ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ: ಯುಜಿಸಿಯಿಂದ ವೇತನ ಹೆಚ್ಚಳ; ಕೇಂದ್ರ ಸರ್ಕಾರದಿಂದ ಎಲ್ಲಾ ರಾಜ್ಯಗಳ ಕುಲಪತಿಗಳಿಗೆ ಸೂಚನೆ..

0
583

ಬಹುದಿನಗಳಿಂದ ನೆನೆಗುಂದಿಗೆ ಬಿದಿದ್ದ ಅತಿಥಿ ಉಪನ್ಯಾಸಕರ ವೇತನದ ನಿಗದಿಗೆ ಇಂದು ತೆರೆಕಂಡಿದು, ಯುಜಿಸಿ ರಾಜ್ಯ ಸರಕಾರಕ್ಕೆ ಕನಿಷ್ಟ ವೇತನ ನಿಗದಿಪಡಿಸುವಂತೆ ಸೂಚಿಸಿದೆ. ಯುಜಿಸಿ ಸೂಚನೆಯ ಅನ್ವಯ ಪ್ರತಿ ದಿನಕ್ಕೆ 1500 ರೂ. ಅಥವಾ ಮಾಸಿಕ 50ಸಾವಿರ ರೂ. ವೇತನ ನಿಗದಿಪಡಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಇದರಿಂದ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸಂತಸ ಮೂಡಿದೆ.

ಹೌದು ಅತಿಥಿ ಉಪನ್ಯಾಸಕರ ವೇತನದ ಹೋರಾಟವು ಈಗಿನದಲ್ಲ ಈ ವಿಷಯವಾಗಿ ಎಷ್ಟೋ ಹೋರಾಟಗಳು ನಡೆದಿವೆ ಇದಕ್ಕೆ ಪ್ರತಿಕ್ರಿಯೆಯಾಗಿ ಇಷ್ಟು ದಿನ ಬರಿ ಬರವಸೆ ಕೆಳಿಬರುತ್ತಿತು ಆದರೆ ಈಗ ಯುಜಿಸಿ ಈ ನಿರ್ಣಯ ಮಾಡಿದ್ದು ಉಪನ್ಯಾಸಕರಿಗೆ ಹುಮ್ಮಸ್ಸು ಮೂಡಿಸಿದೆ.

ಯುಜಿಸಿ ಸೂಚನೆಯಲ್ಲೇನಿದೆ?

ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಕುಲಪತಿಗಳಿಗೆ ಸೂಚನೆ ನೀಡಿದರಂತೆ. ಅದರ ಪ್ರಕಾರ ಮಾಸಿಕ ಗರಿಷ್ಠ 50 ಸಾವಿರ ರೂವರೆಗೆ ವೇತನ ನೀಡಬೇಕಾಗುತ್ತದೆ. ಅಥವಾ ಪ್ರತಿ ದಿನಕ್ಕೆ 1500 ರೂ. ವೇತನ ನಿಗದಿಪಡಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಸದ್ಯದ ಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರು ಮಾಸಿಕ 9000 ರೂ.ಗಳಿಂದ 12,000 ರೂ. ಗೌರವಧನ ಪಡೆಯುತ್ತಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ವಯ ಯುಜಿಸಿಯ 537ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 14 ಸಾವಿರ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರ 11-14 ಸಾವಿರ ರೂ ಮಾಸಿಕ ಗೌರವ ಧನ ನೀಡುತ್ತಿದೆ.ಈ ಎಲ್ಲಾ ನಿಯಮಗಳು ಜನವರಿ 28ರಿಂದಲೇ ಅನ್ವಯವಾಗಲಿವೆ. ಮತ್ತು ಅತಿಥಿ ಉಪನ್ಯಾಸಕರಿಗೂ ಏಳನೇ ವೇತನ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಗೌರವ ಧನ ನೀಡಬೇಕೆಂದು ವಿವಿ ಧನ ಸಹಾಯ ಆಯೋಗ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಿಳಿಸಿತ್ತು.

ಶೇ 20 ರಷ್ಟು ಉಪನ್ಯಾಸಕರ ನೇಮಕಕ್ಕೆ ಅವಕಾಶ:

ಅತಿಥಿ ಉಪನ್ಯಾಸಕರನ್ನು ಬೇಕಾಬಿಟ್ಟಿ ನೇಮಕ ಮಾಡುವಂತಿಲ್ಲ, ವಿವಿಗಳು ಪ್ರತ್ಯೇಕ ಸಮಿತಿ ರಚಿಸಬೇಕು. ಕುಲಪತಿ ಅಥವಾ ಅವರು ಸೂಚಿಸಿದ್ದ ವ್ಯಕ್ತಿಯು ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ. ವಿಷಯ ತಜ್ಞ, ಆಯಾ ವಿಷಯ ಹಿರಿಯ ಡೀನ್, ವಿಭಾಗದ ಮುಖ್ಯಸ್ಥ, ಶೈಕ್ಷಣಿಕ ತಜ್ಞರು ಸಮಿತಿಯಲ್ಲಿರಬೇಕು. ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಿಸಬಹುದು ಅಥವಾ ವೇತನ ನಿಗದಿಪಡಿಸಬಹುದು ಎಂದು ಈ ಬಗ್ಗೆ ಯುಜಿಸಿ ಮಾರ್ಗಸೂಚಿಗಳಲ್ಲಿ ಮಂಜೂರಿ ಹುದ್ದೆಗಳ ಶೇ 20ರಷ್ಟನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಸಹಾಯಕ ಪ್ರೊಫೆಸರ್‌ಗಳ ನೇಮಕದ ಅರ್ಹತೆಯನ್ನೇ ಪರಿಗಣಿಸಬೇಕು. ಅಲ್ಲದೆ, ಸರಕಾರ ಹಾಗೂ ವಿವಿಯು ನೇಮಕಕ್ಕೆ ತಜ್ಞರ ಪ್ರತ್ಯೇಕ ಸಮಿತಿಗಳನ್ನು ರಚಿಸಬೇಕು ಎಂದು ಯುಜಿಸಿ ಸೂಚಿಸಿದೆ. ಆದರೆ, ಪಿಎಫ್‌ ಅಥವಾ ತುಟ್ಟಿ ಭತ್ಯೆಗೆ ಅರ್ಹರಲ್ಲ ಎಂದೂ ಹೇಳಿದೆ.

Also read: ಪ್ರಧಾನಿ ನರೇಂದ್ರ ಮೋದಿ ಇಂದು ಶಿಕ್ಷಕರಾಗಿ; ಮುಂದಿನ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಡಿದ ಭೋಧನೆ ಹೇಗಿತ್ತು ಗೊತ್ತಾ..?