾಮಿ, ಈಶ್ವರನ ಲಿಂಗ ಹಾಗೂ ಶ್ರೀಸದಾನಂದ ಬಾಬಾರ ಭಾವ ಚಿತ್ರಗಳಿಗೆ ಪ್ರತಿ ನಿತ್ಯ ಬೆಳಿಗ್ಗೆ ವಿಶೇಷ ಪೂಜೆ ನಡಿಯುತ್ತದೆ.
೨) ಪ್ರತಿನಿತ್ಯ ಪ್ರತ್ಯೇಕವಾಗಿ ಇರಿಸಿದ ಶ್ರೀಸದ್ಗುರುಗಳು ಆರತಿಗೆ ಕೂರುತ್ತಿದ್ದ, ಪೀಠಕ್ಕೆ ಮಧ್ಯಾಹ್ನ ಮತ್ತು ಸಾಯಂಕಾಲ ಪೂಜೆ ಮಾತು ಭಜನೆಯ ಆರತಿ ಕಾರ್ಯಕ್ರಮಗಳು ನಡಿಯುತ್ತವೆ.
೩) ಪ್ರತಿನಿತ್ಯ ಆರತಿ ತರುವಾಯ ಬಂದ ಭಕ್ತರಿಗೆಲ್ಲಾ ಮಧ್ಯಾಹ್ನ ಮತ್ತು ಸಾಯಂಕಾಲ ಅನ್ನ ಪ್ರಸಾದದ ವಿನಿಯೋಗವಾಗುವುದು.
೪) ವರ್ಷದಲ್ಲಿ ಬರುವ ಮಹಾಶಿವರಾತ್ರಿ, ಶ್ರೀ ಸದಾನಂದ ನವಮಿ, ಗುರುಪೌರ್ಣಿಮೆ ಮತ್ತು ದತ್ತ ಜಯಂತಿ ಉತ್ಸವ ಅತೀ ವಿಜೃಂಬಣೆಯಿಂದ ನಡಿಯುತ್ತದೆ.

Address:
2nd Main Rd, Chandavarkar Layout,
Vasanth Nagar, Bengaluru, Karnataka 560051
Phone: 098441 16912

ಈಕೆಳಗಿನಲಿಂಕ್ಸ್ಅಲ್ಲಿಬಾಬಾರಮಹಿಮೆಮತ್ತುಪವಾಡಗಳವಿಡಿಯೋಗಳಿವೆ

 

ಭಕ್ತ ಬಂಧುಗಳೇ, ನಾವು ಈ ಲೇಖನಿಯ ಮೂಲಕ ವಿನಂತಿಸಿ ಕೊಳ್ಳುವುದೇನೆಂದರೆ, ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಾಬಾರದರು ಶನಪಡೆದು, ಕೃತಾರ್ಥರಾಗಿ, ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಇಂದ ಇದ್ದು, ಕೈಲಾದವರ ಸಹಾಯ ಮಾಡಿ, ಮೋಕ್ಷ ಸಾಧನೆಯಡೇ ಹೆಜ್ಜೆ ಹಾಕಿ.
ಎಲ್ಲರಿಗೂ ಶುಭವಾಗಲಿ.
ಸರ್ವೇಜನಃಸುಖಿನೋಭವಂತು
ಸಮಸ್ತಸನ್ಮoಗಳಾನಿಭವಂತು

ಜೈಸದಾನಂದ